ಕೃಷಿಕರಿಗೆ ವನ್ಯ ಜೀವಿಗಳ ಕಾಟ; ಅರಣ್ಯ ಕಾಯ್ದೆ ತಿದ್ದುಪಡಿಗೆ ರಾಷ್ಟ್ರೀಯ ಕಿಸಾನ್ ಮಹಾ ಸಂಘ ಆಗ್ರಹ
ತಿರುವನಂತಪುರಂ: ರೈತರ ಜಮೀನುಗಳಲ್ಲಿ ವನ್ಯಮೃಗಗಳ ಹಾವಳಿ ತಡೆಗಟ್ಟಲು, ಅರಣ್ಯ ಕಾಯ್ದೆ ತಿದ್ದುಪಡಿಗೆ ರಾಷ್ಟ್ರೀಯ ಕಿಸಾನ್ ಮಹಾ ಸಂಘ ಒತ್ತಾಯಿಸಿದೆ. ತಿರುವನಂತಪುರದ ಅಧ್ಯಾಪಕ ಭವನದಲ್ಲಿ 13- 14 ಎರಡು ದಿನ ಈ ಸಮಾವೇಶ ನಡೆಯಿತು,
ರೈತರ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟವಾಗುತ್ತಿದೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ, ಸರ್ಕಾರಗಳು ನೀಡುವ ಪರಿಹಾರದ ಮೊತ್ತ ಅವೈಜ್ಞಾನಿಕವಾಗಿದೆ, ಎಂದು ಕೇರಳದ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಕಿಸಾನ್ ಮಹಾ ಸಂಘದ ರೈತ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಮಾವೇಶದಲ್ಲಿ ಕೆರಳ ರೈತರು ತಯಾರಿಸಿದ ರೈತ ಸಮಸ್ಯೆಗಳ ವರದಿಯನ್ನು ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವ ಪ್ರಸಾದ್, ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತದೆ ಎಂದು ಭರವಸೆ ನೀಡಿದರು. ಸಮಾವೇಶದಲ್ಲಿ ಭಾಗವಹಿಸಿದ ರಾಜ್ಯಸಭಾ ಸದಸ್ಯ ಮಣಿ ಮಾತನಾಡಿ ಅರಣ್ಯ ಕಾಯ್ದೆ ತಿದ್ದುಪಡಿ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಕಾಡಿನಿಂದ ನಾಡಿನ ಕಡೆಗೆ ಬರುತ್ತಿದ್ದು ಜನರಲ್ಲಿ ಭಯ ಬೀತಿ ಸೃಷ್ಟಿಯಾಗಿದೆ, ಅರಣ್ಯ ಇಲಾಖೆಯವರರು ಕಾಡುಗಳನ್ನು ಸಂರಕ್ಷಿಸಲು ವಿಫಲರಾಗಿರುವುದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ, ಚಿರತೆ ದಾಳಿಯಿಂದ ಕೆಲವು ದಿನಗಳ ಹಿಂದೆ ಮೂರು ನಾಲ್ಕು ರೈತರ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ, ಅರಣ್ಯ ಕಾಯ್ದೆ ತಿದ್ದುಪಡಿ ಮಾಡಿ ರೈತರಿಗೆ ವೈಜ್ಞಾನಿಕ ಪರಿಹಾರ ಸಿಗುವಂತಹ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದರು.
ಮಧ್ಯಪ್ರದೇಶದ ರಾಷ್ಟ್ರೀಯ ಕಿಸಾನ್ ಮಹಾ ಸಂಘ ಆಧ್ಯಕ್ಷ ಶಿವಕುಮಾರ್ ಕಕ್ಕ ಮಾತನಾಡಿದರು. ಕೇರಳ ರಾಜ್ಯದ ಮುಖ್ಯಸ್ಥ ಕೆ ವಿ ಬಿಜು ಸಮಾವೇಶ
ಆಯೋಜನೆ ಮಾಡಿದರು,
ಇದೇ ವೇಳೆ, ಪ್ರಧಾನಿ ಮೋದಿಯವರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರಾಷ್ಟ್ರಾದ್ಯಂತ ಪ್ರಬಲ ಹೂರಾಟ ರೂಪಿಸಲು ಫೆಬ್ರವರಿ ,5, 6,7 ರಂದು ರಾಜಸ್ಥಾನದ ಹನುಮಾನ್ ಗಾಡನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ರೈತ ಮುಖಂಡರ ಸಮಾಗಮ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.