ದಾವಣಗೆರೆ ಪಾಲಕೆಯ ಆದಾಯ ಸಂಪನ್ಮೂಲಗಳಿಂದ 2023-24 ನೇ ವರ್ಷದಲ್ಲಿ ನಿರೀಕ್ಷಿಸಿದ ಆದಾಯದ ಮಾಹಿತಿ

ದಾವಣಗೆರೆ: ಪಾಲಿಕೆಯ ಆದಾಯ ಸಂಪನ್ಮೂಲಗಳು ರಾಜ್ಯ ಸರ್ಕಾರದಿಂದ ಸ್ವೀಕೃತವಾಗುವ ರಾಜಸ್ವ ಹಾಗೂ ಬಂಡವಾಳ ಅನುದಾನಗಳು ಹಾಗೂ ಪಾಲಕೆಯ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕಂದಾಯ, ಕಟ್ಟಡ ಪರವಾನಿಗೆ, ಬಾಡಿಗೆ ಇತ್ಯಾದಿ ಆದಾಯಗಳನ್ನು ಒಳಗೊಂಡಿದ್ದು 2023-24 ನೇ ಆರ್ಥಿಕ ವರ್ಷದಲ್ಲಿ ಈ ಕೆಳಕಂಡಂತೆ ಅದಾಯಗಳನ್ನು ನಿರೀಕ್ಷಿಸಲಾಗಿದೆ.

ಪಾಲಕೆಯ ಸ್ವಂತ ಆದಾಯ ಮೂಲಗಳು
ಆಸ್ತಿ ತೆರಿಗೆ: ನಗರ ವ್ಯಾಪ್ತಿಯಲ್ಲಿನ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳ ಮೇಲೆ ವಿಧಿಸಲಾಗುವ ‘ಆಸ್ತಿ ತೆರಿಗೆಯು ಪಾಲಿಕೆಯ ಅತ್ಯಂತ ಪ್ರಮುಖ ಸ್ವಂತ ಆದಾಯ ಮೂಲವಾಗಿದ್ದು ಪ್ರಸ್ತುತ ಇ-ಆಸ್ತಿ ತಂತ್ರಾಂಶದಲ್ಲಿ ನಗರದ ಎಲ್ಲಾ ಆಸ್ತಿಗಳ ವಿವರಗಳನ್ನು ನಮೂದಿಸುವ ಕಾರ್ಯ ಜಾರಿಯಲ್ಲಿದ್ದು ಸದರಿ ಕಾರ್ಯ ಪೂರ್ಣಗೊಂಡ ತರುವಾಯ ಶೇ 100% ರಷ್ಟು ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಸದರಿ ಸಾಲಿನಲ್ಲ ಒಟ್ಟು ರೂ. 3000.00 ಲಕ್ಷಗಳ ಆಸ್ತಿ ತೆರಿಗೆ ಸಂಗ್ರಹಣೆಯ ಗುರಿ ಹೊಂದಲಾಗಿದೆ.

ನೀರು ಸರಬರಾಜು ಬಳಕೆದಾರರ ಶುಲ್ಕ: ಜಲಸಿರಿ-24*7 ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ಅಂತಿಮ ಹಂತದ್ದು ಯೋಜನೆ ಜಾರಿಯಾದ ತರುವಾಯ ನೀರಿನ ದರ ಸಂಗ್ರಹ ಕೆ.ಯು.ಐ.ಡಿ.ಎಫ್.ಸಿ. ವ್ಯಾಪ್ತಿಗೆ ಬರಲಿದೆ. ಬಾಕಿ ಮೊತ್ತ ಪಾವತಿಗೆ ವಸೂಲಾತಿ ಆಂದೋಲನಗಳ ಮೂಲಕ ವಸೂಲಾತಿಯಲ್ಲಿ ಬಿಗಿ ನಿಯಮಗಳನ್ನು ಅನುಸರಿಸಿ ಬಾಕಿ ವಸೂಲಾತಿಯಲ್ಲಿ ದಕ್ಷತೆಯನ್ನು ತಂದು ಅಂದಾಜು ರೂ. 500.00 ಲಕ್ಷಗಳ ಆದಾಯ ಸಂಗ್ರಹಣೆಯ ಗುರಿ ಹೊಂದಲಾಗಿದೆ.

