ಇಂದು ಸಂಜೆಯ ನಂತರ ಲಾಕ್ಡೌನ್ ಆಗಲಿದೆಯಾ ಕರ್ನಾಟಕ‍? ಸಚಿವ ಸುಧಾಕರ್ ಏನಂದ್ರು‍?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತನ್ನ ಹಿರಿಯ ಸಂಪುಟ ಸಹೋದ್ಯೋಗಿಗಳು ಮತ್ತು ಕೊರೊನಾ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಿದ್ದು, ರಾಜ್ಯದಲ್ಲಿ ಓಮೈಕ್ರಾನ್ ಹರಡುವಿಕೆಯನ್ನು ವಿಶ್ಲೇಷಿಸಿದ ನಂತರ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಿರ್ಧರಿಸಲಾಗುವುದು” ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಕ್ರಮಗಳು, ಮೈಕ್ರೋ ಕಂಟೈನ್‌ಮೆಂಟ್ ವಲಯಗಳು, ಶಾಲೆಗಳು ಮತ್ತು ಇತರ ನಿರ್ಬಂಧಗಳ ಕುರಿತು ಚರ್ಚಿಸಲಾಗುವುದು. ಬೆಂಗಳೂರು ಈ ಹಿಂದಿನ ಎರಡು ಅಲೆಗಳ ಕೇಂದ್ರಬಿಂದುವಾಗಿತ್ತು. ಜೊತೆಗೆ ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಮೂರನೇ ಅಲೆಯಲ್ಲಿ ಅದೇ ಸಂಭವಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಬೇರೆ ದೇಶಗಳು ಮತ್ತು ರಾಜ್ಯಗಳ ಜನರು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ನಗರದಲ್ಲಿ ಹರಡುವಿಕೆಯನ್ನು ನಿಯಂತ್ರಿಸಿದರೆ, ರಾಜ್ಯದಲ್ಲೂ ಹರಡುವಿಕೆಯನ್ನು ನಿಯಂತ್ರಿಸಬಹುದು ಎಂದು ಸುಧಾಕರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!