ದಾವಣಗೆರೆ ಜಿಲ್ಲೆಯಲ್ಲಿ ಇಂದು 187 ಸೋಂಕಿತರು.! 34 ಮಕ್ಕಳಿಗೆ ಕೊರೊನಾ ಪಾಸಿಟಿವ್.! ಹರಿಹರ ತಾಲ್ಲೂಕಿನ ಶಾಲೆ ಬಂದ್.!
ದಾವಣಗೆರೆ: ಬುಧವಾರ ಜಿಲ್ಲೆಯಲ್ಲಿ 187 ಜನರಿಗೆ ಕರೋನಾ ದೃಢಪಟ್ಟಿದ್ದು, 36 ಜನರು ಗುಣಮುಖರಾಗಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 134 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ 0-18 ರ ವಯೋಮಾನದ 34 ಶಾಲಾ ಮಕ್ಕಳು ಸೋಂಕಿತ ಪ್ರಕರಣ ದೃಢಪಟ್ಟಿದೆ.
ಇನ್ನೂ ಚನ್ನಗಿರಿ 5 ಜಗಳೂರು 12 ಹರಿಹರ ತಲಾ 24, ಹೊರ ಜಿಲ್ಲೆಯ ನಾಲ್ವರಿಗೆ ಸೋಂಕು ದೃಢಗೊಂಡಿದ್ದು, ಒಟ್ಟು 187 ಜನರಿಗೆ ಸೋಂಕು ತಗುಲಿರುವ ವರದಿಯಾಗಿದೆ.
ಬೇರೆ ಬೇರೆ ಶಾಲೆ ಕಾಲೇಜು ಗಳು. ಸುಮಾರು 14 ಶಾಲೆಗಳಲ್ಲಿ ಪಾಸಿಟಿವ್ ಬಂದಿವೆ. 1,2, 3 ಈ ರೀತಿ ಬಂದಿವೆ. 3 ಕ್ಕಿಂತ ಹೆಚ್ಚು ಪ್ರಕರಣ ಬಂದಿರುವ ಶಾಲೆ/ ಕಾಲೇಜು ಗಳನ್ನು (ಒಂದು ಶಾಲೆ, ಒಂದು ನರ್ಸಿಂಗ್ ಕಾಲೇಜು) ಮಾನ್ಯ ಜಿಲ್ಲಾಧಿಕಾರಿಗಳು ನಾಳೆ 7 ದಿನ ಸ್ಥಗಿತಗೊಳಿಸಲು ಆದೇಶಿಸುತ್ತಾರೆ.