ಪಂಪ್ ಸೆಟ್ ಆನ್ ಮಾಡಲು ಹೋಗಿ ಕರೆಂಟ್ ಶಾಕ್.! ಇಬ್ಬರು ರೈತರ ಸಾವು

ಕರೆಂಟ್ ಶಾಕ್.! ಇಬ್ಬರು ರೈತರ ಸಾವು
ದಾವಣಗೆರೆ: ಅಡಿಕೆ ತೋಟಕ್ಕೆ ನೀರು ಬಿಡಲು ಪಂಪ್ ಸೆಟ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಸೋಮವಾರ ನಡೆದಿದೆ
ಅಡಿಕೆ ತೋಟದ ಮಾಲೀಕ ಮಂಜುನಾಥ (65) ಹಾಗೂ ಕೂಲಿ ಕಾರ್ಮಿಕ ಚಂದ್ರಪ್ಪ (45) ಮೃತ ದುರ್ದೈವಿಗಳು.
ಮಂಜುನಾಥ ಅವರು ಪಂಪ್ ಸೆಟ್ ಆನ್ ಮಾಡಲು ಮದರ್ ಬೋರ್ಡ್‌ಗೆ ಕೈ ಹಾಕಿದಾಗ ವಿದ್ಯುತ್ ಸ್ಪರ್ಶಿಸಿದೆ. ಇವರನ್ನು ರಕ್ಷಿಸಲು ಹೋದ ಚಂದ್ರಪ್ಪ ಅವರಿಗೂ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.