congress; ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಸಂಪರ್ಕಿಸಲು ಪ್ರಯತ್ನ ಪಟ್ಟರೂ ನನಗೆ ಸಿಗಲಿಲ್ಲ: ಜಿ.ಬಿ.ವಿನಯ್‌ಕುಮಾರ್
ದಾವಣಗೆರೆ, ಅ.12: ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರೂ ನನಗೆ ಸಿಗಲಿಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯ ಕುಮಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರ, ರಾಜ್ಯದಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಲು ಅವಕಾಶವಿದೆ. ಆದ್ದರಿಂದ ಯಾರು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಸ್ಫರ್ಧಿಸಬಹುದು ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ನಿಲ್ಲಲು ಚಿಂತಿಸಿದ್ದೇನೆ. ಕಾಂಗ್ರೆಸ್ ಪಕ್ಷವು ಒಬ್ಬ ವ್ಯಕ್ತಿ, ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಟಿಕೆಟ್ ಕೇಳುವ ಅಧಿಕಾರವಿದೆ. ಯಾರಿಗೇ ಟಿಕೆಟ್ ಸಿಕ್ಕರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೆನೆ. ಜಿಲ್ಲೆಯಲ್ಲಿ ಒಬ್ಬಿಬ್ಬರು ನಾಯಕರಿಲ್ಲ. ಪಕ್ಷದ ಎಲ್ಲಾ ಮುಖಂಡರು, ಸರ್ವ ಸಮಾಜಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ನಾನು ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟಿಸುತ್ತಿದ್ದು, ನನಗೆ ಟಿಕೆಟ್ ಸಿಕ್ಕರೆ ಗೆಲ್ಲುವೆನೆಂಬ ಸಾವಿರ ಪಟ್ಟು ಆತ್ಮವಿಶ್ವಾಸವಿದೆ ಎಂದರು.
bhadra dam; ಆಫ್ ಅಂಡ್ ಆನ್ ಪದ್ಧತಿ ರದ್ದುಗೊಳಿಸಲು ಡಿಕೆಶಿ ಬಳಿ ರೈತರ ಮನವಿ
ನಾನು ಈಗಾಗಲೇ ನನ್ನ ಇನ್‌ಸೈಟ್ ಸಂಸ್ಥೆ ಮೂಲಕ ದೇಶಕ್ಕೆ ಸಾವಿರಾರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೊಟ್ಟಿದ್ದೇನೆ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ಕೊಟ್ಟು ನನ್ನದೇ ರೀತಿಯಲ್ಲಿ ಸಮಾಜಸೇವೆ ಮಾಡುತ್ತಿದ್ದೇನೆ. ಪಕ್ಷಕ್ಕೆ ನನ್ನ ಸೇವೆ ಏನು ಎಂಬುದಾಗಿ ಪ್ರಶ್ನಿಸುವವರು ಸಮಾಜಕ್ಕೆ ಅವರ ಕೊಡುಗೆ ಏನೆಂಬುದನ್ನು ತಿಳಿಸಲಿ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಕೂಡ ಟಿಕೆಟ್ ಆಕಾಂಕ್ಷಿಯಾಗಿರುವುದರಿAದ ನನ್ನ ವಿರುದ್ಧ ಮಾತನಾಡುವುದು ಸಹಜ. ಪಕ್ಷದ ಜಿಲ್ಲಾಧ್ಯಕ್ಷರು, ಸಚಿವರು, ಶಾಸಕರನ್ನು ಭೇಟಿಯಾಗಿ ಬೆಂಬಲ ಕೋರುತ್ತೇನೆ ಎಂದು ಅವರು ನುಡಿದರು.
ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವಂತೆ ನಾನು ಸಂಘಟನೆ ಮಾಡುತ್ತಿದ್ದೇನೆ. ನನ್ನನ್ನು ಟೀಕಿಸುವವರು ಸಹ ಟಿಕೆಟ್ ಕೇಳಲಿ. ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತದೋ ಅಂತಹವರ ಗೆಲುವಿಗೆ ಶ್ರಮಿಸಬೇಕಾದ್ದು ಎಲ್ಲರ ಕರ್ತವ್ಯ. ನಾನೊಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ನನ್ನಂತೆ ಬೇರೆಯವರೂ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟನೆ ಮಾಡಲಿ. ಜನರ ಒಲವು ಇರುವವರಿಗೆ ಟಿಕೆಟ್ ಸಿಗುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದರು.
******
ಜನರ ಸಮಸ್ಯೆ, ಕಷ್ಟ ಅರಿಯುವ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 2 ಕುಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕೆಂದಿದ್ದೇನೆ. ಮೊದಲ ಹಂತದಲ್ಲಿ ಹರಿಹರ ತಾಲೂಕಿನ ಗಡಿ ಗ್ರಾಮವಾದ ಕೊಪ್ಪ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದೇನೆ. ಅ.12ರಂದು ಸಂಜೆ 7 ಗಂಟೆಗೆ ಹೊರಡಲಿದ್ದು, ಅ.13ರಂದು ಅಲ್ಲಿನ ಜನರೊಂದಿಗೆ ಸಂವಾದ, ಸಭೆ ನಡೆಸುತ್ತೇನೆ.
-ಜಿ.ಬಿ.ವಿನಯ ಕುಮಾರ್, ಕಾಂಗ್ರೆಸ್ ಲೋಕಸಭಾ ಟಿಕೆಟ್ ಆಕಾಂಕ್ಷಿ