job fair; ಜಿ.ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ನಿಂದ ಉದ್ಯೋಗ ಮೇಳ

ದಾವಣಗೆರೆ, ಅ.18: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರು ಅ.30 ರಂದು ಬೆಳಿಗ್ಗೆ 9 ಗಂಟೆಗೆ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು (job fair) ಆಯೋಜಿಸಲಾಗಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು.

ಶ್ರೀ ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್, ಭೀಮಸಮುದ್ರ ಸಹಯೋಗದಲ್ಲಿ ದಾವಣಗೆರೆ ನಗರದ ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ನಿಯೋಜನೆ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ಉದ್ಯೋಗ ಮೇಳ-2023ದಲ್ಲಿ 30ಕ್ಕೂ ಹೆಚ್ಚು ಕಂಪನಗಳು ಮತ್ತು 3000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

sky deck; ಬೆಂಗಳೂರಿನಲ್ಲಿ ತಲೆ ಎತ್ತಲಿದೆಯಾ ದೇಶದಲ್ಲೇ ಅತೀ ಎತ್ತರದ ಸ್ಕೈ-ಡೆಕ್!?

ಎಸ್ ಎಸ್ ಎಲ್ ಸಿ , ಪಿಯುಸಿ, ಪದವಿ, ಎಂಬಿಎ, ಐಟಿಐ, ಬಿಇ, ಎಂಸಿಎ, ಎಂಬಿಎ, ಸ್ನಾಕೋತ್ತರ ಪದವಿ, ಡಿಪ್ಲೋಮಾ ಆದ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳ ಜೆರಾಕ್ಸ್, ಪಾಸ್ ಪೋರ್ಟ್ ಫೋಟೋ, ಆಧಾರ್ ಕಾರ್ಡ್, ಸ್ವ-ವಿವರದೊಂದಿಗೆ ಕನಿಷ್ಠ 05 ಸೆಟ್ ಜೆರಾಕ್ಸ್ ಗಳನ್ನು ಕಡ್ಡಾಯವಾಗಿ ತರತಕ್ಕದ್ದು ಹಾಗೂ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ.

ಆಸಕ್ತಿಯುಳ್ಳ ಅಭ್ಯರ್ಥಿಗಳು https://forms.gle/BN5KqYfovodCXzAQ8 ಲಿಂಕ್ ಮೂಲಕ ತಮ್ಮ ಸ್ವ-ವಿವರಗಳನ್ನು ನೋಂದಾಯಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ 78929 56667 ಅಥವಾ 82965 02393 ಹಾಗೂ ಇ-ಮೇಲ್ placement@gmail.com ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

error: Content is protected !!