ನೀರು ಸರಬರಾಜು ಸಂಪರ್ಕ ಶುಲ್ಕ: ಗೃಹಬಳಕೆ, ವಾಣಿಜ್ಯ ಬಳಕೆ ಹಾಗೂ ಕೈಗಾರಿಕಾ ಬಳಕೆಯ ಕುಡಿಯುವ ನೀರು ಸರಬರಾಜು ಹೊಸದಾಗಿ ನೀಡುವ ಸಂಪರ್ಕಗಳಿಂದ ಮುಂದಿನ ಸಾಲಿನಲ್ಲಿ ಅಂದಾಜು ರೂ. 10.00 ಲಕ್ಷಗಳ ಆದಾಯ ಬರುವ ನಿರೀಕ್ಷೆ ಇದೆ.

ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕ: ಪಾಲಿಕೆ ವ್ಯಾಪ್ತಿಯ ವಸತಿ ಕಟ್ಟಡಗಳು ಹಾಗೂ ಖಾಸಗಿ ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಿ ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕವನ್ನು ವಿಧಿಸಿ ವಸೂಲಿ ಮಾಡಲಾಗುತ್ತಿದೆ. 2023-24
ನೇ ಸಾಲಿನಲ್ಲಿ ಅಂದಾಜು ರೂ. 105.00 ಲಕ್ಷಗಳ ಆದಾಯ ನಿರೀಕ್ಷೆ ಮಾಡಲಾಗಿದೆ ಹಾಗೂ ಸದರಿ ಸಾಲಿನಲ್ಲಿ ಹೊಸ ಒಳಚರಂಡಿ ಸಂಪರ್ಕ ಶುಲ್ಕ ರೂ. 60.00 ಲಕ್ಷ ಒಟ್ಟಾರೆಯಾಗಿ ರೂ. 165.00 ಲಕ್ಷಗಳನ್ನು ಆದಾಯ ಬರುವ ನಿರೀಕ್ಷೆ ಇದೆ.

ಸಂತೆ ಸುಂಕ: ಸಂತೆಗಳು ಹಾಗೂ ಮಾರುಕಟ್ಟೆಗಳಲ್ಲಿ ದೈನಂದಿನ ವ್ಯಾಪಾರ ಮಾಡುವ ರಸ್ತೆ ಬದಿ ವ್ಯಾಪಾರಿಗಳಿಂದ ಕನಿಷ್ಠ ದರದಲ್ಲಿ ಸಂಸ್ಥೆ ಸುಂಕವನ್ನು ಸಂಗ್ರಹಿಸಲಾಗುತ್ತಿದ್ದು ವಾರ್ಷಿಕ ಹರಾಜಿನ ಮೂಲಕ ಸಂತೆ ಸುಂಕ ಸಂಗ್ರಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಈ ಮೂಲದಿಂದ ಸದರಿ ಸಾಲಿನಲ್ಲಿ ಒಟ್ಟು: ರೂ. 60.00 ಲಕ್ಷಗಳ ಆದಾಯ ನಿರೀಕ್ಷೆ ಮಾಡಿದೆ.

ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕ: ‘ಸರ್ಕಾರದ ಮಾರ್ಗಸೂಚಿಗಳ ಅನುಸಾರ ದರಗಳನ್ನು ನಿಗಧಿಪಡಿಸಿ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುತ್ತಿದ್ದು, ಸದರಿ ಶೀರ್ಷಿಕೆಯಡಿ ರೂ. 500.00 ಲಕ್ಷಗಳನ್ನು ನಿರೀಕ್ಷಿಸಲಾಗಿದೆ.

