ಲೋಕಿಕೆರೆಯಲ್ಲಿ ಗ್ರಂಥಪಾಲಕರ ದಿನ: ಉಪನ್ಯಾಸ ನೀಡಿದ ಹೈಸ್ಕೂಲು ವಿಧ್ಯಾರ್ಥಿ

ದಾವಣಗೆರೆ : ಆಗಸ್ಡ್ 15 ರಂದು ತಾಲೂಕಿನ ಗ್ರಾಮೀಣ ಸೊಗಡಿನ ಐತಿಹಾಸಿಕ ಹಿನ್ನೆಲೆ ಇರುವ ಊರು ಲೋಕಿಕೆರೆ ಇಲ್ಲೊಂದು ಪಂಚಾಯತ್ ಒಳಪಟ್ಟ ಗ್ರಂಥಾಲಯ ಇದೆ. ಈ ಗ್ರಂಥಾಲಯ ಉಸ್ತುವಾರಿ ಗ್ರಾಮದ ಗ್ರಂಥಪಾಲಕ ಮಂಜಪ್ಪ ಟಿ ಹೈಸ್ಕೂಲು ವಿಧ್ಯಾರ್ಥಿ ಶಶಾಂಕ್ ನನ್ನ ತರಬೇತಿ ಗೊಳಿಸಿ ಗ್ರಂಥಾಲಯ ಜನಕ ಎಸ್ ಆರ್ ರಂಗನಾಥನ್ ಬಗ್ಗೆ ಅಧ್ಬುತ ಉಪನ್ಯಾಸ ನೀಡಿದ ಸಂದರ್ಭದಲ್ಲಿ ಗ್ರಾಮದ ಹಿರಿಯರು ಪಂಚಾಯತ್ ಸದಸ್ಯರು ಶಾಲಾ ಕಾಲೇಜುಗಳ ಮಕ್ಕಳು ಸಾಕ್ಷಿ ಯಾದರು.

ಶಾಲಾ ಕಾಲೇಜುಗಳ ಮಕ್ಕಳು ಸಾಮಾನ್ಯ ಜ್ಞಾನ ಪ್ರಸ್ತುತ ಸಂದರ್ಭ ಕಾಲಮಾನ ದಲ್ಲಿ ವೈಚಾರಿಕ ವೈಜ್ಞಾನಿಕ ತಿಳುವಳಿಕೆಮೂಡಿಸುವ ಶಿಬಿರ ಹಮ್ಮಿಕೊಳ್ಳಲಾಗಿತ್ತು, ಈ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಪಿ ಡಿ ಓ ಶ್ರೀಮತಿ ಅಶ್ವಿನಿ , ಪುರಂದರ್ ಲೋಕಿಕೆರೆ ಹಲವರು ಪಾಲ್ಗೊಂಡಿದ್ದರು ಸಮಾರೋಪ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಿಲ್ಪಾ ಶಿವಮೂರ್ತಿ ಉಪಾಧ್ಯಕ್ಷರಾದ ಪಾರ್ವತಮ್ಮ ಅಡಿವೆಪ್ಪಸದಸ್ಯರಾದ ಉಮೇಶ್ ಟಿ.ವಿ ,ಹೆಚ್ ಮೂರ್ತಿ, ಮಂಜಪ್ಪ, ಗ್ರಂಥಪಾಲಕ ಟಿ.ಮಂಜಪ್ಪ,ತಾಳಿಕಟ್ಟೆ ನಾಗರಾಜ್, ಪರಮೇಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!