exams; ಅರ್ಪಣಾ ಮನೋಭಾವದಿಂದ ಓದಿದಾಗ ಯಶಸ್ಸು ಸಾಧ್ಯ

ದಾವಣಗೆರೆ, ಸೆ.07: ವಿದ್ಯಾರ್ಥಿಗಳು ಓದುವಾಗ ಅರ್ಪಣಾ ಮನೋಭಾವದಿಂದ ಓದಿದರೆ ಯಾವುದೇ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (exams) ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೊಳಕಾಲ್ಮರಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ ವಿಶ್ವರಾಜ್ ರವರು ಹೇಳಿದರು.

ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೊತ್ತರ ವಿಭಾಗ ಉದ್ಯೋಗವಕಾಶ ಕೋಶದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೆಟ್ /ಸೆಟ್ ಪರಿಕ್ಷಾ ತರಬೇತಿ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ನೆಟ್ ಹಾಗೂ ಸೆಟ್ ಪರೀಕ್ಷೆ ಎರಡು ಬಾರಿ ನಡೆಸಲಾಗುತ್ತದೆ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವಾಗಲೇ ಯಶಸ್ವಿ ಆದರೆ ಮುಂದೆ ಪ್ರಾಧ್ಯಾಪಕರಾಗಲು ಅವಕಾಶಗಳು ತುಂಬಾ ಇವೆ ಅವುಗಳನ್ನು ಬಳಸಿಕೊಳ್ಳಲು ನಿರಂತರವಾದ ಅಧ್ಯಯನದ ಅವಶ್ಯಕತೆ ಇದೆ. ಅಧ್ಯಯನ ಮಾಡುವಾಗ ಸಂಪೂರ್ಣ ಏಕಾಗ್ರತೆ ಮುಖ್ಯವಾಗುತ್ತದೆ. ತನ್ನ ಗುರಿ ಏನು ಎಂಬುದನ್ನು ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಾಗ ಅದನ್ನು ಸಾದಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

farmer; ನೀರಿಲ್ಲ, ಮೇವಿಲ್ಲ…ಸರ್ಕಾರವೇ, ರೈತರ ಬವಣೆ ಕೇಳಿ ಸ್ವಲ್ಪ!

ಪ್ರಾಸ್ತಾವಿಕವಾಗಿ ಮಾತನಾಡಿದ ಉದ್ಯೋಗಾವಕಾಶ ಕೋಶದ ಸಂಚಾಲಕರಾದ ಪ್ರೊ ವೆಂಕಟೇಶ್ ಬಾಬು ರವರು ಕಾಲೇಜಿನ ಉದ್ಯೋಗವಕಾಶದಿಂದ ಪ್ರತಿ ವರ್ಷ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿರುತ್ತದೆ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಈ ತರಹದ ಕಾರ್ಯಗಾರಗಳು ಅವರ ವೃತ್ತಿ ಜೀವನಕ್ಕೆ ಅನುಕೂಲವಾಗಲಿ ಎಂದು ವಿಭಾಗವು ಸಂಪೂರ್ಣವಾಗಿ ಪ್ರಯತ್ನ ಪಡುತ್ತಾ ಬಂದಿರುತ್ತದೆ. ಇತರಹದ ಕಾರ್ಯಗಾರಗಳ ಫಲವಾಗಿ ಹಲವು ವಿದ್ಯಾರ್ಥಿಗಳು ಯಶಸ್ವಿ ಕೂಡ ಆಗಿದ್ದಾರೆ ಎಂದು ಹೇಳಿದರು. ಅವರ ಯಶಸ್ಸು ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಯಾಗಲಿ ಎಂಬುದೇ ಇದರ ಮುಖ್ಯ ಉದ್ದೇಶ ಎಂದು ವಿವರಿಸಿದರು.

ಐ ಕ್ಯು ಏ ಸಿ ಸಂಚಾಲಕರಾದ ಪ್ರೊ ನಟರಾಜ್ ರವರು ಮಾತನಾಡುತ್ತಾ ಕ್ರಿಯಾಶೀಲತೆಯು ವಿದ್ಯಾರ್ಥಿಗಳ ಮೂಲ ಮಂತ್ರವಾಗಬೇಕು ಅದಾದಾಗ ಪ್ರತಿಯೊಂದರಲ್ಲೂ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಬೀ ಸಿ ತಹಸೀಲ್ದಾರ ರವರು ಮಾತನಾಡಿ ನಿರಂತರವಾಗಿ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಅದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಬಿ ಸಿ ದಾದಾಪೀರ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಬೇಕು ಗ್ರಂಥಾಲಯದಿಂದ ಪುಸ್ತಕಗಳನ್ನು ತೆಗೆದುಕೊಂಡು ಸಂಪೂರ್ಣವಾಗಿ ಓದಿದಾಗ ತಾವು ಯಾವುದೇ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂಬುದನ್ನು ತಮ್ಮದೇ ಉದಾಹರಣೆ ಮೂಲಕ ವಿವರಿಸಿದರು.

hc mahadevappa; ಮೋದಿ ಅವ್ರು ಎಮ್ಮೆ ಮೈ ಉಜ್ಜಿದ್ದಾರಾ..? ಸಚಿವ ಎಚ್ ಸಿ ಮಹದೇವಪ್ಪ ಪ್ರಶ್ನೆ

ಕಾರ್ಯಕ್ರಮದಲ್ಲಿ ಪ್ರೊ ಶಿವಕುಮಾರ್ ಕಂಪ್ಲಿ ಉದ್ಯೋಗಾವಕಾಶ ಕೋಶದ ಸಂಚಾಲಕರಾದ ರಾಜಮೋಹನ ಎನ್ ಆರ್ ಪ್ರೊ ಕರಿಬಸಪ್ಪ ಹಾಗೂ ಇತರ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಸ್ವಪ್ನ ಮತ್ತು ಅಕ್ಷತಾ ರವರು ನಿರೂಪಿಸಿದರು. ಕಾರ್ಯಕ್ರಮದ ವಾಣಿಜ್ಯ ಶಾಸ್ತ್ರ ವಿಭಾಗದ ಡಾ ಮಂಜುನಾಥ ರವರು ಸ್ವಾಗತಿಸಿದರು ಪ್ರೊ ಸುನಿತಾ ಕೆ ಬಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!