ct ravi; ಸಚಿವ ರಾಮಲಿಂಗಾ ರೆಡ್ಡಿ ತಲೆಕೆಟ್ಟವರು: ಸಿ ಟಿ ರವಿ

ದಾವಣಗೆರೆ, ಅ.06: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಲೆಕೆಟ್ಟವರು. ತಲೆಕೆಟ್ಟವರು ಹೀಗೆ ಮಾತಾಡಲ್ಲ, ಅವರು ಹಿರಿಯರು ತಲೆಕಟ್ಟವರಂತೆ ಮಾತಾಡಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ ಟಿ ರವಿ (CT Ravi) ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಗಿಗುಡ್ಡ ಘಟನೆಯಲ್ಲಿ ಸರ್ಕಾರ ಮಾರ್ಜಾಲ ನ್ಯಾಯ ರೀತಿ ವರ್ತನೆ ಮಾಡುತ್ತಿದೆ. ಬೆಕ್ಕಿಗೆ ಪಂಚಾಯತಿ ಒಪ್ಪಿಸಿದ್ರೆ ಏನು ಮಾಡಿತ್ತೊ ಅದೇ ರೀತಿ ಮಾಡುತ್ತಿದೆ. ಔರಂಗಜೇಬ ಮತ್ತು ಟಿಪ್ಪು ಪೋಟೋ ಹಾಕಿ ವೈಭವೀಕರಣ ಮಾಡಲಾಗಿದೆ. ಇದೇ ಗಲಭೆಗೆ ಕಾರಣವಾಗಿದೆ ಎಂದು ಹೇಳಿದರು.

ಮತಾಂಧರಂತೆ ವರ್ತನೆ ಮಾಡುವವರ ಮೇಲೆ ಕ್ರಮ‌ಕೈಗೊಳ್ಳಬೇಕಿತ್ತು. ದೌರ್ಜನ್ಯಕ್ಕೊಳಗಾದವರ ಮೇಲೆ ಕೇಸ್ ಹಾಕಿದೆ. ಈ ಮೂಲಕ ಇಬ್ಬರ ಮೇಲು‌ ಕೇಸ್ ಹಾಕಿದ್ದೇವೆ ಎನ್ನುತ್ತಿದೆ. ಇದರಿಂದ ಮತಾಂಧತೆಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

drought; 4860 ಕೋಟಿ ರೂ. ಬೆಳೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಾಯ: ಮುಖ್ಯಮಂತ್ರಿ

ಅಧಿಕಾರ ಇಲ್ಲವೆಂದರೆ ಕೆಲವರಿಗೆ ಉಸಿರು ಕಟ್ಟತ್ತೆ

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂಬ ಎಸ್ ಟಿ‌ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅಧಿಕಾರ ಇಲ್ಲವೆಂದರೆ ಕೆಲವರಿಗೆ ಉಸಿರು ಕಟ್ಟತ್ತೆ. ಎಸಿ ರೂಮ್ ಲ್ಲಿದ್ದರೆ ವಾತಾವರಣ ಚೆನ್ನಾಗಿರುತ್ತದೆ. ಇವರಿಗೆ ಯಾವಾಗಲು ಅಧಿಕಾರದಲ್ಲಿರಬೇಕು ಅಂದ್ರೆ ಎಲ್ಲವು ಚನ್ನಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಸರಿ ಅಂದ್ರೆ ಆಗಲ್ಲ

ಬಿಜೆಪಿ ನಕಲಿ‌ ಹಿಂದುಗಳು ಎಂಬ ಹೇಳಿಕೆಗೆ ಕಿಡಿಕಾರಿದ ಅವರು, ಹೌದು ನಾವು ನಕಲಿ ಹಿಂದು ಗಳು ಅದಕ್ಕೆ ತಿಲಕ ಇಟ್ಟುಕೊಳ್ಳುತ್ತೇವೆ. ಕೇಸರಿ ಪೇಟ ತೊಟ್ಟುಕೊಳ್ಳುತ್ತೇವೆ. ಅಸಲಿ ಹಿಂದುಗಳು ತಿಲಕ‌ ಮತ್ತು ಪೇಟ ಧರಿಸಲು ಹಿಂಜರಿಯುತ್ತಾರೆ. ಟೋಪಿಯಾದರೆ ಇಷ್ಟಪಟ್ಟು ಹಾಕಿಕೊಳ್ಳುತ್ತಾರೆ. ಕೇಸರಿ ಅಂದ್ರೆ ಇವರಿಗೆ ಆಗಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!