Mortality rate; ತಾಯಿ, ಮಗು ಮರಣ ಪ್ರಮಾಣ ಇಳಿಕೆಗೆ ಜಿಲ್ಲಾಧಿಕಾರಿ ತಾಕೀತು
ದಾವಣಗೆರೆ, ಆ. 29: ಜಿಲ್ಲೆಯಲ್ಲಿ ಸಾಂಸ್ಥಿಕ ಹೆರಿಗೆ ಪ್ರಮಾಣ ಶೇ.100ರಷ್ಟಿದ್ದು, ಪ್ರಸ್ತುತ ತಾಯಂದಿರ ಮರಣ ಪ್ರಮಾಣ (Mortality rate) ಒಂದು ಲಕ್ಷ ಜೀವಂತ ಜನನಗಳಿಗೆ 121 ತಾಯಿ ಮರಣ ಪ್ರಮಾಣ ಇದೆ. ಇದನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ತಾಯ್ತನದ ಸಂದರ್ಭದಲ್ಲಿ ತೀವ್ರ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
Gruha Lakshmi Scheme; ಆ.30 ರಂದು ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ಜುಲೈ ಅಂತ್ಯದವರೆಗೆ 8 ತಾಯಿ ಮರಣಗಳು ಸಂಭವಿಸಿದ್ದು ಈ ರೀತಿಯಾಗಬಾರದು. ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ವಹಿಸುವ ತೀವ್ರನಿಗಾ ಮತ್ತು ಅತ್ಯುತ್ತಮ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.
ಏಪ್ರಿಲ್ ನಿಂದ ಜುಲೈ ಅಂತ್ಯದವರೆಗೆ 231 ಶಿಶು ಮರಣಗಳು ಸಂಭವಿಸಿದ್ದು ಒಂದು ಸಾವಿರ ಜೀವಂತ ಜನಗಳಿಗೆ 35 ಶಿಶು ಮರಣ ಪ್ರಮಾಣವಿದೆ. ಇದನ್ನು ಇನ್ನಷ್ಟು ಪ್ರಮಾಣ ಕಡಿಮೆ ಮಾಡಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಆಡಿಟ್ ಸಭೆಗೆ ಎಲ್ಲಾ ಪ್ರಕರಣಗಳ ವಿವರವನ್ನು ಸಲ್ಲಿಸಲು ಸೂಚನೆ ನೀಡಿದರು.
NEP; ಎನ್ ಇಪಿ ರದ್ದು ವಿರೋಧಿಸಿ ಪ್ರತಿಭಟನೆಗೆ ಕರೆ
ಜಿಲ್ಲೆಯಲ್ಲಿ ಶೇ.97ರಷ್ಟು ಮಕ್ಕಳು ಪೂರ್ಣ ಪ್ರಮಾಣದ ಲಸಿಕೆಯನ್ನು ಪಡೆದಿದ್ದು, ಮಹಿಳಾ ಸಂತಾನಹರಣ ಶಸ್ತ್ರ ಚಿಕಿತ್ಸೆಗಳಲ್ಲಿ ಶೇ.128ರಷ್ಟು ಸಾಧನೆಯಾಗಿದೆ. ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ 32 ಪ್ರಕರಣಗಳಿದ್ದು, 22 ರೋಗಿಗಳು ಗುಣಮುಖರಾಗಿದ್ದಾರೆ. ಅಂಧತ್ವ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ 5892 ಪ್ರಕರಣಗಳಿಗೆ ಕ್ಯಾಟಾರಾಕ್ಟ್ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದ್ದು, ಪ್ರಸ್ತುತ 1388 ಕ್ಷಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ 1 ಜಿಲ್ಲಾ ಆಸ್ಪತ್ರೆ, 1 ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, 4 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ 80 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಾಲ್ಕು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 11 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಯಾವುದೇ ವೈದ್ಯರ ಕೊರತೆ ಇರುವುದಿಲ್ಲ, ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಾರ್ಮಸಿ ಅಧಿಕಾರಿ ಪ್ರಯೋಗ ಶಾಲಾ ಅಧಿಕಾರಿ ಹುದ್ದೆಯ ಕೆಲವು ಮಾತ್ರ ಖಾಲಿ ಇದ್ದು ಉಳಿದಂತೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ಡಿಹೆಚ್ಓ ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.