ದಾವಣಗೆರೆ: ಒಂದು ಕಡೆ ಚುನಾವಣಾ ಅಧಿಕಾರಿಗಳು, ಇನ್ನೊಂದು ಕಡೆ ಪೊಲೀಸರು, ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು,ಅಭ್ಯರ್ಥಿಗಳಿಗೆ ಒಂದೊಂದು ಪ್ರತ್ಯೇಕವಾದ ಚಿಹ್ನೆಗಳು, ಸಾರಥಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ಪ್ರಜೆಗಳು,ಯಾವುದೇ ಅಕ್ರಮ ನಡೆಯದಂತೆ ಕಾಯುತ್ತಿದ್ದ ಚುನಾವಣಾ ಪೊಲೀಸರು,ಚುನಾವಣೆ ಮುಗಿದ ಮೇಲೆ ಬ್ಯಾಲೆಟ್ ಪೇಪರ್ ಕೌoಟ್ ಮಾಡಿ ಫಲಿತಾಂಶ ನೀಡಿದ ಅಧಿಕಾರಿಗಳು.
ಒಟ್ಟಾರೆಯಾಗಿ ಇ ಚಿತ್ರಣ ಕಂಡು ಬಂದಿದ್ದು ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದ ಶ್ರೀ ಉತ್ಸವಾಂಭ ಪ್ರೌಢ ಶಾಲೆಯಲ್ಲಿ ಶುಕ್ರವಾರ ಬೆಳೆಗ್ಗೆ 10 ಘಂಟೆಯಿಂದ ಪ್ರಾರಂಭವಾದ ಚುನಾವಣೆ ಮದ್ಯಾಹ್ನ 03 ಘಂಟೆಗೆ ಮುಗಿಯಿತು ಎಲ್ಲಾ ಮತಗಳ ಎಣಿಕೆ ನಡೆದು 05 ಘಂಟೆಗೆ ಫಲಿತಾಂಶ ಹೊರ ಬಂದಿತು.
ಈ ಚುನಾವಣೆಯಲ್ಲಿ ಒಟ್ಟಾರೆಯಾಗಿ 13 ಅಭ್ಯರ್ಥಿ ಗಳೂ ಸ್ಪರ್ಧೆ ಮಾಡಿದ್ದರು ಶಾಲಾ ಸಂಸತ್ತಿನ ಉಪಾಧ್ಯಕ್ಷರ 02, ಕ್ರೀಡಾ ಕಾರ್ಯದರ್ಶಿಗೆ 03, ಪ್ರವಾಸ ಕಾರ್ಯದರ್ಶಿ 2, ಸ್ವಚ್ಛತೆ ಕಾರ್ಯದರ್ಶಿ 03 ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ 03 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದರೂ.
ಆನೆ,ಪುಸ್ತಕ, ಪ್ಯಾನ್, ಎಣಿ, ಗಡಿಯಾರ,ಮುಂತಾದ ಚಿಹ್ನೆಗಳು ಸೇರಿದಂತೆ ಪ್ರತಿಯೊಬ್ಬರಿಗೆ ಒಂದೊಂದು ಚಿಹ್ನೆ ನೀಡಿದ್ದರು.
ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಪ್ರಜ್ವಲ್ ಕೆ. ಎಂ,ಕ್ರೀಡಾ ಕಾರ್ಯದರ್ಶಿಯಾಗಿ ಸೂರತ್,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಕೃತಿ,ಪ್ರವಾಸ ಕಾರ್ಯದರ್ಶಿಯಾಗಿ ಮೈಲಾರಿ,ಸ್ವಚ್ಛತಾ ಕಾರ್ಯದರ್ಶಿಯಾಗಿ ಮೋಹನ್ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ ಗೆದ್ದ ನಂತರ ತಮ್ಮ ಅಭ್ಯರ್ಥಿಗಳ ಪರ ಘೋಷಣೆ ಕೂಗಿ ಸಂಭ್ರಮ ಆಚರಿಸಿದರು.
ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ನಡೆಯುವ ಹಾಗೆ ನಮ್ಮ ಶಾಲಾ ಸಂಸತ್ತಿನ ಚುನಾವಣೆ ನಡೆದಿದ್ದು ಮಕ್ಕಳಿಗೆ 18 ವರ್ಷ ತುಂಬಿದ ಮೇಲೆ ಹೇಗೆ ಮತದಾನ ಮಾಡಬೇಕು ಎನ್ನುವ ಜಾಗೃತಿ ಮೂಡಿತು ಎಂದು ವಿದ್ಯಾರ್ಥಿಗಳು ತಿಳಿಸಿದರು.
ಇ ಸಂದರ್ಭದಲ್ಲಿ ಮುಖ್ಯಶಿಕ್ಷಕ ರಮೇಶ್ ನಾಯ್ಕ, ಸಹ ಶಿಕ್ಷಕರಾದ ಸದಾಶಿವ, ಮರುಳಸಿದ್ದಯ್ಯ,ಪ್ರಸನ್ನ ಹಾಗೂ ಮಕ್ಕಳು ಉಪಸ್ಥಿತರಿದ್ದರು.
