d roopa; ರೇಷ್ಮೆ ಸೀರೆಯುಟ್ಟು ರಾಣಿಯಾಗಿ ಮಿಂಚಿದ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್

ದಾವಣಗೆರೆ, ಅ.28: ಖಡಕ್ ಪೊಲೀಸ್​​ ಆಫೀಸರ್ ಎಂದೇ ಗುರುತಿಸಿಕೊಂಡ ದಾವಣಗೆರೆ ಮೂಲದ ಡಿ ರೂಪಾ (D Roopa) ಅವರು ಖಾಕಿ ಬಿಟ್ಟು ಇದೀಗ ರೇಷ್ಮೆ ಸೀರೆಯಲ್ಲಿ ಮಿಂಚಿದ್ದು ಅಭಿಮಾನಿಗಳು ಅಚ್ಚರಿಯಾಗಿದ್ದಾರೆ.

ಇದೀಗ ರಾಜ್ಯದ ಉನ್ನತ ಹುದ್ದೆಗಳಲ್ಲಿ ಒಂದಾದ ಆಂತರಿಕ ಭದ್ರತಾ ವಿಭಾಗದ ಐಜಿಪಿ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು, ನವರಾತ್ರಿ ಅಂಗವಾಗಿ ವಿಶೇಷ ಫೋಟೋ ಶೂಟ್‌ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಥೇಟ್‌ ರಾಣಿ ಚೆನ್ನಮ್ಮನ ಹಾಗೇ ಕಾಣಿಸುತ್ತಿದ್ದೀರಾ ಎಂದು ಪ್ರತಿಕ್ರಿಯಿಸಿದ್ದಾರೆ.

ಬರೀ ಪೊಲೀಸ್​​ ಆಫೀಸರ್ ಮಾತ್ರವಲ್ಲದೇ ಸಂಗೀತದಲ್ಲಿ ಒಲವು ಹೊಂದಿದ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿಯನ್ನು ಪಡೆದಿದ್ದು, ಭರತನಾಟ್ಯ ನೃತ್ಯಗಾರ್ತಿಯಾಗಿ ತಮ್ಮ ಒಲವನ್ನು ಮೂಡಿಸಿಕೊಂಡಿದ್ದಾರೆ.

ಇನ್ನೂ ಈ ಪೋಟೋಗಳನ್ನು ಹಂಚಿಕೊಂಡ ಫ್ಯಾಷನ್‌ ಡಿಸೈನರ್‌ ಭಾರ್ಗವಿ ಅವರು, “ಈ ಪೋಟೋ ಬರೀ ಫ್ಯಾಷನ್ ಮಾತ್ರ ಅಲ್ಲ, ಡಿ ರೂಪ ಅವರು ಖಡಕ್ ಅಧಿಕಾರಿಯಾಗಿದ್ದು, ನಮ್ಮ ರಾಜ್ಯದ ಶಕ್ತಿ, ಅನುಗ್ರಹ ಮತ್ತು ಸಬಲೀಕರಣದ ಸಾಕಾರ” ಎಂದು ಪೋಸ್ಟ್ ಮಾಡಿದ್ದಾರೆ.

congress; ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಮಾಡ್ತಾ ಇದಾರೆ: ಶಾಸಕ ರವಿ ಗಾಣಿಗ ಆರೋಪ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!