siddaramaiah; ನಾನು ಯಾವ ಬಾಂಬ್ ಹಾಕಿಲ್ಲ: ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಅ.06: ನಾನು ಯಾವ ಬಾಂಬ್ ಹಾಕಿಲ್ಲ, ಸತ್ಯ ಹೇಳಿದ್ದೇನೆ. ಯಾವ ಹೈಕಮಾಂಡೂ ಇಲ್ಲ ಪೈ ಕಮಾಂಡೂ ಇಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಎಂದು ಸಿಎಂ ಸಿದ್ದರಾಮಯ್ಯ (siddaramaiah) ಅವರ ಜೊತೆ ಇರುವ ವಿಚಾರವನ್ನು ಪ್ರಸ್ತುತಪಡಿಸಿರುವುದಾಗಿ ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ ಸೀಕ್ರೆಟ್ ಬಹಿರಂಗವಾಗಿ ಹೇಳಲು ಆಗಲ್ಲ. ನೀವು ಸಿದ್ದರಾಮಯ್ಯ ಅವರನ್ನೇ ಕೇಳಿ. ಸಿದ್ದರಾಮಯ್ಯರ ಜೊತೆ ಮಾತನಾಡಿದ್ದರೂ ಅದೂ ಸೀಕ್ರೇಟ್ ಆಗಿರುತ್ತದೆ ಎಂದು ಹೇಳಿದರು.

Lingayat; ಶಾಮನೂರು ಶಿವಶಂಕರಪ್ಪ ಮಾತಿಗೆ ಧ್ವನಿಗೂಡಿಸಿದ ಜಯ ಮೃತ್ಯುಂಜಯ ಸ್ವಾಮೀಜಿ

ನಂತರ ಸಿಎಂ ಸ್ಥಾನ ಖಾಲಿ‌ ಇದೆಯಾ ಅಂತಾ ಮಾಧ್ಯಮದವರಿಗೆ ಪ್ರಶ್ನೆ ಮಾಡಿದ ಈಶ್ವರ್ ಖಂಡ್ರೆ, ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಸಮ್ಮೇಳನದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಸ್ಥಾನಮಾನದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಮಹಾ ಅಧಿವೇಶನದ ರೂಪುರೇಷೆ ಬಗ್ಗೆ ಸಮುದಾಯದ ನಡಾವಳಿಗೆಳ ಬಗ್ಗೆ ಮಾತ್ರ ಚರ್ಚೆ ಆಗಿದೆ. ಬೇರೆ ಎಲ್ಲಾ ವಿಷಯಗಳು ಅಪ್ರಸ್ತುತವಾಗಿದ್ದು, ಎಲ್ಲಾ ವಿಚಾರಗಳು ಸರಿ ಹೋಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!