protest; ಬಸವಣ್ಣನವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿರುವುದಕ್ಕೆ ಖಂಡನೆ, ಪ್ರತಿಭಟನೆ

ಚನ್ನಗಿರಿ, ಅ. 17: ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ಗ್ರಾಮದಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದನ್ನು ಖಂಡಿಸಿ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ, ಪ್ರತಿಭಟನೆ (protest) ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮಿಗಳು ಮಾತನಾಡಿ, ಜಗಜ್ಯೋತಿ ಬಸವೇಶ್ವರರು ಜಗತ್ತು ಕಂಡ ಮಹಾನ್ ದಾರ್ಶನಿಕರಾಗಿದ್ದು ಅವರ ಅದರ್ಶಗಳನ್ನು ದೇಶ ವಿದೇಶಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇಡೀ ಜಗತ್ತು ಬಸವತತ್ವಕ್ಕೆ ಮಾರು ಹೋಗಿದೆ. ಆದರೆ ಅವರ ಬಾವಚಿತ್ರಕ್ಕೆ ಕನ್ನಡ ನಾಡಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ಖಂಡನೀಯ ವಿಚಾರವಾಗಿದೆ. ಅವರನ್ನು ಕೂಡಲೇ ಬಂದಿಸಿ ಗಡಿಪಾರು ಮಾಡಬೇಕು. ಬಸವಣ್ಣವರು ಇಡೀ ಜಗತ್ತಿಗೆ ಬೆಳಕನ್ನು ನೀಡಿದ್ದಾರೆ ಪ್ರಜಾಪ್ರಭುತ್ವದ ಮತ್ತು ಶಾಂತಿ ಸೌಹಾರ್ದತೆಯ ರೂವಾರಿಯಾಗಿದ್ದಾರೆ. ಅವರ ಪ್ರತಿಮೆಯನ್ನು ಇಂಗ್ಲೆಂಡಿನಲ್ಲಿ ಪ್ರತಿಷ್ಟಾಪಿಸಿ ಅವರ ತತ್ವವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಕಿಡಿಗೇಡಿಗಳು ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ್ದಾರೆ. ಇಂತಹ ಧರ್ಮದ್ರೋಹಿಗಳನ್ನು ಗಡಿಪಾರು ಮಾಡುವುದರ ಜೊತೆಗೆ ಮತ್ತೆ ಇಂತಹ ಕೃತ್ಯಗಳಿಗೆ ಕೈ ಹಾಕದಂತಹ ಶಿಕ್ಷೆ ನೀಡಬೇಕು. ಇಂತಹ ಕೃತ್ಯಗಳು ಮೇಲಿಂದ ಮೇಲೆ ನಡೆದರೆ ರಾಜ್ಯದಲ್ಲಿ ಶಾಂತಿ ಸಮಾಧಾನ ಕಾಣಲು ಸಾಧ್ಯವಿಲ್ಲ. ಸರಕಾರವು ಸೂಕ್ತ ಕ್ರಮವನ್ನು ಕೈಗೊಂಡು ಕೂಡಲೇ ಅವರನ್ನು ಬಂದಿಸಬೇಕು ಎಂದು ಆಗ್ರಹಿಸಿದರು.

ನಂತರ ಮಾತನಾಡಿದ ಸ್ವಾಮೀಜಿ, ಸಮಾನತೆ ಹರಿಕಾರರಾದ ಬಸವಣ್ಣನ ವಿಚಾರಧಾರೆಗಳ ಮೇಲೆ ಸಂವಿಧಾನವನ್ನೇ ರಚಿಸಲಾಗಿದೆ. 12ನೇ ಶತಮಾನದ ಶರಣರಲ್ಲಿ ಮುಂಚೂಣಿಯಲ್ಲಿದ್ದ ಇಂತಹ ಮಹಾನ್ ಪುರುಷರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿರುವುದು ನಾಗರಿಕರು ಹಾಗೂ ಸಮಾಜ ತಲೆ ತಗ್ಗಿಸುವಂತಹ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

valmiki; ವಾಲ್ಮೀಕಿ ಸಮಾಜದ ವತಿಯಿಂದ ಅಹೋರಾತ್ರಿ ಹೋರಾಟ

ಈ ಸಂದರ್ಭದಲ್ಲಿ ಕಂಚಿಗನಾಳ್ ರಾಜಪ್ಪ, ಬಸವ ಯುವ ಸೇನೆಯ ಅಧ್ಯಕ್ಷ ಪ್ರೀತಮ್, ಕಂಚಿಗನಾಳ್ ಮಂಜಪ್ಪ, ಪಾಂಡೋಮಟ್ಟಿ ಚಂದ್ರಪ್ಪ, ಧನುಂಜಯ ಮುಗಳೀಹಳ್ಳಿ ಮತ್ತು ಪಾಂಡೋಮಟ್ಟಿ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!