ಜಗಳೂರಿನಲ್ಲಿ ಉದ್ಯೋಗ ಖಾತ್ರಿ ಜಾರಿಯಲ್ಲಿ ವಿಫಲ: ಗ್ರಾಮ ಪಂಚಾಯತಿ ವಿರುದ್ದ ಕೆಲಸ ತ್ಯಜಿಸಿ ಪ್ರತಿಭಟನೆ‌

 

ದಾವಣಗೆರೆ: ಉದ್ಯೋಗ ಖಾತ್ರಿ ಯೋಜನೆಯನ್ನು ಉಪಯುಕ್ತವಾಗಿ ಜಾರಿಗೊಳಿಸಲು ವಿಫಲವಾಗಿರುವ ಜಗಳೂರು ತಾಲೂಕು ತೋರಣಗಟ್ಟೆ ಗ್ರಾಮ ಪಂಚಾಯಿತಿ ವಿರುದ್ಧ ತೋರಗಟ್ಟೆ ಗುಡ್ಡದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಕೆಲಸ ತ್ಯಜಿಸಿ ಪ್ರತಿಭಟನೆ‌ ನಡೆಸಿದರು.

ಇದೇ ವೇಳೆ ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಗ್ರಾಮೀಣ ಭಾಗದ ಜನರ ನಿರುದ್ಯೋಗ ನಿವಾರಿಸಲು ಹಾಗೂ ಗುಳೇ ಹೋಗುವುದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿದ್ದು, ಆದರೆ, ಅಧಿಕಾರಿಗಳು ಅದನ್ನು ಉಪಯುಕ್ತವಾಗಿ ಜಾರಿಗೊಳಿಸಲು ವಿಫಲವಾಗಿದ್ದಾರೆ ಎಂದು ಕಿಡಿಕಾರಿದರು.

ಈ ಗ್ರಾಪಂ ಗೆ ಒಳಪಡುವ ಜಮ್ಮಾಪುರ ತೋರಣಗಟ್ಟೆಯಲ್ಲಿ ಸುಮಾರು 600 ಕ್ಕೂ ಅಧಿಕ ಮಹಿಳೆಯರು ಮತ್ತು ಪುರುಷರು ಪ್ರತಿನಿತ್ಯ ಕೇಲಸ ಮಾಡುತ್ತಿದ್ದಾರೆ. ಆದರೆ, ಇಂದು‌ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೋರಣಗಟ್ಟೆಯ ಗುಹೇಶ್ವರ ಗುಡ್ಡದಲ್ಲಿ ಗಿಡಗಳನ್ನು ನೆಡುವ ಉದ್ದೇಶದಿಂದ ಕೂಲಿಕಾರರಿಗೆ ಗುಡ್ಡದಲ್ಲಿ ಕೆಲಸ ನೀಡದೆ, ಕಲ್ಲುಬಂಡೆಗಳು ಇರುವ ಜಾಗದಲ್ಲಿ ಕೆಲಸ ‌ನೀಡಿದ್ದಾರೆ. ಇದರ ಹಿಂದಿನ ಉದ್ದೇಶ ಕೆಲಸಗಾರರನ್ನು ಒಕ್ಕಲೆಬ್ಬಿಸಿ, ಜೆಸಿಬಿ ಮುಖಾಂತರ ಕೆಲಸ ಮಾಡಿಸಿ ಕೆಲವರ ಹಿತಾಸಕ್ತಿ ಕಾಯುವುದಾಗಿದೆ ಎಂದು ಆರೋಪಿಸಿದರು.

ಸುಮಾರು 30ರಿಂದ 40ದಿನ ಕೇಲಸ ಮಾಡಿದರು ಸಹ ಅನೇಕ ಕೂಲಿಕಾರರಿಗೆ ಅವರಿಗೆ ಇನ್ನು ಸಹ ಅವರ ಕೇಲಸದ ವೇತನವನ್ನು ಪಾವತಿಸದೆ ಇರುವುದು ದುರಂತ. ಈ ಕೂಡಲೆ ಬಾಕಿ ಇರುವ ಕೂಲಿ ಕಾರ್ಮಿಕರ ಹಣವನ್ನು ಬಿಡುಗಡೆ ಮಾಡಬೇಕು.

ಯಾವುದೇ ಲೋಪದೋಷಗಳು ಇಲ್ಲದೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೋಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಟಪ್ಪ, ನಿಂಗಪ್ಪ, ತಿಪ್ಪೇಸ್ವಾಮಿ, ಜಯ್ಯಣ್ಣ, ನಾಗಣ್ಣ, ಮಧುಕುಮಾರ್, ಮಂಜುನಾಥ್, ಬಾಲಪ್ಪ, ಜಮ್ಮಾಪುರದ ಮಂಜುನಾಥ, ಗೌರಮ್ಮ, ರತ್ನಮ್ಮ, ಸರೋಜಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!