ದಾವಣಗೆರೆ : ದಾವಣಗೆರೆ ನಗರ ಮತ್ತು ಗ್ರಾಮಗಳ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಶಾಸಕರೂ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.
ಅವರು ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 21ನೇ ವಾಡ್ ್ನ ಬಸಾಪುರ, ಎಲ್.ಬಿ.ಎಸ್.ನಗರ, ಬಂಬೂಬಜಾರ್ ಎಡಭಾಗದ ವಿನಾಯಕ ಬಡಾವಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.
ಈ ಭಾಗದಲ್ಲಿ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿವ ನೀರಿನ ವ್ಯವಸ್ಥೆಗಾಗಿ ಕುಡಿವ ನೀರಿನ ಯೋಜನೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಇನ್ನು ಬಡವರಿಗೆ ಬೇಕಾಗಿರುವ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ತೆರಿಗೆ ವಿಧಿಸಿರುವುದರಿಂದ ದುಪ್ಪಟ್ಟು ಬೆಲೆ ಹೆಚ್ಚಳಗೊಂಡು ಬಡವರು, ಕೃಷಿ ಕಾರ್ಮಿಕರು ಬದುಕುವುದೇ ದುಸ್ತರವಾಗಿದೆ ಎಂದರು.
ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪನವರನ್ನು ಬೆಂಬಲಿಸಿ ಉದ್ಯಮಿ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಅವರ ನೇತೃತ್ವದಲ್ಲಿ ಉದ್ಯಮಿ ಅಥಣಿ ವೀರಣ್ಣ, ಎಸ್.ಕೆ.ವೀರಣ್ಣ, ನಾಯಕ ಸಮಾಜದ ಅಧ್ಯಕ್ಷರಾದ ಬಿ.ವೀರಣ್ಣ, ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಗ್ರಾಮಾಂತರ ಪ್ರದೇಶಗಳ ಮನೆ-ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶೀವಲೀಲಾ ಕೊಟ್ರಯ್ಯ, ಎಸ್ ಸುರೇಂದ್ರಪ್ಪ ಸಿ ಮಹೇಶ್ವರಪ್ಪ ಬಾಮ ಬಸವರಾಜಯ್ಯ ಶಿವಲೀಲಾ ಕೊಟ್ರಯ್ಯ, ಕೆ.ಎಲ್. ಹರೀಶ್ ಬಸಾಪುರ, ಎಂ.ಎಸ್.ಕೊಟ್ರಯ್ಯ, ಗೌಡ್ರ ರಾಜಶೇಖರ್, ಕೆ ಸಿ ಲಿಂಗರಾಜ್, ಬಿಟಿ ಮರಳಸಿದ್ದಪ್ಪ, ಅದಿಮನಿ ಶಿವಕುಮಾರ್, ಕೆ.ಬಿ.ಲಿಂಗರಾಜ್, ಸಿ.ಬಿ. ಶ್ರೀನಿವಾಸ್, ಅರಳಿ ಉಮೇಶ್, ವಿಜಯ್ ಕುಮಾರ್, ಬಾತಿ ಜೈ ರಾಜ್, ಅರುಣ್ ಕುಮಾರ್, ಎ ಎಚ್ ಹನುಮಂತಪ್ಪ, ಗಂಗಾಧರಚಾರ್, ಬಿಕೆ ನಾಗೇಂದ್ರಪ್ಪ, ಕರಿಬಸಯ್ಯ, ಕ್ಯಾಪಿನ ಚೌಡಪ್ಪ, ನಾಗರಾಜ್,ಜಿ ತಿಪ್ಪೇಸ್ವಾಮಿ, ರುದ್ರೇಶ್, ತಿಪ್ಪೇಶ್, ಹನುಮಂತಪ್ಪ, ತಿಪ್ಪೇಶ್, ನವೀನ್, ಪರಶುರಾಮ್, ಕಾಂಗ್ರೆಸ್ ಪಕ್ಷದ ಪ್ರಮುಖರು, ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
