ಜಿಲ್ಲೆಯಲ್ಲಿ ನಿತ್ಯ 15 ರಿಂದ 20 ಜನ ಸಾವು: ಜಿಲ್ಲಾಡಳಿತ ಸಾವಿನ ಲೆಕ್ಕ ತೋರಿಸುವುದು ಮಾತ್ರ ಎರಡು, ಮೂರು – ಡಿ ಬಸವರಾಜ್

ದಾವಣಗೆರೆ: ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಆಸ್ಪತ್ರೆ, ಬೆಡ್‌ಗಳು, ಆಕ್ಸಿಜನ್, ವೆಂಟಿಲೇಟರ್ ಹಾಗೂ ಔಷಧೋಪಚಾರುಗಳು ಸರ್ಕಾರದಿಂದ ಸಿಗದೇ ಬಡಜನತೆ ಲಕ್ಷಾಂತರ ಸಂಖ್ಯೆಯಲ್ಲಿ ಹಾದಿ ಬೀದಿಗಳಲ್ಲಿ ಸಾವಿಗಿಡಾಗಿದ್ದಾರೆ. ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಡುವುದು ಎಷ್ಟು ಸರಿಯೆಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಸರ್ಕಾರವನ್ನು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು  ಜಿಲ್ಲೆಯಲ್ಲಿ ನಿತ್ಯ 15 ರಿಂದ 20 ಜನ ಸಾವನ್ನಪ್ಪುತ್ತಿದ್ದಾರೆ. ಆದರೆ  ಜಿಲ್ಲಾಡಳಿತ ಸಾವಿನ ಲೆಕ್ಕ ತೋರಿಸುವುದು ಮಾತ್ರ ಎರಡು, ಮೂರು ಇದರಿಂದ ನೊಂದ ಜನರಿಗೆ ಅನ್ಯಾಯ ಮಾಡುವ ಕೆಲಸ  ನಿರಂತರವಾಗಿ ನಡೆಯುತ್ತಿದೆ. ಕೋವಿಡ್ ವರದಿಯಲ್ಲಿ ನೆಗಟಿವ್ ಬಂದರೂ ಸಹ ಸಿಟಿ ಸ್ಕಾö್ಯನ್‌ನಲ್ಲಿ ಶ್ವಾಸಕೋಶಕ್ಕೆ ಆಗಿರುವುದು ಗೊತ್ತಾಗುತ್ತದೆ. ಇದನ್ನ ಕೋವಿಡ್ ಎಂದು ದಾಖಲು ಮಾಡುವುದೇ ಇಲ್ಲ. ಸಿಟಿ ಸ್ಕಾö್ಯನ್ ವರದಿಯಲ್ಲಿ ಸ್ಪಷ್ಟವಾಗಿ ಬರೆದಿರುತ್ತಾರೆ. ಮೈಲ್ಡ್ ಕೋವಿಡ್ ಎಂದು ಇದೇ ಕಾರಣದಿಂದ ನೂರಾರು ಬಡಕುಟುಂಬಗಳು ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತ ಆಗಲಿವೆ. ಆಸ್ಪತ್ರೆಗಳಲ್ಲಿ ವ್ಯಕ್ತಿ ಸತ್ತ ಮೇಲೆ ನಾನ್‌ಕೋವಿಡ್ ಅಂತ ಶವ ಕೊಟ್ಟಿರುತ್ತಾರೆ. ನಂತರ ವರದಿ ನೋಡಿದರೆ ಪಾಸಿಟಿವ್ ಇದ್ದ ಎಷ್ಟೊ ನಿದರ್ಶನಗಳಿವೆ. ಈಗ ರಾಜ್ಯ ಸರ್ಕಾರ ಕೋವಿಡ್‌ನಿಂದ ಸಾವನ್ನಪ್ಪಿದ ಓರ್ವ ಸದಸ್ಯರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಪರಿಹಾರ ಎಂದು ಹೇಳಿರುವುದು ಸರಿಯಲ್ಲ. ಕೋವಿಡ್‌ನಿಂದ

ಸಾವನ್ನಪ್ಪಿದ ಎಲ್ಲಾರಿಗೂ ಪರಿಹಾರ ನೀಡಬೇಕು. ಕೋವಿಡ್ ಮೊದಲ ಅಲೆ ಮತ್ತು ಎರಡನೇ ಅಲೆಯಲ್ಲಿ ಸತ್ತವರಿಗೂ ಪರಿಹಾರ ನೀಡಬೇಕು. ಈಗಾಗಲೇ ಸುಪ್ರಿಂ ಕೋಟ್ ಸಹ ಕೋವಿಡ್‌ನಿಂದ ಸಾವನ್ನಪ್ಪಿದವರಿಗೆ ವಿಪತ್ತು ನಿರ್ವಹಣೆ ಕಾಯ್ದೆ 2005ರ ಅಡಿ ಪ್ರತಿ ವ್ಯಕ್ತಿಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವ ವಿಚಾರವಾಗಿ ಸಲ್ಲಿಕೆಯಾದ ಎರಡು ಅರ್ಜಿಗಳ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚನೆ ನೀಡಿದೆ. ಆದರೆ ಈ ಬಗ್ಗೆ ಮೋದಿ ಸರ್ಕಾರ ಒಂದು ತಿಂಗಳಾದರೂ ಸುಪ್ರೀಂ ಕೋರ್ಟ್ಗೆ ಇಲ್ಲಿಯವರೆಗೂ ಉತ್ತರಿಸಿಲ್ಲ.  ಕೋವಿಡ್‌ನಿಂದ ಸಾವನ್ನಪ್ಪಿರುವ ಮನೆಯವರಿಂದ ಜಿಲ್ಲಾಡಳಿತ ಅರ್ಜಿ ಕರೆದರೆ ಸತ್ಯಾಂಶ ಹೊರಬರಲಿದೆ ಜಿಲ್ಲಾಡಳಿತ ಕಳೆದ 15 ತಿಂಗಳಿಂದ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ ಕೇವಲ 455 ಎಂದು ಲೆಕ್ಕ ನೀಡಿದೆ. ನಿಜ ಸಂಗತಿಯೆನೆಂದರೆ ದಾವಣಗೆರೆ ಜಿಲ್ಲೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕೋವಿಡ್‌ನಿಂದ ಮೃತರಾಗಿದ್ದಾರೆ. ಕೋವಿಡ್‌ನಿಂದ ಮೃತರಾದ ವ್ಯಕ್ತಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರ ದ್ರೋಹ ಬಗೆಯಲು ಹೊರಟಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ದಿನೇಶ್ ಕೆ ಶೆಟ್ಟಿ, ಪಾಲಿಕೆ ಸದಸ್ಯರುಗಳಾದ ಎ.ನಾಗರಾಜ್,ಕೆ.ಚಮನ್ ಸಾಬ್,ಮಂಜುನಾಥ್ ಗಡಿಗುಡಾಳ್, ಅಬ್ದುಲ್ ಲತೀಫ್,ಹುಲ್ಮನಿ ಗಣೇಶ್,ಹೆಚ್.ಸುಭಾನ್ ಸಾಬ್,ಡಿ.ಶಿವಕುಮಾರ್ ಇದ್ದರು.

 

Leave a Reply

Your email address will not be published. Required fields are marked *

error: Content is protected !!