ಕೊರೊನಾ, ಒಮಿಕ್ರಾನ್ ಹಿಮ್ಮೆಟ್ಟಿಸು ದೇವರೇ: ಬಕ್ಕೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ವೀರಶೈವ ಮಹಿಳಾ ಘಟಕ…!
ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿದೆ. ವಾರದಿಂದೀಚೆಗೆ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿಂದೆ ಎರಡು ಅಲೆಯಿಂದಾಗಿ ಜನರ ಜೀವನಕ್ಕೆ ತುಂಬಾ ಹೊಡೆತ ಬಿದ್ದಿದೆ. ಜೊತೆಗೆ
ತತ್ತರಿಸಿ ಹೋಗಿದ್ದಾರೆ. ಈ ಬಾರಿಯೂ ಮತ್ತೆ ಕೋವಿಡ್ ಆರ್ಭಟ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ವೀರಶೈವ ಮಹಿಳಾ ಘಟಕದ ನೇತೃತ್ವದಲ್ಲಿ ದೇವರ ಮೊರೆ ಹೋಗಿದೆ. ಕೊರೊನಾ ಮತ್ತು ಒಮಿಕ್ರಾನ್ ಸೋಂಕು ಹಿಮ್ಮೆಟ್ಟಬೇಕು ಹಾಗೂ ಲೋಕ ಕಲ್ಯಾಣಾರ್ಥವಾಗಿ ನಗರದ ಶ್ರೀ ಗುರು ಬಕ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನು ಶ್ರೀ ಗುರು ಬಕ್ಕೇಶ್ವರ ಸ್ವಾಮಿ ದೇವರಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ, ಉಡಿ ಕೊಡಲಾಯಿತು. ಎಲ್ಲಾ ರೀತಿಯಲ್ಲಿಯೂ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಮಕ್ಕಳು, ಯುವಕರು, ಯುವತಿಯರು,
ಮಹಿಳೆಯರು ಹಾಗೂ ಪುರುಷರಿಗೂ ಸೋಂಕು ಹರಡುತ್ತಿದೆ. ಕೊರೊನಾ ಸೋಂಕಿನ ನಡುವೆ ಈಗ ಒಮಿಕ್ರಾನ್ ಸಹ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶ್ರೀ ಗುರು ಬಕ್ಕೇಶ್ವರ ಸ್ವಾಮಿ ಈ ಸೋಂಕು ಹರಡದಂತೆ ತಡೆಯಬೇಕು ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿರುವುದಾಗಿ ಘಟಕದ ಪ್ರಮುಖರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಮಹಿಳಾ ಘಟಕದ ಪ್ರಮುಖರಾದ ಶೋಭಾ ಕೊಟ್ರೇಶ್, ದ್ರಾಕ್ಷಾಯಿಣಿ ಅಂದನಪ್ಪ, ಮಂಜುಳಾ ಅನು ಅಣಬೂರು ಮಠ, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಕೊಟ್ರಮ್ಮ, ಅನ್ನಪೂರ್ಣಮ್ಮ, ಶಕುಂತಲಮ್ಮ ಬಸಪ್ಪ ಇನ್ನು ಮತ್ತಿತರರು ಪಾಲ್ಗೊಂಡಿದ್ದರು.