‘ರೇಣುಕಾಚಾರ್ಯ’ಗೆ ಕಾಲಿಗೆ ಬಿದ್ದು ಕಣ್ಣಿರ ಬಾಷ್ಪಹರಿಸಿದ ಸಾರ್ವಜನಿಕರು

ದಾವಣಗೆರೆ: ಜನಪ್ರತಿನಿಧಿಗಳಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಮತದಾರರ ನೆನಪಾಗುತ್ತದೆ ಎಂಬ ಆರೋಪವಿದೆ. ಆದರೆ, ಈ ಆರೋಪಕ್ಕೆ ವ್ಯತಿರಿಕ್ತವಾಗಿ ಕರೋನಾದ ಇಂತಹ ಸಂಕಷ್ಟ ಕಾಲದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮ ಪ್ರಾಣದ ಹಂಗು ತೊರೆದು, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ, ಅವರಿಗೆ ಅವಶ್ಯಕವಿರುವ ವೈದ್ಯಕೀಯ ಚಿಕಿತ್ಸೆಕೊಡಿಸಿ ಒಬ್ಬ ಉತ್ತಮ ಜನಪ್ರತಿನಿಧಿಯಾಗಿ ಹೆಸರು ಮಾಡುತ್ತಿದ್ದಾರೆ.

ಈಗಾಗಲೇ ರೇಣುಕಾಚಾರ್ಯರು ಸೋಂಕಿತರೊಂದಿಗೆ ವಾಸ್ತವ್ಯ ಹೂಡಿ ಅವರಿಗೆ ಬೇಕಾದ ಅನುಕೂಲ ಮಾಡಿ, ಒಬ್ಬ ಉತ್ತಮ ಜನಪ್ರತಿನಿಧಿ ಎಂದು ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ, ಹೊರ ದೇಶಗಳಲ್ಲಿರುವ ಕನ್ನಡಿಗರು ಅವರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಇಂದು ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದ ಭಾವನಾತ್ಮಕ ಕ್ಷಣವೂ ಸಾಕ್ಷಿಯಾಗಿದೆ. ಚಿಕಿತ್ಸೆ ಪಡೆದ 47 ಕರೋನಾ ಸೋಂಕಿತರು ಗುಣಮುಖ ಹೊಂದಿ ಅಲ್ಲಿಂದ ತೆರಳುವ ವೇಳೆ ರೇಣುಕಾಚಾರ್ಯ ಅವರ ಕಾಲಿಗೆ ಬಿದ್ದರು, ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಪ್ರತಿನಿಧಿ ಎಂಬುದನ್ನ ಲೆಕ್ಕಿಸದೇ ಮಾನವೀಯತೆ ಇರುವ ಮನುಷ್ಯನಾಗಿ ಸೋಂಕಿತರೊಂದಿಗೆ ಬೆರೆತು, ಅವರಿಗೆ ಉತ್ತಮ ಆಹಾರ, ಯೋಗ, ಧ್ಯಾನ, ಮನರಂಜನೆ ವ್ಯವಸ್ಥೆ ಮಾಡಿ ಶೀಘ್ರ ಗುಣಮುಖರಾಗಲು ಅವಕಾಶ ಕಲ್ಪಿಸಿದ್ದನ್ನು ನೆನೆದು ಭಾವಪರವಶರಾದರು.

ರೇಣುಕಾಚಾರ್ಯ ದಂಪತಿಗಳು ಕೂಡ ಸೋಂಕಿತರೊಂದಿಗೆ ಬೆರೆತು, ಗುಣಮುಖರಾಗಿ ಬಿಡುಗಡೆ ಆಗುತ್ತಿರುವವರಿಗೆ ಪುಷ್ಪವೃಷ್ಟಿ ಸುರಿಸಿ ಅವರನ್ನು ಬೀಳ್ಕೊಟ್ಟು, ಅವರೊಂದಿಗೆ ಸಂತಸದ ಆನಂದಭಾಷ್ಪ ಹರಿಸಿದರು.

ಕೊರೋನಾ ಬೆಸೆದ ಭಾವನಾತ್ಮಕ ಸಂಬಂಧ ಇದಾಗಿದ್ದು, ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಮನೆಗಳಿಗೆ ಹೋಗುವ ಸಂದರ್ಭದಲ್ಲಿ ಗುಣಮುಖರಾದ ಬಂಧುಗಳು ತೋರಿಸಿದ ಭಾವನಾತ್ಮಕ ಅಭಿಮಾನಕ್ಕೆ ಆ ಕ್ಷಣ ಕಾಲ ಕಣ್ಣುಗಳು ಒದ್ದೆಯಾದವು ಎಂದು ಹೇಳಿಕೊಂಡಿದ್ದಾರೆ.

👇 ಕ್ಲಿಕ್ ಮಾಡಿ ವಿಡಿಯೋ ನೋಡಿ,

Leave a Reply

Your email address will not be published. Required fields are marked *

error: Content is protected !!