ಸಿದ್ದರಾಮೋತ್ಸವಕ್ಕೆ ಠಕ್ಕರ್ ಕೊಡಲು ಮೋದಿ ಸಮಾವೇಶ ಮಾಡುತ್ತಿಲ್ಲ : ಕಟೀಲ್

ಸಿದ್ದರಾಮೋತ್ಸವಕ್ಕೆ ಠಕ್ಕರ್ ಕೊಡಲು ಮೋದಿ ಸಮಾವೇಶ ಮಾಡುತ್ತಿಲ್ಲ : ಕಟೀಲ್
ದಾವಣಗೆರೆ: ಸಿದ್ದರಾಮೋತ್ಸವಕ್ಕೆ ಠಕ್ಕರ್ ಕೊಡಲು ಈ ಸಮಾವೇಶ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇದೇ ಮಾ.25 ರಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬಿಜೆಪಿ ಮಹಾ ಸಂಗಮ ಸಮಾವೇಶವು ಜಿಎಂಐಟಿ ಬಳಿ ನಡೆಯಲಿರುವ ಬೃಹತ್ ಸಮಾವೇಶದ ಸಿದ್ಧತೆ ಪರಿಶೀಲಿಸಿ ಅವರು ಮಾಧ್ಯದವರೊಂದಿಗೆ ಮಾತಾಡಿದರು.
ರಾಜ್ಯದ ನಾಲ್ಕು ಕಡೆಯಿಂದ ದಾವಣಗೆರೆಗೆ ಆಗಮಿಸಲಿರುವ ಜನ ಸಂಕಲ್ಪ ಯಾತ್ರೆ ನಡೆಯಲಿದೆ. ಇದು ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಕಾರ್ಯಕ್ರಮ. ಆದರೂ ರಾಜ್ಯದ ವಿವಿಧ ಜಿಲ್ಲೆಗಳ ಬರಬಹುದು ಎಂದು ಕಟೀಲ್ ಹೇಳಿದರು.