ನರೇಗಾ ಕಾಮಗಾರಿಯ ಹಣ ದುರುಪಯೋಗ, ಕ್ರಮ ಕೈಗೊಳ್ಳಲು ಮನವಿ

 

ದಾವಣಗೆರೆ.ಜು.೧; ಜಗಳೂರು ತಾಲೂಕಿನ ದಿದ್ದಗಿ ಗ್ರಾಮದ ಪಿಡಿಓ ಗ್ರಾಮದಲ್ಲಿ ನಡೆಸಿದ ನರೇಗಾ ಕಾಮಗಾರಿಯಲ್ಲಿ ಹಣ ದುರುಪಯೋಗ ಮಾಡಿದ್ದಲ್ಲದೇ ನೀರಗಂಟಿಗಳಿಗೆ ಉದ್ಯೋಗ ಖಾಯಂ ಮಾಡಲು ಲಂಚ ಕೇಳಿದ್ದು, ಈ ಕೂಡಲೇ ಮೇಲಾಧಿಕಾರಿಗಳು ಪಿಡಿಓ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಐಎನ್‌ಸಿಸಿ ಜಿಲ್ಲಾಧ್ಯಕ್ಷ ಮುದ್ದಾಪುರ ರೆಹಮಾನ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿನ ಗ್ರಾಮಸ್ಥರು ಮತ್ತು ಸಾರ್ವಜನಿಕರು ಆರೋಪಿಸಿರುವ ಪ್ರಕಾರ, ಲಂಚದ ಆರೋಪ ಮತ್ತು ಹಣ ದುರುಪಯೋಗದ ಆರೋಪ ಹೊತ್ತಿರುವ ಪಿಡಿಓರನ್ನು ಶಾಸಕರು ದಿಢೀರನೆ ವರ್ಗಾವಣೆ ಮಾಡಿದ್ದು, ಪ್ರಕರಣದ ತನಿಖೆ ಮತ್ತು ಮೇಲಾಧಿಕಾರಿಗಳ ಕ್ರಮದ ಹೊರತು ಅವರನ್ನು ವರ್ಗಾವಣೆ ಮಾಡದೇ ಅಲ್ಲಿಯೇ ಮುