ಚಿನ್ನದ ಪದಕ ಗಳಿಸಿದ ದಾವಣಗೆರೆ ವಿವಿ ವಿದ್ಯಾರ್ಥಿಗಳು

ಚಿನ್ನದ ಪದಕ ಗಳಿಸಿದ ದಾವಣಗೆರೆ ವಿವಿ ವಿದ್ಯಾರ್ಥಿಗಳು

ದಾವಣಗೆರೆ: ಇದೇ ಫೆ.28ರಂದು ದಾವಣಗರೆ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿವರು.

ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಹಾಲಮ್ಮ ಬಿ. ಹಾಗೂ ಸ್ನಾತಕೋತ್ತರ ಜೀವರಸಾಯನಶಾಸ್ತ್ರ ವಿಭಾಗದ ಕೆ. ಅರುಣ್ ಶರ್ಮ ತಲಾ 5 ಸ್ವರ್ಣದ ಪದಕ ಪಡೆದಿದ್ದಾರೆ.
ಮೂರು ಚಿನ್ನದ ಪದಕ ವಿಜೇತರು: ಕನ್ನಡ ವಿಭಾಗದ ಬಿ.ನಾಗವೇಣಿ, ಇಂಗ್ಲಿಷ್ ವಿಭಾಗದ ವಿ.ಜ್ಯೋತಿ ಗುಪ್ತ, ಅರ್ಥಶಾಸ್ತ್ರ ವಿಭಾಗದ ವಿ.ವಾಸವಿ, ಗಣಿತಶಾಸ್ತ್ರ ವಿಭಾಗದ ಕೆ.ಎಂ. ನಾಗರತ್ನಾ ಅವರು ತಲಾ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಬಿ.ಎ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅರಸೀಕೆರೆಯ ಹಿಕ್ಕಿಮಗೇರೆ ಅಜ್ಜಪ್ಪ ಹಾಲಮ್ಮ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎಲ್. ದೀಪಾ, ಬಿಎಡ್‌ನಲ್ಲಿ ಆಯೇಷಾ ಖಾನಂ ಅತಿ ಹೆಚ್ಚು ಗಳಿಸಿ ಮೂರು ಚಿನ್ನದ ಪದಕ ಗಳಿಸಿದ್ದಾರೆ.
ಎರಡು ಚಿನ್ನ ಪಡೆದವರು: ಪತ್ರಿಕೋದ್ಯಮ ವಿಭಾಗದ ಕೆ.ಮುತ್ತುರಾಜ್, ರಾಜ್ಯಶಾಸ್ತ್ರ ವಿಭಾಗದ ಕೆ.ಬಿ.ನಂದಿನಿ, ವ್ಯವಹಾರ ನಿರ್ವಹಣೆಯಲ್ಲಿ ಬಾಪೂಜಿ ಅಕಾಡೆಮಿಯ ಎಸ್.ಸಂಜನಾ, ಅಂತಿಮ ವರ್ಷ ಎಂಬಿಎದಲ್ಲಿ ಅತಿ ಹೆಚ್ಚು ಗಳಿಸಿದ ಬಿ.ಎಂ.ಛಾಯಾ, ರಸಾಯನಶಾಸ್ತ್ರ ವಿಭಾಗದಲ್ಲಿ ಎಚ್.ನಂದಿನಿ, ಸಸ್ಯಶಾಸ್ತ್ರ ವಿಭಾಗದಲ್ಲಿ ಮೋನಿಷಾ ಸಿ.ಪಾಟೀಲ, ಕಂಪ್ಯೂಟರ್ ವಿಜ್ಞಾನದಲ್ಲಿ ಹೀನಾ ಕೌಸರ್ ಎನ್, ಆಹಾರ ತಂತ್ರಜ್ಞಾನ ವಿಭಾಗದಲ್ಲಿ ಸಿದ್ಧಾರ್ಥ ಮುಕ್ಕಣ್ಣವರ, ಸೂಕ್ಷ್ಮಜೀವಿಶಾಸ್ತ್ರದಲ್ಲಿ ಎಚ್.ಅಮೃತಾ, ಭೌತವಿಜ್ಞಾನ ವಿಭಾಗದಲ್ಲಿ ಆರ್.ಜ್ಯೋತಿ, ಪ್ರಾಣಿಶಾಸ್ತ್ರ ವಿಭಾಗದಲ್ಲಿ ಭಾರತಿ, ಎಂ.ಪಿ.ಎಡ್‌ನಲ್ಲಿ ಎಲ್.ಶಂಕರನಾಯ್ಕ್ ಎರಡು ಚಿನ್ನದ ಪದಕ ಪಡೆಯಲಿದ್ದಾರೆ.
