ಜನರಿಗೆ ಪ್ರಕೃತಿ ವಿಕೋಪ ಎದುರಿಸುವ ಜಾಗೃತಿ ಅಗತ್ಯ – ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

Chitradurga: ಅತಿಯಾದ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತಾಗ, ಹಳೆ ಮನೆಗಳು ಕುಸಿದು ಬಿದ್ದು, ನೂರಾರು ಜನ ಸಾವನ್ನಪ್ಪುವ ಸಂದರ್ಭಗಳು ಮಳೆಗಾಲದಲ್ಲಿ ನಡೆಯುತ್ತವೆ. ಸಾಕಷ್ಟು ಮನೆಗಳು ಮಣ್ಣಿನಿಂದ ಕಟ್ಟಿದ್ದು, ಅವು ನೀರು ಹೀರಿಕೊಂಡು ಕುಸಿದು ಬೀಳುತ್ತವೆ, ಕುಸಿದ ಗೋಡೆ ಪಕ್ಕ, ಮಲಗಿದ್ದ ಜನರು ಸಾವನ್ನಪ್ಪುತ್ತಾರೆ. ರಾತ್ರಿ ಮಳೆಗೆ ತಗ್ಗು ಪ್ರದೇಶದ ಮನೆಯವರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿರುತ್ತಾರೆ, ಅವರಿಗೆ ಮುನ್ನೆಚ್ಚರಿಕೆ ವಹಿಸಿಕೊಂಡು, ತಮ್ಮ ಹಾಗೂ ಇತರರ ಜೀವ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.

 

ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ಪ್ರಕೃತಿ ವಿಕೋಪ ಎದುರಿಸುವ ಜನಜಾಗೃತಿ ಸಾಕ್ಷರತಾ ಅಭಿಯಾನ” ಕಾರ್ಯಕ್ರಮದಲ್ಲಿ ಮಾತನಾಡಿದರು,
ಬಡತನದಲ್ಲಿರುವ ಹಳ್ಳಿಗಳು, ಕೊಳಚೆ ನಿವಾಸಿಗಳು, ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿರುತ್ತಾರೆ. ಈ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗಿ, ಕುಸಿದು ಬಿದ್ದು ಬಹಳಷ್ಟು ಸಾವು ನೋವುಗಳಾಗುತ್ತವೆ. ಅವರ ಸಂರಕ್ಷಣೆ ಬಗ್ಗೆ ನಾವು ಜಾಗರೂಕತೆ ವಹಿಸಬೇಕಾಗುತ್ತದೆ. ಅಂತಹ ಜನರನ್ನು ನಾವು ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕಾಗುತ್ತದೆ. ಕುಸಿದುಹೋದ ಮನೆಗಳಿಗೆ ಭದ್ರವಾದ ಮನೆ ಕಟ್ಟಿಕೊಡಬೇಕಾಗುತ್ತದೆ, ಹಾಗೂ ಅವರಿಗೆ ಅಹಾರ, ಔಷಧ, ಬಟ್ಟೆ, ಮಕ್ಕಳಿಗೆ ಭದ್ರತೆ, ಶಿಕ್ಷಣ ಒದಗಿಸಬೇಕಾಗುತ್ತದೆ ಎಂದರು.

ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸುರಿದು, ವಿಜಾಪುರ, ಬಾಗಲಕೋಟೆ, ಬಳ್ಳಾರಿ, ರಾಯಚೂರು ಮತ್ತು ಗದಗ್ ಜಿಲ್ಲೆಗಳಲ್ಲಿ ಅನೇಕ ಲಕ್ಷ ಜನರು ಪ್ರವಾಹಕ್ಕೆ ಸಿಕ್ಕಿ ಸಂತ್ರಸ್ತರಾದ ಉದಾಹರಣೆಯನ್ನು ನಾವು ಮರೆಯಬಾರದು. ನೈಸರ್ಗಿಕ ದುರಂತಗಳ ಭೀಕರತೆಯನ್ನು ಆದಷ್ಟು ಕಡಿಮೆ ಮಾಡಬೇಕು. ನಿಸರ್ಗ ಪ್ರಕೋಪದಿಂದ ಉಂಟಾಗುವ ಮಹಾಮಳೆಯಿಂದ ಬರುವ ಪ್ರವಾಹ ಲಕ್ಷಾಂತರ ಮನುಷ್ಯರು ಒಟ್ಟೊಟ್ಟಾಗಿ ವಾಸಿಸುವ ಸ್ಥಳಗಳಲ್ಲಿ ದುರಂತಗಳ ಪÀರಿಣಾಮ ನೂರಾರು ಪಟ್ಟು ಹೆಚ್ಚಾಗಿರುತ್ತವೆ. ಪ್ರಕೃತಿ ವಿಕೋಪ ಎದುರಿಸುವ ಜನಜಾಗೃತಿ ಸಾಕ್ಷರತಾ ಅಭಿಯಾನ ಅವಶ್ಯಕವಾಗಿದೆ. ಪ್ರಾಥಮಿಕ ಸುರಕ್ಷಾ ಕ್ರಮಗಳನ್ನ ತಿಳಿಸಿಕೊಡಬೇಕು. ಅಪಾಯ ಬರುವ ಮುಂಚೆ ಇಂಥ ತಾಲೀಮು ನಡೆಸಿ, ಅಪಾಯಗಳೇ ಬಾರದಂತೆ ಕಟ್ಟೆಚ್ಚರ ವಹಿಸುವುದು ಮತ್ತು ತಗ್ಗು ಪ್ರದೇಶದಲ್ಲಿರುವ ಆಪತ್ತುಗಳನ್ನ ನಿವಾರಿಸುವುದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಪರಿಸರದಿಂದಾಗುವ ವಿಕೋಪಗಳ ಬಗ್ಗೆ ಮುನ್ನೆಚ್ಚರಿಕೆ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು ಹಾಗೂ ಅರಣ್ಯ ರಕ್ಷಿಸಿಕೊಳ್ಳಿ ಪ್ರವಾಹ ತಡೆಯಿರಿ ಎಂಬ ಗೀತೆಯನ್ನು ಹಾಡಿ ಜನ ಜನ ಪರಿವರ್ತಿಸಲಾಯಿತು.

ಕಾರ್ಯಕ್ರಮದಲ್ಲಿ ಸವಿತಾ ಸಂಘದ ಎಂ. ರಾಜಶೇಖರ್, ಎಂ. ಕೃಷ್ಣವೇಣಿ, ಅಂಶುಲ್, ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ವೇನಿಲಾ, ಜಾನವಿ, ಶಶಿ ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!