ಉಚಿತ ಲಸಿಕೆ ನೀಡಿದ ಎಸ್ ಎಸ್ ಗೆ “ದಾವಣಗೆರೆ ರತ್ನ” ಬಿರುದು: ಜೀವಕ್ಕಿಂತ ಜೀವನ ದೊಡ್ಡದಲ್ಲಿ – ಶಾಮನೂರು

ದಾವಣಗೆರೆ: ಶಾಸಕ  ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ  ನಗರದ ಪಾರ್ಶ್ವನಾಥ್ ದಿಗಂಬರ ಜೈನ ಮಂದಿರದಲ್ಲಿ ಮಹಾವೀರ ಮಂಚ ಹಾಗೂ ಪದ್ಮಾಂಬ ಮಹಿಳಾ ಸಮಾಜದ ಸಹಯೋಗದೊಂದಿಗೆ ನಡೆಯಿತು.

ಲಸಿಕಾ ಕೇಂದ್ರಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ  ಶಾಮನೂರು ಶಿವಶಂಕರಪ್ಪನವರು ಭೇಟಿ ನೀಡಿ ಲಸಿಕೆ ಪಡೆದವರ ಆರೋಗ್ಯ ವಿಚಾರಿಸಿದರು.

ಜೀವಕ್ಕಿಂತ ಜೀವನ ದೊಡ್ಡದ್ದಲ್ಲ ಎಂಬ ತಿಳುವಳಿಕೆ ಯಾವಾಗ ಮನುಷ್ಯನಿಗೆ ಅರ್ಥವಾಗುವುದೋ ಆಗ ಮನುಷ್ಯನ ಮನಸ್ಸು ಪರೋಪಕಾರದತ್ತ ವಾಲಾಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಶಾಸಕರಿಗೆ “ದಾವಣಗೆರೆ ರತ್ನ” ಬಿರುದು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಹಾವೀರ್ ಯುವಮಂಚ್‌ನ ಅಧ್ಯಕ್ಷರಾದ ಜಿತೇಂದ್ರ ಬೇತೂರ್, ಕೋಮಲ್ ಕುಂದಪ್ಪ, ಧರಣೇಂದ್ರ ಪ್ರಸಾದ್, ಶಾಂತರಾಜು ವನಕುದುರೆ, ಅಭಿಷೇಕ್ ಬೇತೂರ್, ಮಹಾವೀರ್,ಮಹೇಂದ್ರ ಹೊಳಲು,ನಾಗವರ್ಮ,ದರ್ಶನ್, ಪ್ರಮೋದ್, ವಿಜಯಕುಮಾರ್, ಸಂತೋಷ್ ಮಂಗಜ್, ಸಚಿನ್.ಬಿ. ಟಿ.ಪದ್ಮಂಬ ಮಹಿಳಾ ಸಮಾಜದ ಅಧ್ಯಕ್ಷರಾದ ಕವಿತಾ ಧರಣೇಂದ್ರ ಪ್ರಸಾದ್, ಅರ್ಚನಾ ಮಹಾವೀರ್,ಕುಸುಮ ಸುನಿಲ್ ಚೇತನಪದ್ಮರಾಜ್,ಹಾಗೂ ಬಾಪೂಜಿ ಜೆ,ಜೆ,ಎಂ,ಸಿ,ಸಿಬ್ಬಂದಿವರ್ಗ , ಸಮಾಜದ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!