hospital; ಸ್ವಚ್ಚತೆ ಕಾಣದೆ ರೋಗಗಳ ತಾಣವಾಗುತ್ತಿದೆ ಹರಿಹರದ ಸರ್ಕಾರಿ ಆಸ್ಪತ್ರೆ!

ಹರಿಹರದ ತಾಲೂಕು ಸರ್ಕಾರಿ ಆಸ್ಪತ್ರೆ (hospital) ನಗರದ ಜನರಿಗೆ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಆರೋಗ್ಯ ಕೇಂದ್ರ. ಆದರೆ ಆಸ್ಪತ್ರೆಗೆ ಬರುವ ರೋಗಿಗಳು ಆಸ್ಪತ್ರೆಯ ಆವರಣ ನೋಡಿ ಪ್ರಾಣ ಭಯದಿಂದ ಸಂಕಟ ಪಡುವ ಪ್ರಸಂಗ ಎದುರಾಗಿದೆ.

ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ಆವರಣ ಕಸದ ರಾಶಿಯಿಂದ ತುಂಬಿ ತುಳುಕುತ್ತಿದ್ದು, ಸ್ವಚ್ಚತೆ ಕಾಣದೆ ಸರ್ಕಾರಿ ಆಸ್ಪತ್ರೆ ಸೊರಗುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ, ಪ್ಲಾಸ್ಟಿಕ್‌ ಪೇಪರ್, ಖಾಲಿಯಾದ ಎಳನೀರು ಕಂಡು ಬಂದರೆ, ಇನ್ನೊಂದೆಡೆ ಜಾಲಿಗಿಡಗಳು ಹಬ್ಬುತ್ತಲೇ ಇದ. ಕಸ ತುಂಬಿದ ಚರಂಡಿಗಳು ಸೊಳ್ಳೆಗಳಿಗೆ ಆಶ್ರಯ ತಾಣವಾಗಿ ರೋಗದ ಉಗಮ ಕೇಂದ್ರವಾಗಿದೆ. ವಾರ್ಡಗಳ ಕಿಟಕಿಯಲ್ಲಿ ಗುಟ್ಕಾ ಕಲೆಗಳು ಆಸ್ಪತ್ರೆಯ ಸ್ವಚ್ಚತೆಯನ್ನು ಕುಂದಿಸುತ್ತಿದೆ.

ಶಿವಮೊಗ್ಗ ರಸ್ತೆಯಿಂದ ಆಸ್ಪತ್ರೆಗೆ ತಿರುಗುವ ರಸ್ತೆಯ ಬದಿಯ ಚರಂಡಿಯು ಸಂಪೂರ್ಣವಾಗಿ ಹಾಳಾಗಿ ಕೊಳಚೆಯು ಹರಿಯುತ್ತಿದ್ದು, ಆ ದುರ್ವಾಸನೆಯೇ ಆಸ್ಪತ್ರೆಗೆ ಬರುವ ರೋಗಿಗಳನ್ನು ಬರಮಾಡಿಕೊಳ್ಳುತ್ತಿದೆ. ಆಸ್ಪತ್ರೆಯ ಎರಡು ಬದಿಯ ರಸ್ತೆಗಳಲ್ಲಿ ಕಾಣುವ ಬೀದಿ ದೀಪಗಳು ಹಾಳಾಗಿದ್ದು ಉರಿಯದೆ ಕತ್ತಲಮಯವಾಗಿರುತ್ತದೆ. ರೋಗಿಗಳು, ರೋಗಿಗಳ ಪಾಲಕರು ನಡೆದಾಡುವುದೇ ಕಷ್ಟವಾಗುತ್ತಿದೆ. ಆಸ್ಪತ್ರೆಯ ಅಂಗಳದಲ್ಲಿ ಅಲ್ಲಲ್ಲಿ ನೀರು ನಿಂತು ಡೆಂಗ್ಯೂ ಭಯ ಹೆಚ್ಚಿದೆ. ಮಹಾಮಾರಿ ಕೊರೋನ ದೇಶದ ಜನರಿಗೆ ಆರೋಗ್ಯ ಮತ್ತು ಸ್ವಚ್ಚತೆಯ ಅರಿವು ಮೂಡಿಸಿದೆ ಆದರೆ ಹರಿಹರದ ಸರ್ಕಾರಿ ಆಸ್ಪತ್ರೆಯ ಅಂಧ ಅಧಿಕಾರಿಗಳು ಮತ್ತು ನಗರಸಭಾ ಅಧಿಕಾರಿಗಳು ಸ್ವಚ್ಚತೆಯ ಬಗೆಗೆ ಗಮನ ಕೊಡದೆ ನಿರ್ಲಕ್ಷ್ಯ ವಹಿಸಬೇಕು. ಆರೋಗ್ಯ ಕೊಡುವ ಆಸ್ಪತ್ರೆಗಳು ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು.

– ಸುನೀಲ್ ಹರಿಹರ, ಪತ್ರಿಕೋದ್ಯಮ ವಿದ್ಯಾರ್ಥಿ

Leave a Reply

Your email address will not be published. Required fields are marked *

error: Content is protected !!