ಕಾಂಗ್ರೆಸ್ ಪ್ರಣಾಳಿಕೆಗೆ ಗ್ಯಾರಂಟಿ ಇಲ್ಲ: ನಟಿ ಶೃತಿ

ಕಾಂಗ್ರೆಸ್ ಪ್ರಣಾಳಿಕೆಗೆ ಗ್ಯಾರಂಟಿ ಇಲ್ಲ: ನಟಿ ಶೃತಿ

ದೊಡ್ಡಬಳ್ಳಾಪುರ : ಕಾಂಗ್ರೆಸ್ ಪ್ರಣಾಳಿಕೆ ಜಾತಿ ಆಧಾರದ ಮೇಲೆ ಇದೆಯೇ ಹೊರತು ಎಲ್ಲ ವರ್ಗದ ಜನರ ಹಿತಕ್ಕಾಗಿ ಇಲ್ಲ. ಈ ಪ್ರಣಾಳಿಕೆ ಜಾರಿಗೆ ಯಾವುದೇ ಗ್ಯಾರಂಟಿಯು ಇಲ್ಲ ಎಂದು ಚಿತ್ರ ನಟಿ ಶೃತಿ ಹೇಳಿದ್ದಾರೆ.

ದೊಡ್ಡಬಳ್ಳಾಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಧೀರಜ್‌ಮುನಿರಾಜ್‌ ಪರವಾಗಿ ಅವರು ರೋಡ್ ಮೊ ನಡೆಸುವ ಮೂಲಕ ಮತಯಾಚನೆ ಮಾಡಿದರು. ದೊಡ್ಡಬಳ್ಳಾಪುರದಲ್ಲಿ ಬುಧವಾರ ರೋಡ್ ಷೋ ನಡೆಸುವ ಮೂಲಕ ಚಿತ್ರ ನಟಿ ಶೃತಿ ಬಿಜೆಪಿ ಅಭ್ಯರ್ಥಿ ಧೀರಜ್‌ಮುನಿರಾಜ್ ಪರ ಮತಯಾಚನೆ ಮಾಡಿದರು.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಡೀ ದೇಶದಲ್ಲಿಯೇ ರೈತರಿಗಾಗಿ ಪ್ರತ್ಯೇಕ ಬಜೆಟ್‌ ಮಂಡನೆ ಮಾಡುವ ಮೂಲಕ ರೈತರ ಏಳಿಗೆಗಾಗಿ ಶ್ರಮಿಸಿದ್ದರು. ಈಗಿನ ಡಬಲ್ ಎಂಜಿನ್ ಸರ್ಕಾರ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಹಾಕುವ ಮೂಲಕ ನೆರವಿಗೆ ನಿಂತಿದೆ. ಇಂದಿರಾ ಗಾಂಧಿ ಅವರ ಇದ್ದರು. ಗರೀಬಿ ಹಠಾವೋ ಕಾರ್ಯಕ್ರಮ ಪ್ರಮಾಣಿಕವಾಗಿ ಅನುಷ್ಠಾನವಾಗಿದ್ದರೆ ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಿಪಿಎಲ್‌ ಕಾರ್ಡ್‌ಗಳ ಮೂಲಕ 10 ಕೆ.ಜಿ ಅಕ್ಕಿ ವಿತರಣೆ ಘೋಷಣೆಯೇ | ಅಗತ್ಯ ಇರಲಿಲ್ಲ ಎಂದು  ಛೇಡಿಸಿದರು.

ಕಾಂಗ್ರೆಸ್ ಕಾರ್ಯಕ್ರಮಗಳು ಘೋಷಣೆಯಲ್ಲಿಯೇ ಉಳಿಯುತ್ತಿವೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹತಮದೊಂದಿಗೆ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಪ್ರಣಾಳಿಕೆಯಲ್ಲಿ ಮತದಾರರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುತ್ತದೆ. ಇದಕ್ಕಾಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಧೀರಜ್‌ಮುನಿರಾಜ್, ನಗರಸಭೆ ಸದಸ್ಯ ಎಂ.ಜಿ. ಶ್ರೀನಿವಾಸ್, ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!