ಕಟ್ಟಡ ಪರವಾನಿಗೆ ಶುಲ್ಕ: “ನಿರ್ಮಾಣ-2” ತಂತ್ರಾಂಶದ ಮೂಲಕ ಕಟ್ಟಡ ಪರವಾನಿಗೆಗಳನ್ನು ವಿಳಂಬವಿಲ್ಲದೆ ನೀಡಲಾಗುತ್ತಿದೆ. ಮುಂದಿನ ಸಾಲಿನಲ್ಲಿ ಒಟ್ಟು ರೂ. 210,00 ಲಕ್ಷಗಳ ಆದಾಯವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.

ರಸ್ತೆ ಕಡಿತ ಶುಲ್ಕ: ಟೆಲಿಕಾಂ ಸಂಸ್ಥೆಗಳು ಫೈಬರ್ ಆಪ್ಟಿಕ್ಸ್ ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳು ಹೈಟೆನ್ಸನ್ ವಿದ್ಯುತ್ ಕೇಬಲ್‌ಗಳ ಜಾಲವನ್ನು ಆಳವಡಿಸುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಹಲವೆಡೆ ರಸ್ತೆಗಳನ್ನು ಕಡಿಯಲಾಗುತ್ತಿದೆ. ಸದರಿ ಸಂಸ್ಥೆಗಳಿಗೆ ನಿಯಮಾನುಸಾರ ರಸ್ತೆ ಕಡಿತದ ಶುಲ್ಕವನ್ನು ವಿಧಿಸಿ ವಸೂಲಿ ಮಾಡಲಾಗುತ್ತಿದೆ. ಸದರಿ ಮೂಲದಿಂದ ರೂ. 150.00 ಲಕ್ಷಗಳ ಆದಾಯ ಸಂಗ್ರಹಣೆಯ ಗುರಿ ಇದೆ.

ಆಸ್ತಿಗಳ ವರ್ಗಾವಣೆ ಮೇಲನ ಹೆಚ್ಚುವರಿ ಅಧಿಬಾರ ಶುಲ್ಕ: ಪಾಲಿಕೆ ವ್ಯಾಪ್ತಿಯಲ್ಲಿಯ ಸ್ಥಿರಾಸ್ತಿಗಳ ವರ್ಗಾವಣೆ ಸಂದರ್ಭದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಂಗ್ರಹವಾಗುವ ಹೆಚ್ಚುವರಿ ಅಧಿಬಾರ ಶುಲ್ಕವನ್ನು ಪ್ರತಿ ವರ್ಷ ಪಾಲಿಕೆಗೆ ವರ್ಗಾಯಿಸಲಾಗುತ್ತಿದ್ದು, ಮುಂದಿನ ಸಾಲಿನಲ್ಲಿ ಅಂದಾಜು ರೂ. 60.00 ಲಕ್ಷಗಳ ಮೊತ್ತವನ್ನು ಮುದ್ರಾಂಕ ಇಲಾಖೆಯಿಂದ ನಿರೀಕ್ಷಿಸಲಾಗಿದೆ.

ಅಭಿವೃದ್ಧಿ ಶುಲ್ಕ: ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಲಾಗುವ ಖಾಸಗಿ ಬಡಾವಣೆಗಳ ಅನುಮೋದನೆ ಹಾಗೂ ಏಕ ನಿವೇಶನ ವಿನ್ಯಾಸ ಅನುಮೋದನೆ ಸಮಯದಲ್ಲಿ ಅಭಿವೃದ್ಧಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದ್ದು ಮುಂದಿನ ಸಾಲಿನಲ್ಲಿ ಅಂದಾಜು ರೂ. 45.00 ಲಕ್ಷಗಳ ಆದಾಯ ಸಂಗ್ರಹಣಿಯ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

error: Content is protected !!