ಸ್ನಾತಕೋತ್ತರ ಪದವಿ ಚಿನ್ನದ ಪದಕ ವಿಜೇತರು: ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಕೆ.ತನುಜಾ, ಇತಿಹಾಸ ವಿಭಾಗದ ಜೆ.ಬಿ. ಸಾಗರ, ಸಮಾಜಶಾಸ್ತ್ರ ವಿಭಾಗದ ಬಿ.ವೈ.ಲಕ್ಷ್ಮಿದೇವಿ, ಉರ್ದು ವಿಭಾಗದ ಸಬೀರಾಖಾನಂ, ಸಮಾಜಸೇವಾ ವಿಭಾಗದ ಎ.ವಿನಯ, ಅಪರಾಧಶಾಸ್ತ್ರ ವಿಭಾಗದ ಕೆ.ಕೆ.ಅಭಿಷೇಕ, ಎಂ.ಕಾಂ.ನಲ್ಲಿ ಪ್ರಥಮ ರ‍್ಯಾಂಕ್ ಪಡೆದ ಹರಿಹರದ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಕಾಲೇಜಿನ ಸಯ್ಯದ್ ಮುಷ್ಕಾನ್ ಉನ್ನೀಸಾ, ಎಂಬಿಎ ಅಂತಿಮ ವರ್ಷ ಮಾನವ ಸಂಪನ್ಮೂಲ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಬಾಪೂಜಿ ಅಕಾಡೆಮಿಯ ಚೈತ್ರಾ ಉಮೇಶ ಮರ್ಲಾಂಡನಹಳ್ಳಿ ಪಲ್ಲೇದ, ಎಂಬಿಎ ಅಂತಿಮ ವರ್ಷದ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಹೆಚ್ಚು ಅಂಕ ಗಳಿಸಿದ ದಾವಿವಿಯ ಕೆ.ಎಸ್.ನಯನಾ, ಜೀವ ತಂತ್ರಜ್ಞಾನ ವಿಭಾಗದಲ್ಲಿ ಎ.ಎಸ್.ಧನು, ಪರಿಸರ ಜೀವತಂತ್ರಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಎಂ.ಪಿ.ಆಕಾಶ ಪಟೇಲ್, ಯೋಗ ವಿಜ್ಞಾನ ವಿಭಾಗದಲ್ಲಿ ಇ ಗುಡ್ಡೀನ್, ಎಂ.ಇಡಿಯಲ್ಲಿ ಸಿ.ಜಿ.ಕಾವ್ಯಾ ತಲಾ ಒಂದು ಚಿನ್ನದ ಪದಕ ಪಡೆಯಲಿದ್ದಾರೆ.
ಸ್ನಾತಕ ಪದವಿಯಲ್ಲಿ ಚಿನ್ನದ ಪದಕ ವಿಜೇತರು: ಬಿಎ ಎರಡನೇ ವರ್ಷ ಹಿಂದಿಯಲ್ಲಿ ಪ್ರಥಮ ಸ್ಥಾನ ಪಡೆದ ಎವಿಕೆ ಕಾಲೇಜಿನ ಪಲ್ಲವಿ ಚವಾಣ್, ಬಿ.ಎ. ಎರಡನೇ ವರ್ಷ ಹಿಂದಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎವಿಕೆ ಕಾಲೇಜಿನ ಎಸ್.ಸ್ನೇಹಾ, ಬಿಎಸ್‌ಡಬ್ಲು್ಯನಲ್ಲಿ ಮೊಣಕಾಲ್ಮೂರು ಪದವಿ ಕಾಲೇಜಿನ ಡಿ.ಪಿ. ಗಂಗೋತ್ರಿ, ಬಿವಿಎ ಅಪ್ಲೈಡ್ ಆರ್ಟ್ನಲ್ಲಿ ಅಕ್ಬರಿ ಬಾನು, ಬಿವಿಎ ಪೇಂಟಿಂಗ್‌ನಲ್ಲಿ ಆರ್.ಪ್ರವೀಣ ಕಾಂಬ್ಳೆ, ಬಿವಿಎ ಶಿಲ್ಪಕಲೆಯಲ್ಲಿ ಕೆ.ಸಂಜಯ, ಬಿಕಾಂನಲ್ಲಿ ಕೆ.ಎಂ.ಮಾಧುರಿ, ಬಿಬಿಎನಲ್ಲಿ ಎನ್.ಆರ್. ಕಾವ್ಯಾ, ಬಿ.ಎಸ್ಸಿಯಲ್ಲಿ ಎಂ.ಶಹೀನ್‌ತಾಜ್, ಬಿಎಸ್ಸಿ ಗಣಿತಶಾಸ್ತ್ರ ವಿಷಯದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಗೌರಿ ಮಣ್ಣೂರ, ಬಿಸಿಎನಲ್ಲಿ ಎಚ್.ಜಿ.ಅನೀಶ್, ಬಿಪಿಎಡ್‌ನಲ್ಲಿ ಕೆ.ಚೇತನಕುಮಾರ ಅವರು ಚಿನ್ನದ ಪದಕ ಸ್ವೀಕರಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!