ಬಿಪಿಎಲ್ ಕುಟುಂಬಕ್ಕೆ ಸರ್ಕಾರ 10 ಸಾವಿರ ಪರಿಹಾರ ಘೋಷಣೆಗೆ ಆಗ್ರಹ – ನರಸಿಂಹಮೂರ್ತಿ

ದಾವಣಗೆರೆ: ಲಾಕ್‌ಡೌನ್ ಅವಧಿಯಲ್ಲಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು 10ಸಾವಿರ ರೂ.ಗಳನ್ನು ಪರಿಹಾರವಾಗಿ ಘೋಷಣೆ ಮಾಡುವಂತೆ ಸ್ಲಂ ಜನಾಂದೋಲನ ಕರ್ನಾಟಕ ಸಮಿತಿಯ ರಾಜ್ಯ ಸಂಚಾಲಕ ನರಸಿಂಹಮೂರ್ತಿ ಹೇಳಿದರು.ಸ್ಲಂ ಜನಾಂದೋಲನ ಕರ್ನಾಟಕ ಸಮಿತಿ, ಸಾವಿತ್ರಿ ಬಾಪೂಲೆ ಮಹಿಳಾ ಸಂಘಟನೆ ದಾವಣಗೆರೆ ಜಿಲ್ಲಾ ಸಮಿತಿ, ಎಪಿಪಿಐ ಸಹಯೋಗದಲ್ಲಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಿಲ್ಲಾಪಂಚಾಯತಿ ಎದುರಿನ ವಿಮಾನ ಮಟ್ಟಿ ಚಾನಲ್ ಏರಿಯಾದಲ್ಲಿ ಕೋವಿಡ್ ಸಂಕಷ್ಟದಲ್ಲಿನ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಸೋಂಕಿಗೆ ಒಳಗಾದವರ ಚಿಕಿತ್ಸೆ ವೆಚ್ಚ ಸಂಪೂರ್ಣ ಸರ್ಕಾರವೇ ಭರಿಸಬೇಕು. ಸೋಂಕಿನಿಂದ ಮರಣಹೊಂದಿದವರ ಕುಟುಂಬಕ್ಕೆ ನೀಡುತ್ತೇವೆ ಎಂದು ಹೇಳಲಾಗಿರುವ 1 ಲಕ್ಷ ರೂ ಪರಿಹಾರವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು. ಸರ್ಕಾರವು ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್‌ಗಳು ತಾರತಮ್ಯದಿಂದ ಕೂಡಿದ್ದು, ಎಲ್ಲರಿಗೂ ಅನ್ವಯ ಆಗುವಂತೆ ಸರಿ ಸಮನಾದ ಪ್ಯಾಕೇಜ್ ಘೋಷಣೆ ಮಾಡಬೇಕೆಂದರು.
ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‌ಕುಮಾರ್ ಮಾತನಾಡಿ, ಕೋವಿಡ್‌ನಂತಹ ಸಾಂಕ್ರಮಿಕ ರೋಗದಿಂದಾಗಿ ಬಡತನ ಹೆಚ್ಚಾಗಿದ್ದು, ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ಜನರ ಜೀವನ ಕ್ರಮ ಬದಲಾಗವಿತರಿಸಲಾಯಿತುಿಯಾಗಿದ್ದ ಮನುಷ್ಯ ಇಂದು ಏಕಾಂಗಿಯಾಗಿ ಸ್ಲಂ ಜೀವನಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ. ಇಂತಹ ಸಂದರ್ಭದಲ್ಲಿ ಜನರ ಘನತೆಯ ಬದುಕನ್ನು ಕಟ್ಟಿಕೊಡುವುದು ಸರ್ಕಾರ ಜವಾಬ್ದಾರಿಯಾಗಿದ್ದು, ಸರ್ಕಾರದ ಜೊತೆಗೆ ಸಂಕಷ್ಟಕ್ಕೆ ಒಳಗಾಗ ಜನರ ಸಹಾಯಕ್ಕೆ ಬರಬೇಕಾಗಿರುವುದು ಮಾನವೀಯ ಸಮಾಜದ ನೈತಿಕ ಜವಾಬ್ದಾರಿಯೂ ಸಹ ಆಗಿದೆ ಎಂದರು.
ಅಂಕಿಅಂಶಗಳು ಪ್ರಕಾರ ಕೊರೋನಾ ಸೋಂಕಿನಿಂದ ಹಸಿವಿನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದ ಆತಂಕಕಾರಿ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಸ್ಲಂ ಜನಾಂದೋನ ಸಮಿತಿ ಇತರೆ ದಾನಿಗಳ ಸಹಾಯದಿಂದ ನೆರವಿಗೆ ಬಂದಿರುವುದು ಪ್ರಶಂಶನೀಯ ಎಂದರು.
ಸ್ಲಂ ಜನಾಂದೋಲನ ಕರ್ನಾಟಕದ ದಾವಣಗೆರೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಹಾವೇರಿ ಮಾತನಾಡಿ, ಮುಂಬರುವ ದಿನಗಳಲ್ಲಿ ಮಕ್ಕಳ ಮೇಲೆ ಬೀರಲಿರುವ ಕೋವಿಡ್‌ನ 3ನೇ ಅಲೆಗೂ ಮುನ್ನ ಎಲ್ಲರಿಗೂ ವಿಮೆಯ ಮೂಲಕ ಉಚಿತ ಚಿಕಿತ್ಸೆಗೆ ನೆರವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ ಶಬ್ಬೀರ್‌ಸಾಬ್, ಅಧ್ಯಕ್ಷೆ ಶಹೀನಾಬೇಗಂ, ಪದಾಧಿಕಾರಿಗಳಾದ ಸಾವಿತ್ರಮ್ಮ, ಬಾಲಪ್ಪ, ಸುಹೀಲ್‌ಭಾಷಾ ಮತ್ತು ಗೃಹ ಕಾರ್ಮಿಕರ ಸಂಘದ ಕಾರ್ಯದರ್ಶಿ ರಂಗಮ್ಮ, ಲಕ್ಷಿ ರಮೇಶ್ ಇತರರು ಇದ್ದರು.
ನಂತರ ಭಾಷಾ ನಗರದ ವಿವಿಧ ಭಾಗಗಳಲ್ಲಿನ ಸ್ಲಂ ನಿವಾಸಿಗಳಿಗೆ, ಹಮಾಲಿಗಳಿಗೆ ದಿನಸಿ ಕಿಟ್ ಹಾಗೂ ಮಾಸ್ಕ್ ವಿತರಿಸಲಾಯ