CEIR; ಸಿಇಐಆರ್ ಪೋರ್ಟಲ್ ಬಳಸಿ 20 ಲಕ್ಷ ಮೊಬೈಲ್ ಪತ್ತೆ ಹಚ್ಚಿದ ಪೊಲೀಸ್ ಪಡೆ

ದಾವಣಗೆರೆ, ಅ.28: ಕಳೆದ ದಿನಗಳಲ್ಲಿ ಕದ್ದ ಮತ್ತು ಕಳೆದುಹೋದ 130 ಮೊಬೈಲ್ ಗಳನ್ನು ಸಿಇಐಆರ್ (CEIR) ಪೋರ್ಟಲ್ ಬಳಸಿಕೊಂಡು ಸುಮಾರು 20 ಲಕ್ಷ ಮೊಬೈಲ್ ಗಳನ್ನು ಪತ್ತೆ ಹಚ್ಚಿದ ಪೊಲೀಸ್ ಪಡೆ ಆಯಾ ಫೋನ್ ಗಳನ್ನು ಮೊಬೈಲ್ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಇದೀಗ ನಿರಾಳರಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್​ಗಳನ್ನು ಪತ್ತೆ ಹಚ್ಚಲು ಸಿಇಐಆರ್ ಪೋರ್ಟಲ್ ತುಂಬಾ ಸಹಕಾರಿಯಾಗಿದೆ.

ಕಳುವಾದ, ಸುಲಿಗೆಯಾದ, ಕಾಣೆಯಾದ ಮೊಬೈಲ್​ಗಳ ಬ್ಲಾಕ್ ಮಾಡಲು ಕೇಂದ್ರ ಟೆಲಿ ಕಮ್ಯುನಿಕೇಶನ್ ಇಲಾಖೆಯಿಂದ ಜಾರಿಗೆ ತಂದಿರುವ ನೂತನ ವ್ಯವಸ್ಥೆ ಈ ಪೋರ್ಟಲ್​ನಲ್ಲಿದ್ದರಿಂದ ತನಿಖೆಗೆ ಸಹಕಾರಿಯಾಗಿದೆ. ಜನರು ಮೊಬೈಲ್ ಕಳೆದುಕೊಂಡು ಈ ಸಿಇಐಆರ್ ಪೋರ್ಟಲ್​ಗೆ ಭೇಟಿ ನೀಡಿ, ತಮ್ಮ ಮೊಬೈಲ್​ನ ಸಂಪೂರ್ಣ ಮಾಹಿತಿ ನೀಡಿ ನೋಂದಾಯಿಸಿ, ತಮ್ಮ ಮೊಬೈಲ್​ ಅನ್ನು ಬ್ಲಾಕ್ ಮಾಡಿದ್ದರು.

lokayukta; ಭ್ರಷ್ಟರಿಗೆ ಸಿಂಹ ಸ್ವಪ್ನವಾದ ಲೋಕಾಯುಕ್ತ ಎಸ್ ಪಿ ಕೌಲಾಪುರೆ

ನಂತರ ದಾವಣಗೆರೆ ಪೊಲೀಸರು ನೂತನ ಸಿಇಐಆರ್ ವೆಬ್ ಪೋರ್ಟಲ್ ಮೂಲಕ ವಿವಿಧ ಠಾಣೆಗಳ ವ್ಯಾಪ್ತಿಯಡಿ ಸುಮಾರು 20 ಲಕ್ಷ ಮೌಲ್ಯದ ವಿವಿಧ ಕಂಪನಿಯ 130 ಮೊಬೈಲ್​ಗಳನ್ನು ವಶಕ್ಕೆ ಪಡೆದು ವಾರಸುದಾರರಿಗೆ ಹಿಂದಿರುಗಿಸಿದ್ದು, ಜನರಲ್ಲಿ ಸಂತಸ ಮೂಡಿದೆ.

ಸಿಇಐಆರ್ ಪೋರ್ಟಲ್ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್‌ ತಿಂಗಳಿಂದ ಪ್ರಸ್ತುತ ತಿಂಗಳಿನವರೆಗೆ ಒಟ್ಟು 3,290 ಮೊಬೈಲ್​ಗಳನ್ನು ಬ್ಲಾಕ್ ಮಾಡಲಾಗಿದೆ. ಅವುಗಳಲ್ಲಿ 500 ಮೊಬೈಲ್​ಗಳನ್ನು ಪತ್ತೆ ಮಾಡಲಾಗಿದೆ. ಇದಲ್ಲದೆ ಈಗಾಗಲೇ 100 ಮೊಬೈಲ್​ಗಳನ್ನು ಮೊಬೈಲ್‌ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸ್​ ಇಲಾಖೆ ಪ್ರಕಟಣೆ ಹೊರಡಿಸಿದೆ.

ಸಾರ್ವಜನಿಕರು ತಮ್ಮ ಮೊಬೈಲ್ ಕಳುವು, ಸುಲಿಗೆ ಅಥವಾ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ ಸಿಇಐಆರ್ ವೆಬ್ ಪೋರ್ಟಲ್​ಗೆ ಭೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಪೊಲೀಸ್ ಪಡೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!