ಹೆಲಿಕಾಪ್ಟರ್ ಪತನ: ಉಕ್ರೇನ್ ಸಚಿವ ಸೇರಿ 16 ಸಾವು

ಕೀವ್: ಹೆಲಿಕಾಪ್ಟರ್ ಪತನಗೊಂಡು ಉಕ್ರೇನ್‌ನ ಆಂತರಿಕ ಸಚಿವ ಸೇರಿದಂತೆ 16 ಮಂದಿ ಮೃತಪಟ್ಟ ಘಟನೆ ಉಕ್ರೇನ್ ರಾಜಧಾನಿ ಕೀವ್ ಹೊರವಲಯದ ಶಿಶುವಿಹಾರದ ಬಳಿ ನಡೆದಿದೆ.
ಸದ್ಯ 16 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ತಿಳಿಸಿದ್ದಾರೆ. ಮೃತರಲ್ಲಿ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್‌ಸ್ಕಿ, ಆಂತರಿಕ ಸಚಿವಾಲಯದ ಉನ್ನತ ಅಧಿಕಾರಿಗಳು ಸೇರಿದ್ದಾರೆ ಎಂದು ಅವರು ಹೇಳಿದ್ಧಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!