ಕೊವಿಡ್ ನಿಯಮಾವಳಿಯೊಂದಿಗೆ ಜುಲೈ.೧ ಕ್ಕೆ ಪತ್ರಕರ್ತರ ದಿನಾಚರಣೆ

 

ದಾವಣಗೆರೆ.ಜೂ.೨೯;  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜುಲೈ.೧ ರಂದು ಪತ್ರಿಕಾದಿನಾಚರಣೆ ಆಯೋಜಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧ್ಯಕ್ಷರಾದ ವೀರಪ್ಪ ಎಂ ಭಾವಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಜೂ.೧ ರಂದು  ಬೆಳಗ್ಗೆ 8-30 ಕ್ಕೆ ನಗರದ ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿರುವ ಹರ್ಡೆಕರ್ ಮಂಜಪ್ಪ ವೃತ್ತದಲ್ಲಿ ಕೊವಿಡ್ ನಿಯಮಾವಳಿಗಳೊಂದಿಗೆ ಸರಳವಾಗಿ ಪತ್ರಿಕಾ ದಿನಾಚರಣೆ ಮಾಡಲಾಗುವುದು ಎಂದರು.

ಮೇಯರ್ ಎಸ್.ಟಿ. ವೀರೇಶ್ ಹರ್ಡೆಕರ್ ಮಂಜಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಉಪ ವಿಭಾಗಾಧಿಕಾರಿ

ಮಮತಾ ಹೊಸಗೌಡರ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದ್ದಣ್ಣ, ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರರಾದ ಪುನೀತ್ ಆಪ್ತಿ, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಚಂದ್ರಣ್ಣ ಆಗಮಿಸಲಿದ್ದಾರೆ.ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೀರಪ್ಪ ಎಂ ಭಾವಿ ಅಧ್ಯಕ್ಷತೆ ವಹಿಸಲಿದ್ದಾರೆ.  ಕಳೆದ ಬಾರಿಯೂ ಕೊವಿಡ್ ಕಾರಣದಿಂದ ಸಾಂಕೇತಿಕವಾಗಿ ಪತ್ರಿಕಾ ದಿನ ಆಚರಿಸಲಾಗಿತ್ತು.ಈ ಬಾರಿಯೂ ಕೊವಿಡ್ ಕಾರಣದಿಂದ ಸರ್ಕಾರದ ನಿಯಮಾವಳಿಯಂತೆ ಆಚರಿಸಲಾಗುವುದು.ಇದೇ ವೇಳೆ ಸಂಘದಿಂದ ಐಡಿ ಕಾರ್ಡ್ ಗಳನ್ನು ಸದಸ್ಯರಿಗೆ ನೀಡಲಾಗುವುದು .ಕೊವಿಡ್ ನಿಂದ ಮರಣಹೊಂದಿದ ಪತ್ರಕರ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಲಾಗಿದೆ.ಅತೀ ಶೀಘ್ರದಲ್ಲೇ ಪರಿಹಾರ ದೊರಕುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಇ.ಎಂ ಮಂಜುನಾಥ್, ಸಮಿತಿಯ ಪದಾಧಿಕಾರಿಗಳಾದ ಹೆಚ್.ಎಂ.ಪಿ ಕುಮಾರ್, ಸತೀಶ್ ಇದ್ದರು.

Leave a Reply

Your email address will not be published. Required fields are marked *

error: Content is protected !!