ದಾವಣಗೆರೆ : ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾ ವಿದ್ಯಾಲಯಯದ 1997ನೇ ಸಾಲಿನ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇದೇ.ಫೆ.19ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಶಿಕ್ಷಣಾರ್ಥಿ, ಹೂವಿನಮಡು ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಎ.ಸಿ.ಶಶಿಕಲಾ ಶಂಕರಮೂರ್ತಿ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಗುರುಗಳಾದ ಪ್ರೊ. ಎಸ್.ಬಿ.ರಂಗನಾಥ್, ಪ್ರೊ.ಜಿ.ತಿಮ್ಮಾರೆಡ್ಡಿ, ಪ್ರೊ.ವೈ.ಎಂ. ವಿಠ್ಠಲರಾವ್, ಡಾ.ಎಂ.ಎಂ. ಪಟ್ಟಣಶೆಟ್ಟರು, ಪ್ರೊ.ಕೆ.ಎಂ. ಶಿವಮೂರ್ತಿ, ಡಾ. ಹೆಚ್. ಮಲ್ಲಿಕಾರ್ಜುನಪ್ಪ, ಡಾ.ಹೆಚ್.ವಿ. ವಾಮದೇವಪ್ಪ, ಪ್ರೊ. ಜಿ.ಎಸ್. ಶೇಖರಪ್ಪ, ಡಾ.ಹೆಚ್.ವಿ. ಶಿವಶಂಕರ ಇವರ ಪರವಾಗಿ ಡಾ.ಅನಿತಾ ಹಂಜಿ ಇವರಿಗೆ ಸನ್ಮಾನಿಸಲಾಗುವುದು. ಜೊತೆಗೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳಿಗೂ ಸನ್ಮಾನಿಸಲಾಗುವುದು ಎಂದರು.
ಬೆಳಿಗ್ಗೆ 10.30ರಿಂದ ಗುರುವಂದನಾ ಕಾರ್ಯಕ್ರಮ ಆರಂಭವಾಗಲಿದ್ದು, ಮಧ್ಯಾಹ್ನ 2ರಿಂದ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮವಿದೆ. ಸಂಜೆ 6ರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಹಳೆಯ ಪ್ರಶಿಕ್ಷಣಾರ್ಥಿಗಳಾದ ಎಸ್.ಎಂ. ಸುನಿತ, ಸಿದ್ಧನಗೌಡ, ಪರಮೇಶ್ವರಪ್ಪ, ಸರಳ ಗೌರೋಜಿ ಉಪಸ್ಥಿತರಿದ್ದರು.
