ದಾವಣಗೆರೆ: ದಾವಣಗೆರೆಯ 42ನೇ ವಾರ್ಡ್ ಸಿದ್ದವೀರಪ್ಪ ಬಡಾವಣೆಯ ಭದ್ರಾ ಕಾಲೇಜ್ ಆವರಣದಲ್ಲಿ ಹಿರಿಯ ನಾಗರಿಕರು ಮಹಿಳೆಯರು ಯುವಕರು ಮತ್ತು ಎಸ್.ಎಸ್.ಎಂ ಅಭಿಮಾನಿಗಳು ಸಭೆ ಸೇರಿ ಉತ್ತರ ವಿಧಾನಸಭಾ ಕ್ಷೇತ್ರ ಚುನಾವಣೆಯ ಪೂರ್ವಭಾವಿ ಸಭೆ ನಡೆಸಿದರು.
ಕಳೆದ ಐದು ವರ್ಷಗಳಿಂದ ನಮ್ಮ ವಾರ್ಡ್ ಅಭಿವೃದ್ಧಿ ವಂಚಿತವಾಗಿದ್ದು, ನಾಗರಿಕರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ, ಈ ಚುನಾವಣೆಯಲ್ಲಿ ಹಿಂದೆ ನಡೆದಂತಹ ತಪ್ಪುಗಳು ನಡೆದಂತೆ ನಾವುಗಳೆಲ್ಲ ಜವಾಬ್ದಾರಿ ವಹಿಸಬೇಕಾಗಿದೆ ಎಂದು ನಾಗರಿಕರು ತಮ್ಮ ಅಭಿಪ್ರಾಯ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಶಾಮನೂರ್ ಟಿ ಬಸವರಾಜ್, ಬಿಐಇಟಿ ಪ್ರಾಂಶುಪಾಲರಾದ ಎಚ್.ಬಿ ಅರವಿಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜಿ ಶಿವಕುಮಾರ್, ಮಾಜಿ ಪಾಲಿಕೆ ಸದಸ್ಯರಾದ ಜಿ.ಬಿ ಲಿಂಗರಾಜ್, ವಾರ್ಡ್ ಅಧ್ಯಕ್ಷರಾದ ಮಳಲ್ಕೆರೆ ಮಂಜುನಾಥ್, ಬಸವರಾಜಪ್ಪ, ಮಂಜುನಾಥ್, ರಾಜೇಶ್ವರಿ, ಪಂಪಣ್ಣ ಹಾಗೂ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಹಾಗೂ ಎಸ್.ಎಸ್.ಎಂ ಅಭಿಮಾನಿಗಳು ಉಪಸ್ಥಿತರಿದ್ದರು.
