ಕಂಥಕ ಫೌಂಡೇಶನ್ ಪ್ರಥಮ ವಾರ್ಷಿಕೋತ್ಸವ: ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹಣ್ಣು ಮತ್ತು ಸಿಹಿ ವಿತರಣೆ
ಚಿತ್ರದುರ್ಗ: ಕಂಥಕ ಫೌಂಡೇಶನ್ ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹಣ್ಣು ಮತ್ತು ಸಿಹಿ ಗಳನ್ನು ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಂಥಕ ಫೌಂಡೇಶನ್ ಮುಖ್ಯಸ್ಥರಾದ ಶ್ರೀಮತಿ ಭಾರ್ಗವಿ ದ್ರಾವಿಡ್ ನೆಲ್ಸನ್ ಮಂಡೇಲಾ 27 ವರ್ಷ ಸೆರೆಮನೆಯಲ್ಲಿದ್ದರು.ಅವರು ಯಾವ ವ್ಯಕ್ತಿಯೂ ಹುಟ್ಟು ವಾಗಲೇ ಅಪರಾಧಿ ಗಳಾಗಿ ಹುಟ್ಟುವುದಿಲ್ಲ.ಪರಿಸ್ಥಿತಿ ಸಂದರ್ಭಗಳು ಜನರನ್ನು ಅಪರಾಧಗಳನ್ನಾಗಿ ಮಾಡುತ್ತದೆ. ಜೈಲು ಎಂಬುದು ಮನಪರಿವರ್ತನಾ ಕೇಂದ್ರ ಎಂದು ಹೇಳಿದ್ದರು.ಅದರಂತೆ ಪರಿಸ್ಥಿತಿಯ ಕೈಗೊಂಬೆಗಳಾಗಿ ಇಂದು ಜೈಲಿನಲ್ಲಿರುವವರು ತಮ್ಮ ಮನಪರಿವರ್ತನೆ ಮಾಡಿಕೊಂಡು ಸತ್ಪ್ರಜೆಗಳಾಗಿ ಜೈಲಿನಿಂದ ಹೊರಬಂದು ಆದರ್ಶ ವ್ಯಕ್ತಿಗಳಾಗಿ ಬಾಳಿ ಎಂದು ಸಲಹೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಮಹದೇವಿ ಮರ್ಕಟ್ಟಿ ಸಮಯದ ಕೈಗೊಂಬೆಗಳಾಗಿ ನೀವು ಇಂದು ಜೈಲಿನಲ್ಲಿ ಇರಬಹುದು. ಆದರೆ ನೀವು ಯಾವುದೇ ಕಾರಣಕ್ಕೂ ಕುಗ್ಗಿ ಹೋಗಬಾರದು.ಅಪಮಾನವಾಯಿತು ಎಂದುಕೊಂಡು ಸಾಯುವ ಮಾರ್ಗ ಹಿಡಿಯಬಾರದು.ಜೈಲು ಅಂದ ಮಾತ್ರಕ್ಕೆ ಈ ಹಿಂದೆ ಇದ್ದಂತೆ ಅಲ್ಲ.ಕಾನೂನುಗಳು ನಿಮ್ಮ ಪರವಾಗಿವೆ.ನೀವು ಜಾಮೀನು ಪಡೆದು ಜೈಲಿನಿಂದ ಹೊರಹೋಗಲು ಹಲವಾರು ಅವಕಾಶಗಳಿವೆ.ನೀವೆಲ್ಲರೂ ಆದಷ್ಟು ಬೇಗ ಬಿಡುಗಡೆ ಹೊಂದಿ .ನಿಮ್ಮ ಮನೆಗಳಿಗೆ ಹಿಂತಿರುಗಿ ಒಳ್ಳೆಯ ಜೀವನ ನಡೆಸುವಂತಾಗಬೇಕು ಎಂಬುದು ನನ್ನ ಆಸೆ ಎಂದರು.
ಜೈಲರ್ ಅಬ್ಬಾಸ್ ಅಲಿ .ದಾವೂಜಿ ರಾಥೋಡ್. ರಾಮಣ್ಣ ಯರ್ಕಲ್. ಶ್ರೀರಾಮರೆಡ್ಡಿ .ರಾಜು. ಹಾಗೂ ಕಾರಾಗೃಹದ ಸಿಬ್ಬಂದಿಗಳು ಉಪಸ್ಥಿತರಿದ್ದರು.