ದಾವಣಗೆರೆಯಲ್ಲಿ ಇಂದು 3 ಜನರಿಗೆ ಕೊವಿಡ್ ಪಾಸಿಟಿವ್ ನಾಲ್ವರು ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿ ಮೂವರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ನಾಲ್ವರು ಸೋಂಕಿನಿಂದ ಗುಣಮುಖ ಗೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನ ಮೂವರಿಗೆ ಸೋಂಕು ತಗುಲಿದ್ದು, ಒಟ್ಟಾರೆ 51,947 ಜನರಿಗೆ ಜಿಲ್ಲೆಯಲ್ಲಿ ಈವರೆಗೂ ಸೋಂಕು ದೃಢಗೊಂಡಿತ್ತು. ಅದರಲ್ಲಿ 50,418 ಜನರು ಗುಣಮುಖರಾಗಿದ್ದಾರೆ, 608 ಜನರು ಸೋಕಿನಿಂದ ಸಾವನ್ನಪ್ಪಿದ್ದಾರೆ.

ಜಿಲ್ಲೆಗೆ 195 ಜನರು ವಿದೇಶದಿಂದ ಬಂದಿದ್ದು, ಅದರಲ್ಲಿ 77 ಮಂದಿ ಅಪಾಯದ ಅಂಚಿನ ದೇಶಗಳಿಂದ ಬಂದಿದ್ದು, 74 ಗಂಟಲು ಮಾದರಿ ಪರೀಕ್ಷೆ ಮಾಡಲಾಗಿದ್ದು ಎಲ್ಲಾ ನೆಗೆಟಿವ್ ಇದೆ.
ಈ ದಿನ ಮೂವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ದಿನದವರೆಗೆ 57 ಮಂದಿ ಕ್ವಾರಂಟೈನ್ ಮುಗಿಸಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!