PAN-ಆಧಾರ್ ಜೋಡಣೆ ಆಗದಿದ್ದರೆ ಭಾರೀ ದಂಡ! ಮಾರ್ಚ್ 31 ಕೊನೆ ಗಡುವು

ಪರ್ಮನೆಂಟ್ ಅಕೌಟ್ ನಂಬರ್ (PAN- Permanent Account Number) ಮತ್ತು ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡಬೇಕೆಂದು ಸರ್ಕಾರ ಸೂಚನೆ ನೀಡಿ ಸಾಕಷ್ಟು ಸಮಯವೇ ಆಗಿದ್ದು, ಈಗ ಮಾರ್ಚ್ 31ಕ್ಕೆ ಕೊನೆಯ ಗಡುವು ನಿಗದಿ ಮಾಡಿ ಆದೇಶಿಸಿದೆ.

ಅಷ್ಟರೊಳಗೆ ನೀವು ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ನಂಬರ್ ಏಪ್ರಿಲ್ 1ರಿಂದ ನಿಷ್ಕ್ರಿಯವಾಗುತ್ತದೆ. ನಿಮ್ಮ ಬಳಿ ಪಾನ್ ಸಂಖ್ಯೆ ಇದ್ದರೂ ಇಲ್ಲದಂತಾಗುತ್ತದೆ. ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಮೇಯವೂ ಬರಬಹುದು. 10 ಸಾವಿರ ರೂ ದಂಡ ವಿಧಿಸುವ ಅವಕಾಶ ಬರಬಹುದು.

ಹೊಸ ಬ್ಯಾಂಕ್ ಖಾತೆಗಳನ್ನ ತೆರೆಯಲು ಪಾನ್ ನಂಬರ್ ಅಗತ್ಯ. ಇರುವ ಬ್ಯಾಂಕ್ ಅಕೌಂಟ್​ನಿಂದ 50 ಸಾವಿರ ರೂ ಗಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು ಪಾನ್ ನಂಬರ್ ನಮೂದಿಸುವುದು ಅಗತ್ಯ. ಪರ್ಮನೆಂಟ್ ಅಕೌಂಟ್ ನಂಬರ್ ಇಲ್ಲದಿದ್ದರೆ ನೀವು ಇವ್ಯಾವುದನ್ನೂ ಮಾಡಲು ಸಾಧ್ಯವಾಗುವುದಿಲ್ಲ.

UPI ವಹಿವಾಟುಗಳನ್ನು ಮಾಡುವಾಗ ಎಚ್ಚರ: ಈ ಆರು ಮಾರ್ಗಗಳನ್ನ ಅನುಸರಿಸಿ

ಪಾನ್-ಆಧಾರ್ ಲಿಂಕ್ ಮಾಡುವುದು ಹೀಗೆ:
* ಮೊದಲು ನೀವು ಇನ್ಕಮ್ ಟ್ಯಾಕ್ಸ್ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in ಓಪನ್ ಮಾಡಿ.
* ಇಲ್ಲಿ ನಿಮ್ಮ ಪಾನ್ ಸಂಖ್ಯೆಯನ್ನ ನಿಮ್ಮ ಯೂಸರ್ ಐಡಿ ಆಗಿ ನಮೂದಿಸಬೇಕು. ನಂತರ ಪಾಸ್​ವರ್ಡ್ ಹಾಕಿರಿ, ನಿಮ್ಮ ಜನ್ಮದಿನಾಂಕ ನಮೂದಿಸಿ.
* ಬಳಿಕ ನಿಮ್ಮ ಪಾನ್ ಸಂಖ್ಯೆಯನ್ನ ಆಧಾರ್ ಜೊತೆ ಲಿಂಕ್ ಮಾಡುವಂತೆ ಕೇಳಿ ಪಾಪ್ ಅಪ್ ವಿಂಡೋ ಓಪನ್ ಆಗುತ್ತದೆ.

* ಪಾಪ್ ಅಪ್ ಬರದಿದ್ದರೆ ಇಫೈಲಿಂಗ್ ಪೋರ್ಟಲ್​ನಲ್ಲಿ ಪ್ರೊಫೈಲ್ ಸೆಟಿಂಗ್ಸ್ ಒತ್ತಿದರೆ ಕಾಣಿಸುವ ಮೆನು ಬಾರ್​ನಲ್ಲಿವ Link Aadhaar ಅನ್ನು ಕ್ಲಿಕ್ ಮಾಡಿ.

* ಅದರಲ್ಲಿ ನಿಮ್ಮ ಪಾನ್ ಕಾರ್ಡ್​ನಲ್ಲಿ ನಮೂದಾಗಿರುವ ಜನ್ಮದಿನಾಂಕ, ಲಿಂಗ ಇತ್ಯಾದಿ ವಿವರಗಳು ಮೊದಲೇ ನಮೂದಾಗಿರುತ್ತವೆ.

: Senior Citizen Scheme : ಹಿರಿಯ ನಾಗರಿಕರಿಗೆ ಹಣ ಉಳಿತಾಯಕ್ಕೆ ಇಲ್ಲಿವೆ ಉತ್ತಮ ಆಯ್ಕೆ

* ಪಾನ್ ವಿವರಗಳು ಆಧಾರ್​ನಲ್ಲಿರುವ ವಿವರದೊಂದಿಗೆ ಹೊಂದಿಕೆ ಆಗುತ್ತಿದೆಯಾ ಖಚಿತಪಡಿಸಿಕೊಳ್ಳಿ. ತಾಳೆ ಆಗುತ್ತಿಲ್ಲವೆಂದರೆ ಎರಡರಲ್ಲಿ ಒಂದರಲ್ಲಿ ವಿವರವನ್ನು ಸೂಕ್ತವಾಗಿ ಬದಲಾಯಿಸಬೇಕು.

* ಈಗ ಎರಡೂ ಹೊಂದಿಕೆ ಆಗುತ್ತಿದ್ದಲ್ಲಿ Link Now ಬಟನ್ ಕ್ಲಿಕ್ ಮಾಡಿ. ಆಗ ನಿಮ್ಮ ಪಾನ್ ಸಂಖ್ಯೆ ಆಧಾರ್ ಜೊತೆ ಜೋಡಿತವಾಗಿರುತ್ತದೆ.

https://www.utiitsl.com ಅಥವಾ https://www.egov-nsdl.co.in ವೆಬ್​ಸೈಟ್​ಗೆ ಹೋದರೂ ಅಲ್ಲಿ ಪಾನ್ ಮತ್ತು ಆಧಾರ್ ಜೋಡಣೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!