ದಾವಣಗೆರೆಯಲ್ಲಿ 12 ನೇ ದಿನದ ಉಚಿತ ಲಸಿಕಾ ಶಿಬಿರ :ಕರೋನಾ ಮುಕ್ತ ದಾವಣಗೆರೆ ಮಾಡಲು ಡಾ.ಎಸ್ ಎಸ್ ಕರೆ

ದಾವಣಗೆರೆ: ದಾವಣಗೆರೆಯಲ್ಲಿ ಕಳೆದ 12 ದಿನಗಳಿಂದ ಶಾಮನೂರು ಕುಟುಂಬದಿಂದ ಉಚಿತ ಲಸಿಕಾ ಶಿಬಿರ ನಡೆಯುತ್ತಿದ್ದು, ಇಂದು ನಗರದ ಚೌಕಿಪೇಟೆಯ ಶ್ರೀ ಗುರು ಬಕ್ಕೇಶ್ವರ ಕಲ್ಯಾಣಮಂಟಪದಲ್ಲಿ ಲಸಿಕಾ ಶಿಬಿರ ನಡೆಯಿತು.

ಶಿಬಿರದ ಸ್ಥಳಕ್ಕೆ ಆಗಮಿಸಿದ ಶಿಬಿರದ ರುವಾರಿ ಡಾ|| ಶಾಮನೂರು ಶಿವಶಂಕರಪ್ಪನವರು ಲಸಿಕೆ ಪಡೆದವರೊಂದಿಗೆ ಆರೋಗ್ಯ ಸಮಸ್ಯೆ ಕುರಿತು ಮಾತನಾಡಿ ಲಸಿಕೆ ಪಡೆದೆ ಎಂದು ಮಾಸ್ಕ್ ಧರಿಸದೇ ಅಂತರ ಕಾಪಾಡಿಕೊಳ್ಳದೇ ಓಡಾಡಬಾರದೆಂದು ಸೂಚಿಸಿದರು. ಕೆಲವು ಯುವಕ-ಯುವತಿಯರು ಲಸಿಕೆ ನೀಡಿದ್ದಕ್ಕೆ ಶಾಮನೂರು ಶಿವಶಂಕರಪ್ಪನವರಿಗೆ ಧನ್ಯವಾದ ಹೇಳಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಸೆಸ್ ಅವರು ಸರ್ಕಾರ ದಾವಣಗೆರೆ ಜನತೆಗೆ ಸಮರ್ಪಕವಾಗಿ ಲಸಿಕೆ ತರಿಸದ ಕಾರಣ ನಾವೇ ಯೋಚಿಸಿ ನಮ್ಮ ಮಕ್ಕಳೊಂದಿಗೆ ಚರ್ಚಿಸಿ ಲಸಿಕೆ ತರಿಸಿ ಉಚಿತವಾಗಿ ಶಿಬಿರಗಳನ್ನು ನಡೆಸುವ ಮೂಲಕ ಲಸಿಕೆ ಹಾಕಲಾಗುತ್ತಿದೆ ಎಂದರು.

ಸರ್ಕಾರವೇ ಇನ್ನು 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿಲ್ಲ. ಆದರೆ ನಾವು ಯುವಕ-ಯುವತಿಯರ ಆರೋಗ್ಯ ದೃಷ್ಠಿಯಿಂದ 18ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡುತ್ತಿದೆ ಎಂದರು. ದಾವಣಗೆರೆಯನ್ನು ಕರೋನಾ ಮುಕ್ತ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದ ಅವರು ಸರ್ಕಾರ ಆದಷ್ಟು ಬೇಗ ದಾವಣಗೆರೆಗೆ ಸಮರ್ಪಕವಾಗಿ ಲಸಿಕೆ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ವಿಪಕ್ಷ ನಾಯಕ ಎ.ನಾಗರಾಜ್, ಕೆ.ಬಿ.ಗಿರಿರಾಜ್ ಗೌಡ್ರು, ರಾಮಪ್ರಸಾದ್ ಗುಜ್ಜರ್,ಸಾವನ್ ಜೈನ್, ಗೌಳಿ ನಟರಾಜ್, ಬಿಜೆಪಿ ಮುಖಂಡ ಶಾಂತಕುಮಾರ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಇಂಗಳೇಶ್ವರ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಾಗರ್ ಎಲ್‍ಎಂಹೆಚ್., ರುದ್ರಯ್ಯ ಸ್ವಾಮಿ, ದೇವಸ್ಥಾನದ ಮ್ಯಾನೇಜರ್ ಗಿರೀಶ್, ಆಲೂರು ಶಿವಣ್ಣ, ಹೂವಿನ ಬಸವರಾಜ್, ರವಿಪ್ರಸಾದ ಗುಜ್ಜರ್, ಸಿದ್ದಯ್ಯ ಸ್ವಾಮಿ, ಕರಿಬಸಯ್ಯ, ಪವನ್ ಗಾಂಧಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!