ದಾವಣಗೆರೆಯಲ್ಲಿ ಫುಡ್ ಕೋರ್ಟ್ ಸ್ಥಾಪನೆಗೆ ಗುದ್ದಲಿ ಪೂಜೆ ಮಾಡಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್

foodcourt

ದಾವಣಗೆರೆ: ನಗರದ ಮೋದಿ ವೃತ್ತದ ಬಳೆ ಇರುವ ಗುಂಡಿ ಮಾಹದೇವಪ್ಪ ಕಲ್ಯಾಣ ಮಂಟಪ ಪಕ್ಕದಲ್ಲಿ ಸಿ ಸಿ ರಸ್ತೆ ನಿರ್ಮಾಣ ಹಾಗೂ ಫುಡ್ ಕೋರ್ಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ನೆರವೇರಿಸಿದರು.

ಐವತ್ತು ಲಕ್ಷದ ಕಾಮಗಾರಿಗೆ ಚಾಲನೆ ನೀಡಿ‌‌ ಮಾತನಾಡಿದ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರು ಅಧಿಕಾರಿಗಳಿಗೆ ತಕ್ಷಣ ಕೆಲಸ ಮುಗಿಸಿ ಅಲ್ಲಿರುವ ಪಾದ ಚಾರಿ ವ್ಯಾಪಾರಿಗಳಿಗೆ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಅಲ್ಲಿ ಗಲೀಜು ಮಾಡಬಾರದೆಂದು ಕಿವಿಮಾತು ಹೇಳಿದರು.ಸಾರ್ವಜನಿಕರಿಗೆ ಉತ್ತಮ ಉಪಹಾರ ನೀಡುವಲ್ಲಿ ನೀವು ಗಮನ ಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಫುಟ್ ಬಾತ್ ವ್ಯಾಪಾರಿಗಳ ಪರವಾಗಿ ಕಳೆದ 20 ವರ್ಷಗಳಿಂದ ನಿರಂತರವಾಗಿ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೂ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮತ್ತು ಮಹಾಪೌರರಿಗೆ ಮನವಿ ಸಲ್ಲಿಸುತ್ತಾ ಬಂದಿತ್ತು, ಆದರೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನವರು ಈ ವಿಚಾರವಾಗಿ ಹಲವಾರು ಬಾರಿ ಫುಡ್ ಕೋರ್ಟ್ ಮಾಡಿಸಿ ಕೊಡುತ್ತೇನೆಂದು ಭರವಸೆ ನೀಡಿದ್ದರು. ಅದರಂತೆ ಇಂದು ಚಾಲನೆ ನೀಡಿರುವುದಕ್ಕೆ ಕರವೇ ಹರ್ಷ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

ನಗರದ ಪ್ರಮುಖ ವೃತ್ತಗಳಲ್ಲಿ ಹಲವಾರು ಫುಟ್ ಬಾತ್ ವ್ಯಾಪಾರಿಗಳು ಜೀವನ ಸಾಗಿಸುತ್ತಿದ್ದಾರೆ ಅವರಿಗೂ ಸಹ ಫುಡ್ ಕೋರ್ಟ್ ಮಾಡಿ ಕೊಡುವಂತೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಸಚಿವರು ಇದಾದ ನಂತರ ಎಸ್ ಎಸ್ ಬಡಾವಣೆಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡುತ್ತೇನೆಂದು ಭರವಸೆ ನೀಡಿದರು . ಈ ಸಂದರ್ಭದಲ್ಲಿ ನಗರ ಉಪಾಧ್ಯಕ್ಷ ಜಿಎಸ್ ಸಂತೋಷ್ ಜಿಲ್ಲಾ ಕಾರ್ಯದರ್ಶಿ ಮತ್ತು ಮಹಾನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಹಾಗೂ ಪಾಲಿಕೆ ವಾರ್ಡಿನ ಸದಸ್ಯರಾದ ಗಡಿ ಗುಡಾಳ್ ಮಂಜುನಾಥ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಶ್ರೀಮತಿ ರೇಣುಕಾ. ಗುತ್ತಿಗೆದಾರ ಗಣೇಶ್ ಪಾಲಿಕೆಯ ಎ ಇ ಇ ನವೀನ್. ಕರವೇ ಪಾದಚಾರಿ ವ್ಯಾಪಾರಿ ಘಟಕದ ಅಧ್ಯಕ್ಷ ಸುರೇಶ್. ರಾಘವೇಂದ್ರ, ಚಂದ್ರು, ಮಂಜುನಾಥ್, ಕಾಲ್ ಲಾಲ್ ಚೌದ್ರಿ, ಧೀರೇಂದ್ರ. ಮಂಜುನಾಥ್, ಸಾಗರ್, ರಮೇಶ್. ಕರಿಬಸಪ್ಪ. ಬಸವರಾಜ್. ದಾದಾಪೀರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!