ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! 

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! 

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಆನಂದಪುರದ ಸಮೀಪ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 8ನೇ ಘಟಿಕೋತ್ಸವದಲ್ಲಿ  ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯ್ತು!

ಉದ್ಯಮವಾಗಿಸಿ, ನೌಕರಿ ಕೊಡಿ

ಈ ವೇಳೆ ಮಾತನಾಡಿದ  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾರತವು ಹವಾಮಾನ ವಿವಿಧ ರೀತಿಯ ಸೂಕ್ಷ್ಮ ಮತ್ತು ಕೋಮಲ ಹೂವುಗಳ ಕೃಷಿಗೆ ಸೂಕ್ತವಾಗಿದೆ. ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಹೂವಿನ ಕೃಷಿಯನ್ನು ವಾಣಿಜ್ಯಿಕವಾಗಿ ಮಾಡಲಾಗುತ್ತಿರುವುದರಿಂದ ಭಾರತವು ಹೂವುಗಳ ದೊಡ್ಡ ರಫ್ತುದಾರ ದೇಶವಾಗಿದೆ. ಈ ಹಂತದಲ್ಲಿ ಕೃಷಿ ಪದವಿ ಪಡೆದವರು ಕೃಷಿಯನ್ನು ಉದ್ಯಮವಾಗಿಸಿ ನೌಕರಿಯನ್ನು ನೀಡುವಂತವರಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಪದವಿ ಪ್ರದಾನ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅಭಿನಂದಿಸಿದ್ರು.., 409 ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ವಿಭಾಗದಲ್ಲಿ ಪದವಿ, 101 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 23 ವಿದ್ಯಾರ್ಥಿಗಳಿಗೆ ಪಿಹೆಚ್ಡಿ ಪದವಿ ಪ್ರದಾನ ಮಾಡಲಾಯ್ತು. 8 ಪದವಿ ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕ, 14 ಎಂ.ಎಸ್ಸಿ ಮತ್ತು 7 ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ 37 ಚಿನ್ನದ ಪದಕ ನೀಡಲಾಯ್ತು. ಅತೀ ಹೆಚ್ಚಿನ ಪದಕ ಪಡೆದ ವಿದ್ಯಾರ್ಥಿಗಳು ತಮ್ಮ ಸಾಧನೆಗೆ ಕಾರಣರಾದ ಪೋಷಕರು ಹಾಗೂ ಉಪನ್ಯಾಸಕರು ಧನ್ಯವಾದ ಹೇಳಿದ್ರು ಕೃಷಿ ಸಚಿವ ಚೆಲುವರಾಯಸ್ವಾಮಿ, ವಿವಿ ಕುಲಪತಿ ಡಾ ಆರ್.ಸಿ.ಜಗದೀಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ರು…

ಸ್ಮರಣೀಯ ಸಂಗತಿ

ಇನ್ನೂ ಗೌರವ ಡಾಕ್ಟರೇಟ್ ಪಡೆದು ಮಾತನಾಡಿದ ಬಿಎಸ್ವೈ, ನನ್ನ ಬದುಕಿನ ಅತ್ಯಂತ ಸ್ಮರಣೀಯ ಸಂಗತಿ ಇದು. ರೈತ ಕುಟುಂಬದ ಮಗನಾಗಿ ಈ ಮಣ್ಣಿನ ಒಡನಾಟದಲ್ಲಿ ನಮ್ಮ ಜಿಲ್ಲೆಯಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿದ್ದು ಸಂತಸ ತಂದಿದೆ ಎಂದರು.

            ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! 

ನಡೆಯಿತು ಒಂದು ಘಟನೆ

ಮಾಜಿ ಸಿಎಂ ಬಿಎಸ್ವೈ ಗೌರವ ಡಾಕ್ಟರೇಟ್ ಸ್ವೀಕರಿಸುವುದನ್ನು ನೋಡಲು ಬಂದಿದ್ದ ಯಡಿಯೂರಪ್ಪ ಅಭಿಮಾನಿಗಳು ಘಟಿಕೋತ್ಸವ ಸಭಾಂಗಣದ ಹೊರಗೆ ಘೋಷಣೆ ಕೂಗಿದ್ದರಿಂದ ಕೆಲಕಾಲ ಗೊಂದಲ ಸಹ ನಿರ್ಮಾಣವಾಯ್ತು. ಕೂಡಲೇ ಮಧ್ಯ ಪ್ರವೇಶಿಸಿದ ಸಂಸದ ಬಿ.ವೈ.ರಾಘವೇಂದ್ರ ಎಲ್ಲವನ್ನೂ ತಿಳಿಗೊಳಿಸಿ, ಬೆಂಬಲಿಗರನ್ನು ಒಳಗೆ ಬಿಡಿಸಿ, ಕಾರ್ಯಕ್ರಮ ನೋಡಲು ಅನುವು ಮಾಡಿಕೊಟ್ರು..

Leave a Reply

Your email address will not be published. Required fields are marked *

error: Content is protected !!