ಸೂಳೆಕೆರೆ ರಸ್ತೆ ಅಗಲಿಕರಣಕ್ಕೆ ಸ್ಫೋಟಕ ಬಳಸಿದ್ರಾ..? ಪರವಾನಿಗೆ ಯಾರಪ್ಪ ನೀಡಿದ್ರು ಅಂತೀದಾರೆ ನೆಟ್ಟಿಗರು

ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಾಂತಿ ಸಾಗರ (ಸೂಳೆಕೆರೆ) ಈಗಾಗಲೇ ಒತ್ತುವರಿ, ಹೂಳುತುಂಬಿಕೊಂಡು ಅಪಾಯದ ಅಂಚಿಗೆ ಸಿಲುಕಿದ್ದು, ಈಗ ರಸ್ತೆ ಅಗಲೀಕರಣ ಹೆಸರಲ್ಲಿ ಕೆರೆಯ ಪಕ್ಕದ ಜಾಗದಲ್ಲಿ ಜಿಲೆಟಿನ್ ಸಿಡಿಸುವ ಮೂಲಕ ಗುತ್ತಿಗೆದಾರರು ಮತ್ತಷ್ಟು ಕೆರೆಗೆ ಹಾನಿ ಮಾಡುತ್ತಿದ್ದಾರೆ.

ಕೆರೆಯ ಪಕ್ಕದ ಜಾಗದಲ್ಲಿ ರಸ್ತೆ ಅಗಲೀಕರಣ ಮಾಡಬೇಕೆಂದು ಅಲ್ಲಿರುವ ಗುಡ್ಡವನ್ನು ನೆಲಸಮಗೊಳಿಸಬೇಕಿರುವ ಅಗತ್ಯವಿರುವುದುದೇನೋ ಸತ್ಯ.‌ಆದರೆ, ಅದನ್ನು ಜೆಸಿಬಿ ಅಥವಾ ಕೂಲಿ ಕೆಲಸಗಾರರಿಂದ ಮಾಡಿಸಬಹುದಾಗಿದ್ದು, ಹಾಗೆ ಮಾಡದೆ ಗುತ್ತಿಗೆದಾರರು ಸ್ಪೋಟಕ ವಸ್ತುಗಳನ್ನು ಬಳಸಿ, ಪರಿಸರ ಹಾಳು ಮಾಡುವ ಜತೆಗೆ ಕೆರೆಗೆ ಮತ್ತಷ್ಟು ಹಾನಿಯುಂಟು ಮಾಡುತ್ತಿದ್ದಾರೆ. ಅಲ್ಲಿರುವ ಚಾನೆಲ್ ಗೂ ಇದು ಅಪಾಯವನ್ನು ತಂದೊಡ್ಡಿದೆ.

ಸ್ಪೋಟಕ ಬಳಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕ ವಲಯ ಜಿಲ್ಲಾಡಳಿತದ ವಿರುದ್ದ ಕಿಡಿಕಾರುತ್ತಿದೆ. ಸಾಮಾನ್ಯವಾಗಿ ಪರಿಸರ ಇಲಾಖೆ ಸ್ಪೋಟಕ ಬಳಸಲು ಪರವಾನಿಗೆ ನೀಡುವುದಿಲ್ಲ. ಹಾಗಿದ್ದರೂ ಗುತ್ತಿಗೆದಾರರು ಯಾರ ಪರವಾನಿಗೆ ಪಡೆದು ಸ್ಪೋಟಕ ಉಪಯೋಗಿಸಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

SEE BELOW BLASTING VIDEO

Leave a Reply

Your email address will not be published. Required fields are marked *

error: Content is protected !!