ಕಬ್ಬಿಣದ ರಾಡ್ ನಿಂದ ಬಾಗಿಲು ಮುರಿದು ಚಿನ್ನಾಭರಣ ದೋಚಿದ ಕಳ್ಳರು

ದಾವಣಗೆರೆ: ಮನೆಯ ಹಿಂಬಾಗಿಲನ್ನು ಕಬ್ಬಿಣದ ರಾಡ್ ನಿಂದ ಒಡೆದಿರುವ ಕಳ್ಳರು ಮನೆಯಲ್ಲಿರುವ ಸುಮಾರು 80 ಸಾವಿರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.ಕೇಶವಮೂರ್ತಿ ಎಂಬುವವರ ಮನೆಯಲ್ಲಿ ಈ‌ಕಳ್ಳತನ ನಡೆದಿದ್ದು, ಇವರು ಶಿವಮೊಗ್ಗದ ತಮ್ಮ ಸ್ವಗ್ರಾಮವಾದ ಕೈರಾ ಗ್ರಾಮಕ್ಕೆ ಕೃಷಿ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಈ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!