congress; ಪಕ್ಷದಲ್ಲಿನ ಸಾಂವಿಧಾನಿಕ ಹುದ್ದೆಗಳಿಗೆ ಅವಮಾನ, ರಾಜ್ಯಾಧ್ಯಕ್ಷರು ಇದರ ಬಗ್ಗೆ ಗಮನಹರಿಸಲಿ

ಪ್ರತಿಯೊಂದು ಪಕ್ಷವು ತನ್ನದೇ ಆದ ನೀತಿ, ನಿಯಮಗಳನ್ನು ಹೊಂದಿರುತ್ತದೆ ಅದರಂತೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ (Congress) ಪಕ್ಷವು ಸಹ ತನ್ನದೇ ಆದ ನಿಯಮವನ್ನು ಹೊಂದಿದ್ದು ಅದರಂತೆ ಪಕ್ಷ ಸಂಘಟನೆ ದೃಷ್ಟಿಯಿಂದ ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಹಾಗೂ ಸಮಿತಿಗಳನ್ನು ರಚಿಸಿ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಿರುತ್ತದೆ.

ಯಾವುದೇ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡುವಾಗ ಕ್ಷೇತ್ರದ ಕಾರ್ಯಕರ್ತರು ಹಾಗೂ ಅವರ ಪ್ರತಿನಿಧಿಗಳಾಗಿ ಬ್ಲಾಕ್ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಶಿಫಾರಸ್ಸನ್ನು ಪರಿಗಣಿಸುವುದು ಸಾಮಾನ್ಯ, ಆದರೆ ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದರೇ ಪಕ್ಷಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಬ್ಲಾಕ್, ಜಿಲ್ಲಾಧ್ಯಕ್ಷರುಗಳ ಅವಶ್ಯಕತೆ ಇದೆಯೇ???? ಎಂಬ ಅನುಮಾನ ಕಾರ್ಯಕರ್ತರಲ್ಲಿ ಮೂಡುತ್ತಿದೆ.

ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್ ಅಧ್ಯಕ್ಷರುಗಳ ಗಮನಕ್ಕೆ ತರದೇ, ವೈಯಕ್ತಿಕವಾಗಿ ತಾವೇ ಚುನಾವಣಾ ಅಭ್ಯರ್ಥಿಗಳು, ಹೈಕಮಾಂಡ್ ನಮಗೆ ಟಿಕೆಟ್ ನೀಡುತ್ತದೆ ಎಂದು ಯಾವ ನಾಯಕರಿಲ್ಲದೇ, ಒಂಟಿಯಾಗಿ ಕ್ಷೇತ್ರ ಸುತ್ತುತ್ತಿರುವುದನ್ನು ನೋಡಿದರೇ, ಪಕ್ಷಕ್ಕೆ ಸ್ಥಳೀಯವಾಗಿ ಸಂಘಟನೆ ಮಾಡಿದಂತಹ ಸಮಿತಿಗಳ ಅವಶ್ಯಕತೆ ಇಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿದೆ.

ಚುನಾವಣೆಗೆ ಸ್ಪರ್ಧಿಸಲು ಬಯಸುವುದು ಎಲ್ಲರ ಹಕ್ಕು ಇದರ ಬಗ್ಗೆ ಯಾರ ವಿರೋಧವು ಇಲ್ಲ. ಆದರೆ ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸುವವರು, ಆ ಪಕ್ಷದ ಜಿಲ್ಲಾ ಸಮಿತಿಯ ಅಥವಾ ಬ್ಲಾಕ್ ಸಮಿತಿಯ ಗಮನಕ್ಕೆ ತರಬೇಕಲ್ಲವೇ??? ಒಬ್ಬಂಟಿಯಾಗಿ ಸ್ಪರ್ಧಿಸುತ್ತೇನೆ ಇವರ ಯಾರ ಬೆಂಬಲವೂ ಬೇಡ ಎನ್ನುವುದಾದರೇ, ಪಕ್ಷೇತರರಾಗಿ ಸ್ಪರ್ಧಿಸುವ ಅವಕಾಶವು ಸಂವಿಧಾನದಲ್ಲಿದೆ ಅಲ್ಲವೇ????

