ಜುಲೈ‌ 1 ರಿಂದ ರಾಜ್ಯದ ಎಲ್ಲಾ ಶಾಲೆಯಲ್ಲಿ ಆನ್ ಲೈನ್ ಕ್ಲಾಸ್ ಪ್ರಾರಂಭ – ಶಿಕ್ಷಣ ಸಚಿವ ಸುರೇಶ್ ಕುಮಾರ್

 

ಬೆಂಗಳೂರು: ಜುಲೈ 1 ರಿಂದ ಎಲ್ಲಾ ಶಾಲೆಯಲ್ಲಿ ಆನ್ ಲೈನ್ ಕ್ಲಾಸ್ ಪ್ರಾರಂಭಿಸಲಾಗುತ್ತಿದ್ದು, ಡಿವೈಸ್ ಕೊರತೆ ನೀಗಿಸುವ ನಿಟ್ಟಿನಲ್ಲೂ ಚಿಂತನೆ ನಡೆದಿದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ‌ ಮಾತನಡಿದ ಅವರು, ಶಾಲೆ ಆರಂಭದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿವೆ. ಈ ಕುರಿತು 25 ರಂದು ಶಿಕ್ಷಣ ತಜ್ಞರ ಜೊತೆ ಸಭೆ ನಡೆಸಿದ್ದೇನೆ. ಇಂದು ಆರೋಗ್ಯ ಇಲಾಖೆ ಜೊತೆ ಒಂದು ಸುತ್ತಿನ ಸಭೆ ಮಾಡಲಾಗಿದೆ ದೇವಿಪ್ರಸಾದ್ ಶೆಟ್ಟಿ ನೀಡಿದ ವರದಿ ಕೂಡ ಅಧ್ಯಯನ ಮಾಡಿದ್ದೇವೆ ಎಂದರು.

ವಿಶೇಷವಾಗಿ ಗ್ರಾಮೀಣ ಮಕ್ಕಳು ಕಲಿಕೆಯಿಂದ ವಂಚಿತ ಆಗಬಾರದು ಎಂಬ ದೃಷ್ಟಿಯಿಂದ
ವಿದ್ಯಾಗಮ 2 ಅನ್ನೋ ಹೆಸರಲ್ಲಿ ತರಬೇಕು ಅನ್ನೋ ಅಪೇಕ್ಷೆ ಇದೆ. ವಿಷಯ ಪರಿಣಿತರು, ಟೆಕ್ನಿಕಲ್ ಅಡ್ವೈಸರಿ ಕಮಿಟಿ ಮೆಂಬರ್ಸ್ ಮಕ್ಕಳ ತಜ್ಞರು ಸೇರಿ ಒಂದು ಟಾಸ್ಕ್ ಫೋರ್ಸ್ ರಚನೆ ಮಾಡಲಿದ್ದೇವೆ. ಇನ್ನೆರಡು ದಿನದಲ್ಲಿ ಅಧಿಕೃತ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಜುಲೈ 1 ರಿಂದ ಚಂದನ ವಾಹಿನಿ ಮೂಲಕ ಎಲ್ಲಾ ತರಗತಿಗಳಿಗೆ ಪಾಠ ಪ್ರಾರಂಭ ಮಾಡಲಾಗುತ್ತದೆ. 8,9,10 ಮೊದಲು ಪ್ರಾರಂಭವಾಗಲಿವೆ. ನಂತರ ಉಳಿದ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಕಳೆದ ಬಾರಿಯೂ ಇದು ಮೆಚ್ಚುಗೆಗೆ ಪಾತ್ರವಾಗಿತ್ತು, ದೀಕ್ಷಾ ಪೊರ್ಟಲ್ ನಲ್ಲಿ ಎಲ್ಲಾ ಪಾಠಗಳ ವಿಡಿಯೋ ಆಡಿಯೋ ಸಿಗಲಿವೆ. 22 ಸಾವಿರ ಇ-ಕಂಟೆಂಟ್ ಲಭ್ಯ ಇವೆ. ಮಕ್ಕಳ ವಾಣಿ ಅಂತ ಯುಟ್ಯೂಬ್ ನಲ್ಲಿ ಲಭ್ಯ ಇದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲಿ ಶಿಕ್ಷಕರಿಗೆ ಒಂದು ಮಾಹಿತಿ ನೀಡಲಾಗಿದ್ದು, ಮಕ್ಕಳಿಗೆ ಯಾವ ರೀತಿ ಪಾಠ ಹೇಳಬೇಕು ವರ್ಕ್ ಎಲ್ಲವನ್ನೂ ಸಂಪೂರ್ಣವಾಗಿ ತಿಳಿಸಲಾಗಿದೆ. ಒಂದು ತಿಂಗಳು ಸೇತು ಬಂದ ಮಾಡಲಾಗುತ್ತದೆ ಎಂದರು.

ವಾರ್ಷಿಕ ಪರೀಕ್ಷೆಯ ಆಚೆ ಯೋಚನೆ ಮಾಡಬೇಕು, ಮೌಲ್ಯಾಂಕ ಮಾಡುವುದು ಹೇಗೆ ಎಂಬುದು ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಶಿಕ್ಷಕರಿಗೂ ಟ್ರೈನಿಂಗ್ ನೀಡಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!