ತುಮಕೂರು: ಫ್ಯಾಕ್ಟರಿ ಒಂದಕ್ಕೆ ವಿದ್ಯುತ್ ಸಂಪರ್ಕ ಮಂಜೂರು ಮಾಡಲು ಗುತ್ತಿಗೆದಾರನಿಂದ 1 ಲಕ್ಷಕ್ಕೆ ಬೇಡಿಕೆ ಇಟ್ಟು 50 ಸಾವಿರ ಲಂಚ ಪಡೆಯುವಾಗ ಕೆಪಿಟಿಸಿಎಲ್ ಚೀಫ್ ಇಂಜಿನಿಯರ್ ತುಮಕೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತುಮಕೂರು ನಗರದ ಬಿ ಹೆಚ್ ರಸ್ತೆಯ ಸಿದ್ಧಗಂಗಾ ಕಾಂಪ್ಲೆಕ್ಸ್ ನಲ್ಲಿರುವ ಕೆಪಿಟಿಸಿಎಲ್ ಚೀಫ್ ಇಂಜಿನಿಯರ್ ಕಚೇರಿಯಲ್ಲಿ ಚೀಫ್ ಇಂಜಿನಿಯರ್ ನಾಗರಾಜನ್ ಎಂ ಆರ್ ದೂರುದಾರ ಮೊಹನ್ ಕುಮಾರ್ ಎಂಬುವವರಿಂದ 50,000 ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. 1 ಲಕ್ಷರೂ ಲಂಚಕ್ಕೆ ಬೇಡಿಕೆ ಇಟ್ಟು ಮೊದಲ ಕಂತಾಗಿ ಆಗಸ್ಟ್ 4 ರಂದು 50,000 ರೂ ಸ್ವೀಕಾರಿಸದ್ದರೆನ್ನಲಾಗಿದ್ದು. ಆಗಸ್ಟ್ 8 ರ ಸಂಜೆ ಎರಡನೇ ಕಂತಿನ 50 ಸಾವಿರ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ನಾಗರಾಜನ್ ದಾವಣಗೆರೆ ಚಿತ್ರದುರ್ಗ ತುಮಕೂರು ಕೆಪಿಟಿಸಿಎಲ್ ವಿಭಾಗದ ಮುಖ್ಯ ಇಂಜಿನಿಯರ್ ಆಗಿದ್ದಾರೆ ಎನ್ನಲಾಗಿದ್ದು, ಭಾರಿ ಕುಳವನ್ನ ತುಮಕೂರು ಲೋಕಾಯುಕ್ತ ಪೋಲಿಸರು ಬಲೆಗೆ ಬೀಳಿಸಿದ್ದಾರೆ.
ಎಸ್ ಪಿ ವಲ್ಲಿ ಭಾಷಾ ನೇತೃತ್ವದಲ್ಲಿ ಡಿ ವೈ ಎಸ್ ಪಿ ಗಳಾದ ಮಂಜುನಾಥ್ ಜಿ. ಹರೀಶ್. ಇನ್ಸಪೆಕ್ಟರ್ ಶಿವರುದ್ರಪ್ಪ ಮೇಟಿ ಸತ್ಯನಾರಾಯಣ. ರಾಮರೆಡ್ಡಿ, ಸಲೀಂ, ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಾಳಿ ವೇಳೆ ಕಚೇರಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದ್ದು ಚೀಫ್ ಇಂಜಿನಿಯರ್ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಉಂದಿನ ತನಿಖೆ ಕೈಗೊಂಡಿದ್ದಾರೆ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಲೋಕಾಯುಕ್ತ ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.