ಕಳೆದ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ, ದೇಶ ವ್ಯಾಪ್ತಿ ಮೋದಿ ಅಲೆ ಇದ್ದಾಗ ಪಕ್ಷ ನೀಡಿದ ಸೂಚನೆಯಂತೆ ಚುನಾವಣೆಗೆ ಸ್ಪರ್ಧಿಸಿ ಕೆಲವೇ ದಿನಗಳ ಪ್ರಚಾರದಲ್ಲಿ 4 ಲಕ್ಷದ 90 ಸಾವಿರಕ್ಕೂ ಹೆಚ್ಚು ಮತ ಪಡೆದ, ಸುಮಾರು 25 ವರ್ಷಕ್ಕೂ ಹೆಚ್ಚು ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಿರುವ, ಬ್ಲಾಕ್ ಅಧ್ಯಕ್ಷರಾಗಿ, ಪ್ರಸ್ತುತ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಎಚ್.ಬಿ ಮಂಜಪ್ಪನವರಿಗಿಂತ ಸೂಕ್ತ ಅಭ್ಯರ್ಥಿ ಬೇಕೇ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡಿದೆ.

Eshwara Khandre; ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ನೀಡಿದ ಸಚಿವ

ಗೆಲ್ಲುವ ಅವಕಾಶವಿದ್ದಾಗ ಎಲ್ಲರೂ ಮುಂದೆ ಬರುತ್ತಾರೆ ಆದರೆ ಕಷ್ಟದ ಸಮಯದಲ್ಲಿ ಪಕ್ಷ ಸಂಘಟನೆ ಮಾಡಿ ಚುನಾವಣೆಗೆ ಸ್ಪರ್ಧಿಸಿ, ಸೋತಂತಹ ವ್ಯಕ್ತಿಗಳಿಗೆ, ಇಂತಹ ಸಮಯದಲ್ಲಿ ಅವಕಾಶ ನೀಡಿದರೇ ಪಕ್ಷದ ಕಾರ್ಯಕರ್ತರಲ್ಲೂ ಹಾಗೂ ಮುಖಂಡರಲ್ಲೂ ಸಹ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯ ಬಗ್ಗೆ ನಂಬಿಕೆ, ಧೈರ್ಯ ಬರುತ್ತದೆ ಅಲ್ಲವೇ???

ಅಂತಿಮವಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಲಿ ಆದರೆ ಸ್ಥಳೀಯ ಮುಖಂಡರ, ಕಾರ್ಯಕರ್ತರ, ಬ್ಲಾಕ್ ಹಾಗೂ ಜಿಲ್ಲಾ ಸಮಿತಿಗಳ ಜೊತೆ ಗುರುತಿಸಿಕೊಂಡು ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ನೀಡಲಿ ಎಂಬುದೇ ಕಾರ್ಯಕರ್ತರ ಬಯಕೆ.

ಪಕ್ಷ ಸಂಘಟನೆಯನ್ನು ಗೌರವಿಸುವ ಹಾಗೂ ಸದಾ ಪಕ್ಷಕ್ಕಾಗಿ ದುಡಿದವರ ಹಿತ ಕಾಪಾಡುವ ನಾಯಕ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇದರ ಬಗ್ಗೆ ಗಮನಹರಿಸಿ ಜಿಲ್ಲೆಯಲ್ಲಿರುವ ಗೊಂದಲಕ್ಕೆ ತೆರೆ ಎಳೆಯಬೇಕಾಗಿದೆ.

ಕೆ.ಎಲ್.ಹರೀಶ್ ಬಸಾಪುರ

Leave a Reply

Your email address will not be published. Required fields are marked *

error: Content is protected !!