ಜಗಳೂರಿನ ಕೀರ್ತಿ ವಿವೇಕಾ ಸಾಹುಕಾರ್‌ಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

ಜಗಳೂರು: ಅಪಘಾತಗೊಂಡ ಕಾರ್‌ನಿಂದ ಹೊರ ಬಂದು  ತಾಂದೆ-ತಾಯಿಯನ್ನು ಹೊರಗೆ ಕರೆ ತಂದಿದ್ದ 7ನೇ ತರಗತಿ ವಿದ್ಯಾರ್ಥಿ ಕೀರ್ತಿ ವಿವೇಕ್ ಸಾಹುಕಾರ್ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.
ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಐ.ಸಿ.ಸಿ.ಡಬ್ಲ್ಯು ತಿಳಿಸಿದೆ.
ನವದೆಹಲಿಯ ಇಂಡಿಯನ್‌ ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್‌ಫೇರ್‌ (ಐ.ಸಿ.ಸಿ.ಡಬ್ಲ್ಯು) ನೀಡುವ 2022ನೇ ಸಾಲಿನ ಪ್ರಶಸ್ತಿ ಇದಾಗಿದೆ.
ಜಗಳೂರು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಮಂಜುನಾಥ್ ಸಾಹುಕಾರ್ ಹಾಗೂ ಶ್ರುತಿ ದಂಪತಿ ಪುತ್ರನಾಗಿರುವ ಕೀರ್ತಿ ವಿವೇಕ್ ಸಾಹುಕಾರ್ ಜಗಳೂರು ಪಟ್ಟಣದ ಎನ್‌.ಎನ್‌.ಕೆ. ಶಾಲೆಯ 7ನೇ ತರಗತಿ ಓದುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಬಾಲಕ ಕೀರ್ತಿ ತನ್ನ ಕುಟುಂಬದ ಸದಸ್ಯರೊಂದಿಗೆ ಜಗಳೂರು ತಾಲ್ಲೂಕಿನ ಅಗಸನಹಳ್ಳಿ ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿ ರಸ್ತೆ ಪಕ್ಕದ ತಗ್ಗಿಗೆ ಉರುಳಿ ಬಿದ್ದಿತ್ತು. ಅಲ್ಪಸ್ವಲ್ಪ ಗಾಯಗೊಂಡಿದ್ದ ಬಾಲಕ ಕಾರ್‌ನಿಂದ ಹೊರಬಂದು, ಗಂಭೀರವಾಗಿ ಗಾಯಗೊಂಡಿದ್ದ ತಂದೆ ಹಾಗೂ ತಾಯಿಯನ್ನು ಹೊರಗೆ ಕರೆತಂದಿದ್ದ. ಜೊತೆಗೆ ಪೊಲೀಸರಿಗೂ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿ ಸಹಾಯ ಕೋರಿದ್ದ
ಅಪಘಾತದ ಸಮಯದಲ್ಲಿ ಧೈರ್ಯ ತೋರಿದ್ದರಿಂದ ಬಾಲಕನಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಕಳೆದ ನವೆಂಬರ್‌ 1ರಂದು 2022–23ನೇ ಸಾಲಿನ ‘ಹೊಯ್ಸಳ ಶೌರ್ಯ ಪ್ರಶಸ್ತಿ’ ನೀಡಿ ನೀಡಿ ಗೌರವಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!