ಪೆಟ್ರೋಲ್ ಬಂಕ್ ಮುಂಭಾಗ ಕ್ರೆಡಿಟ್ ಕಾರ್ಡ್ ಕೊಳ್ಳುವ ಮುನ್ನ ಗ್ರಾಹಕರೇ ಎಚ್ಚರ…….

ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಹಾವಳಿ ಹೆಚ್ಚಾಗಿದ್ದು, ಎಲ್ಲಾ ಬ್ಯಾಂಕಗಳು ತಮ್ಮ ಗ್ರಾಹಕರಿಗೆ ಅವರ ಅರ್ಹತೆ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ನೀಡುವುದು ಸಾಮಾನ್ಯವಾಗಿದೆ, ಈ ಹಿಂದೆ ಬ್ಯಾಂಕುಗಳು ಕೆಲವೇ ಕೆಲವು ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ನೀಡುತ್ತಿದ್ದರು ಆದರೆ ಈಗ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಕ್ರೆಡಿಟ್ ಕಾರ್ಡ್ ನೀಡಲು ಬ್ಯಾಂಕ್ ಗಳು ತಾ ಮುಂದು ನಾ ಮುಂದು ಎಂಬಂತೆ ಮುಗಿಬೀಳುತ್ತಿದ್ದಾರೆ.

ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಗ್ರಾಹಕರು ಎಚ್ಚರದಿಂದ ಇರಬೇಕು ಎಂಬುದಕ್ಕೆ ಇಂದು ನಗರದಲ್ಲಿ ನಡೆದ ಒಂದು ನಿದರ್ಶನ ಸಾಕ್ಷಿಯಾಗಿದೆ, ನಗರದ ಹೃದಯ ಭಾಗದಲ್ಲಿರುವ ಕೆಇಬಿ ಸರ್ಕಲ್ ನಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಕ್ರೆಡಿಟ್ ಕಾರ್ಡ್ ಸಿಬ್ಬಂದಿ ಹಾಗೂ ಗ್ರಾಹಕರು ಜಗಳ ಮಾಡುತ್ತಿದ್ದದ್ದು ಕಂಡುಬಂತು.

SBI ಬ್ಯಾಂಕ್ ಸಹಯೋಗದೊಂದಿಗೆ ಖಾಸಗಿ ಏಜೆನ್ಸಿ ಒಂದು ಪೆಟ್ರೋಲ್ ಬಂಕ್ ಗೆ ಬರುವ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ನೀಡಿತ್ತು, ಕ್ರೆಡಿಟ್ ಕಾರ್ಡ್ ನೀಡುವಾಗ ವಾರ್ಷಿಕ 499 ರೂಗಳು ಮಾತ್ರ ನೀಡಬೇಕು ಜೀರೋ ಮೆಂಟೇನೆನ್ಸ್ ಎಂದು ಹೇಳಿ ಉಪಯೋಗಿಸಿದ ಹಣ ಮಾತ್ರ ನಿಗದಿತ ಸಮಯಕ್ಕೆ ನೀಡಬೇಕು ಎಂದು 6 ತಿಂಗಳ ಹಿಂದೆ ಮಹಿಳಾ ಗ್ರಾಹಕರೊಬ್ಬರಿಗೆ ಕ್ರೆಡಿಟ್ ಕಾರ್ಡ್ ನೀಡಲಾಗಿತ್ತು. ಆದರೆ ಆ ಮಹಿಳೆ ಕ್ರೆಡಿಟ್ ಕಾರ್ಡ್ ನಿಂದ ಕಳೆದ ಆರು ತಿಂಗಳುಗಳಿಂದ ಏನನ್ನು ಖರೀದಿ ಮಾಡಿರಲಿಲ್ಲ ಆದರೆ ವಾರ್ಷಿಕ ಚಾರ್ಜ್ 499 ಕಟ್ಟಿಲ್ಲ ಎಂದು ಆರು ತಿಂಗಳಿಗೆ 10 ಸಾವಿರ ರೂ ಬಿಲ್ ಮಾಡಿರುವುದು ಮಹಿಳೆಯ ಗಮನಕ್ಕೆ ಬಂದು ಅವರು ಸಂಬಂಧಪಟ್ಟ SBI ಬ್ಯಾಂಕಿಗೆ ಹೋಗಿ ವಿಚಾರಿಸಿದರೆ ಬ್ಯಾಂಕ್ ಸಿಬ್ಬಂದಿ ಅದಕ್ಕೂ ನಮಗೂ ಸಂಬಂಧವಿಲ್ಲ ಎಲ್ಲಿ ಪಡೆದಿದ್ದರು ಅಲ್ಲಿ ವಿಚಾರಿಸಿ ಎಂಬ ಉಡಾಫೆ ಉತ್ತರ ನೀಡಿ ಕಳುಹಿಸಿದ್ದಾರೆ ಎಂದು ಮಹಿಳೆ ನೋವು ತೋಡಿಕೊಂಡರು.

ಪೆಟ್ರೋಲ್ ಬಂಕಿನಲ್ಲಿ ಇದ್ದ ಖಾಸಗಿ ಏಜೆನ್ಸಿ ಸಿಬ್ಬಂದಿಗೆ ವಿಚಾರಿಸಿದರೆ ಅವರು ಸಹ ಉಡಾಫೆ ಉತ್ತರ ನೀಡುತ್ತಿದ್ದು ಕಂಡುಬಂತು, 499 ಕಟ್ಟಿಲ್ಲ ಎಂದು ಆರು ತಿಂಗಳಿಗೆ ಹತ್ತು ಸಾವಿರ ರೂ ಬಿಲ್ ಮಾಡಿರುವುದು ಎಷ್ಟು ಸರಿ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಇದರ ಬಗ್ಗೆ ವಿಚಾರಿಸಿದರೆ ಖಾಸಗಿ ಏಜೆನ್ಸಿಯವರು ದೊಡ್ಡ ಮಟ್ಟದಲ್ಲಿ ನಮ್ಮ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಇಲ್ಲಿಗೆ ಬಂದಿರುತ್ತಾರೆ, ನಾವು ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ ಗ್ರಾಹಕರು ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಎಚ್ಚರವಹಿಸಬೇಕು ಎಂದು ಹಾರಿಕೆ ಉತ್ತರ ನೀಡುತ್ತಾರೆ.

ಅಂತಿಮವಾಗಿ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಪ್ರಶ್ನೆ ಒಂದೇ 499 ರೂ ಗೆ ಆರು ತಿಂಗಳಿಗೆ 10 ಸಾವಿರ ರೂ ಬಿಲ್ ಬರುವುದಾದರೆ ಶೇಕಡವಾರು ಬಡ್ಡಿ ಎಷ್ಟ್ ಆದಂತೆ ಎಂಬುದೇ?????

ಕೆ.ಎಲ್.ಹರೀಶ್ ಬಸಾಪುರ.

Leave a Reply

Your email address will not be published. Required fields are marked *

error: Content is protected !!