ಭಾರತಕ್ಕೆ ವಿಶ್ವ ಮನ್ನಣೆ – ಬಿ ವಾಮದೇವಪ್ಪ.

ದಾವಣಗೆರೆ: ಬ್ರಿಟಿಷರ ಸಂಕೋಲೆ ಯಲ್ಲಿದ್ದ ಭಾರತವನ್ನು ಮುಕ್ತಗೊಳಿಸಲು ಭಾರತೀಯರು ಸುದೀರ್ಘ ಹೋರಾಟ ನಡೆಸಬೇಕಾಯಿತು. ಈ ಸುದೀರ್ಘ ಹೋರಾಟದಲ್ಲಿ ಅನೇಕ ಮಹನೀಯರುಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಹಿಂದೊಮ್ಮೆ ವಿಶ್ವಮಟ್ಟದಲ್ಲಿ ಭಾರತವನ್ನು ಅಷ್ಟಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಇಂದು ಭಾರತಕ್ಕೆ ವಿಶ್ವಮಟ್ಟದಲ್ಲಿ ವಿಶೇಷ ಮನ್ನಣೆ ಲಭಿಸಿದೆ. ಭಾರತ ಈ ಹಂತಕ್ಕೆ ಬೆಳೆದು ನಿಂತಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪನವರು ತಿಳಿಸಿದರು.

ಅವರು ಇಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿನೂತನ ಮಹಿಳಾ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ 77  ನೇ ಸ್ವಾತಂತ್ರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬ್ರಿಟಿಷರ ದಾಸ್ಯದಿಂದ ಭಾರತ ಹೇಗೆ ಸ್ವಾತಂತ್ರ್ಯವನ್ನು ಪಡೆಯಿತು ಎನ್ನುವ ಬಗ್ಗೆ ಅರ್ಥಪೂರ್ಣ ಮಾತುಗಳನ್ನಾಡಿದರು.ಇದೇ ಸಂದರ್ಭದಲ್ಲಿ ನಿವೃತ್ತ ಯೋಧರಾದ ಶ್ರೀಯುತ ಕಲ್ಯಾಣ್ ಕುಮಾರ್, ಶ್ರೀಯುತ ಪ್ರಕಾಶ್ ರೆಡ್ಡಿ ಬೇತೂರು ಮತ್ತು ಪತ್ರಕರ್ತರಾದ ಶ್ರೀಯುತ ಇ.ಎಂ.ಮಂಜುನಾಥ್ ಇವರನ್ನು ವಿನೂತನ ಮಹಿಳಾ ಸಮಾಜದ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧರಾದ ಕಲ್ಯಾಣ್ ಕುಮಾರ್ ಅವರು ಯೋಧರಾಗಿ ತಾವು ಪಟ್ಟ ಕಷ್ಟ ಮತ್ತು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು. ಮತ್ತೋರ್ವ ಯೋಧರಾದ ಶ್ರೀಯುತ ಪ್ರಕಾಶ್ ರೆಡ್ಡಿ ಬೇತೂರು ಇವರು ನಾನು ಯೋಧನಾಗಿದ್ದು ನನ್ನ ಪುಣ್ಯ. ಭಾರತಮಾತೆಯ ಸೇವೆ ಮಾಡಿ ನಿವೃತ್ತಿ ಹೊಂದಿ ನಾನು ತುಂಬಾ ಸಂತೋಷವಾಗಿ ಜೀವನ ನಡೆಸುತ್ತಿದ್ದೇನೆ ಎಂದರು. ಪತ್ರಕರ್ತರಾದ ಇ.ಎಂ. ಮಂಜುನಾಥ್ ರವರು ಯೋಧರ ಜೊತೆ ನನಗೆ ಸನ್ಮಾನ ಮಾಡಿದ್ದು ನನಗೆ ಮರೆಯಲಾರದ ಕ್ಷಣ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿನೂತನ ಮಹಿಳಾ ಸಮಾಜದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕರಿಸಿ ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಮಂಜುನಾಥ್ ರವರು ವಹಿಸಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದವನ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ರಶ್ಮಿ ಎಂ. ಶ್ರೀಕಾಂತ್ ಆಗಮಿಸಿದ್ದರು. ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಉಪಸ್ಥಿತರಿದ್ದರು. ಶ್ರೀಮತಿ ಹೇಮಾ ಗಣೇಶ್ ಶೇಟ್ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿನೂತನ ಮಹಿಳಾ ಸಮಾಜದ ಸದಸ್ಯರು ದೇಶಭಕ್ತಿ ಗೀತೆಯೊಂದಿಗೆ ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಸುಕನ್ಯಾ ಬಸವರಾಜ್ ರವರು ಸ್ವಾಗತಿಸಿದರು, ಶ್ರೀಮತಿ ಇಂದಿರಾರೆಡ್ಡಿ, ಪುಷ್ಪ ಬಸವರಾಜ್, ಸುಧಾ ಪಾಟೀಲ್ ಇವರು ಅತಿಥಿಗಳ ಪರಿಚಯ ನಡೆಸಿಕೊಟ್ಟರು. ರಶ್ಮಿ ಸಿ ರೆಡ್ಡಿ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಲತಾ ಸತೀಶ್ ಮತ್ತು ಗೀತಾ ರೆಡ್ಡಿ ಬಹುಮಾನಗಳ ವಿವರಗಳನ್ನು ನೀಡಿದರು. ಭುವನ ಚಂದ್ರಶೇಖರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!