ಪ್ರಾಣಿ-ಪಕ್ಷಿಗಳನ್ನ ದತ್ತು ಪಡೆದು ಮತ್ತೊಂದು ಮಾನವೀಯ ಹೆಜ್ಜೆ ಇಟ್ಟ ‘ನಮ್ಮ ದಾವಣಗೆರೆ’ ತಂಡ

ದಾವಣಗೆರೆ: ಪ್ರಾಣಿ ಪಕ್ಷಿಗಳ ಹಸಿವಿಗೂ ಓಗೋಟ್ಟಿದ್ದ ‘ನಮ್ಮ ದಾವಣಗೆರೆ’ ತಂಡವು ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಮೃಗಾಲಯದಿಂದ 9 ಪ್ರಾಣಿ ಹಾಗೂ ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ‌ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

35 ಸಾವಿರ ರೂಪಾಯಿ ಹಣ ಪ್ರಾಣಿ ಪಕ್ಷಿಗಳ ದತ್ತಿಗಾಗಿ, 5 ಸಾವಿರ ರೂಪಾಯಿ ಪ್ರಾಣಿ ಹಾಗೂ ಪಕ್ಷಿಗಳ ಮೆಡಿಸಿನ್ ಗಾಗಿ, ಹಾಗೂ ಇನ್ನುಳಿದ 5 ಸಾವಿರ ಹಣ ಮೃಗಾಲಯದಲ್ಲಿರುವ ಸಿಬ್ಬಂದಿಗಳಿಗೆ ಆಹಾರ ಕಿಟ್ ಗಳನ್ನು ನೀಡಲಾಗುತ್ತೆ, ಒಟ್ಟು ನಮ್ಮ ತಂಡದಿಂದ 45 ಸಾವಿರ ಹಾಣವನ್ನ ಸಂಗ್ರಹಿಸಿದ್ದೆವೆ.

  • ರೋಹಿತ್  ಎಸ್ ಜೈನ್.

ಲಾಕ್ಡೌನ್ ಅವಧಿಯಲ್ಲಿ ಬಡ-ಮಧ್ಯಮ ವರ್ಗದ ಹಸಿವಿಗೆ ಸ್ಪಂದಿಸಿ ಆಹಾರಧಾನ್ಯಗಳ ಕಿಟ್ ಕೊಡುವ ಜತೆಗೆ ಪ್ರಾಣಿಪಕ್ಷಿಗಳ ಮೇಲೂ ದಯೆ
ತೋರಿ ಅವುಗಳಿಗೆ ಬಿಸಿ, ತಾಜಾ ಆಹಾರ, ಹಣ್ಣು-ಹಂಪಲು ಕೊಡುತ್ತಾ ಪ್ರಾಣಿ ಪ್ರೀತಿ ಮೆರೆದಿದ್ದ ಈ ತಂಡದ ಸದಸ್ಯರು ಈಗ ಮೃಗಾಲಯದಿಂದ ಒಂಭತ್ತು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.

ಲವ್ ಬರ್ಡ್ಸ್, ಗಿಳಿ, ನವಿಲು, BUDGERIAR, 4 HORNED ANTILOPE, SPOTTED DEER, BLACK BUCK, GOLDEN YELLOW
PHEASANT, LADY AMHERST’S PHEASANT ಇವುಗಳನ್ನು ಒಂದು ವರ್ಷದ ಅವಧಿಗೆ ಸದಸ್ಯರು ದತ್ತು ಪಡೆದಿದ್ದಾರೆ.

ರೋಹಿತ್ ಎಸ್. ಜೈನ್, ವೃಷಭ್, ನಿಖಿಲ್,ದೇವಿಕಾ, ಸುನೀಲ್ ಬಾಗೇವಾಡಿ, ಶಿವಯೋಗಿ, ದೀಪಕ್, ವಿವೇಕ್ ಜೈನ್, ಆಶೀಶ್ ಜೈನ್, ಸಮೀರ್ ಟಕ್ಕರ್, ಬಾಬು ಸುಬ್ರಹ್ಮಣ್ಯ, ಪ್ರಕಾಶ್, ನಿಹಾಲ್ ಸೋನಿ, ಸುಮತಿ ತಳವಾರ್, ಆನಂದ್ ಜೈನ್ ಇವರುಗಳೆಲ್ಲಾ ಸೇರಿ 9 ಬಗೆಯ  ಪ್ರಾಣಿ- ಪಕ್ಷಿಗಳನ್ನು ದತ್ತು ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!