Artist: ಚಿತ್ರದುರ್ಗದಲ್ಲೊಬ್ಬ ಚಿತ್ರ ಮಾಂತ್ರಿಕ: ಇತನ ಕೈ ಚಳಕ ನೋಡಿದ್ರೆ ” ವಾವ್ ” ಅನ್ನುವವರಿಲ್ಲ

ಚಿತ್ರದುರ್ಗ: ನಯನ ಮನೋಹರ ದೃಶ್ಯ ಕಾವ್ಯಗಳು ಒಬ್ಬ ಛಾಯಾಗ್ರಾಹಕನ ಕಣ್ಣಿಗೆ ಕಂಡರೆ ಆತ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯದೇ ಇರಲು ಸಾಧ್ಯವೇ? ಖಂಡಿತಾ ಇಲ್ಲ. ಇಲ್ಲೊಬ್ಬ ಛಾಯಾಗ್ರಾಹಕರು ಕೇವಲ ಕ್ಯಾಮೆರಾದಲ್ಲಿ ಮಾತ್ರವಲ್ಲ, ಕೈಯಲ್ಲೂ ಅಷ್ಟೇ ಸ್ಪಷ್ಟವಾದ, ಕಣ್ಣು ಕೋರೈಸುವ ಚಿತ್ರಗಳನ್ನು ಬಿಡಿಸುವ ಅದ್ಭುತ ಕೈಚಳಕವನ್ನು ಹೊಂದಿದ್ದಾರೆ.!

ಅಬ್ಬಾ! ಅದು ಯಾರಪ್ಪಾ ಎರಡು ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿ ಎನ್ನುವಿರಾ? ಅವರ ಹೆಸರು ನಾಗರಾಜ್ ಅಂತಾ, ನಾಗು ಆರ್ಟ್ಸ್ ಹೆಸರಲ್ಲಿ ಖ್ಯಾತಿ ಪಡೆದಿರುವ ನಾಗರಾಜ್ ಅವರು ಚಿತ್ರದುರ್ಗದವರು.

ಪ್ರೇಕ್ಷಣೀಯ ಸ್ಥಳಗಳನ್ನು, ಪ್ರಾಣಿ-ಪಕ್ಷಿಗಳನ್ನು ವೈವಿದ್ಯಮಯವಾಗಿ ಕಂಡಿದ್ದನ್ನು ಅವಿಸ್ಮರಣೀಯಗೊಳಿಸಲು ಫೋಟೊ ತೆಗೆಯೋದು ಸಾಮಾನ್ಯ.‌ ಅದರಲ್ಲೂ ಛಾಯಾಗ್ರಾಹಕ (ಫೋಟೋಗ್ರಾಫರ್) ಗಳಂತೂ ಸಾಮಾನ್ಯ ಜನರಿಗೆ ಕಾಣದ ಪರಿಸರದಲ್ಲಿರುವ ಅದ್ಭುತಗಳನ್ನು ಸೆರೆಹಿಡಿಯಲು ಸಾಧ್ಯವಿರೋದು ಮಾತ್ರ ಛಾಯಾಗ್ರಾಹಕರಿಗೆ. ಆದರೆ, ನಾಗರಾಜ್ ಅವರು ಕೈಯಲ್ಲೂ ಸಹ ಅಷ್ಟೇ ಅದ್ಭುತವಾಗಿ ಅದನ್ನು ಬಿಡಿಸುತ್ತಾರೆ. ನೋಡುಗರು ಕ್ಷಣಕಾಲ ಇದು ಫೋಟೊನಾ ಅಥವಾ ಕೈಯಲ್ಲಿ‌ ಅರಳಿರುವ ಚಿತ್ರವೋ ಎಂಬ ಗೊಂದಲಕ್ಕೆ ಬೀಳುವಷ್ಟು ಸ್ಪಷ್ಟವಾಗಿ ಆ ಚಿತ್ರವನ್ನು ಬಿಡಿಸುತ್ತಾರೆ.

ಅವರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸುವ‌ ಅರಣ್ಯ ಇಲಾಖೆ ಇವರನ್ನ ಪ್ರಾಣಿ- ಪಕ್ಷಿಗಳ, ಪರಿಸರದ ಚಿತ್ರ ಬಿಡಿಸಲು ಆಹ್ವಾನಿಸುತ್ತಾರೆ.

*ಕಲಾವಿದನ ಕೈ ಚಳಕಕ್ಕೆ ” ವಾವ್ ” ಎನ್ನುವವರಿಲ್ಲ.

Watch the Video till the end.

Leave a Reply

Your email address will not be published. Required fields are marked *

error: Content is protected !!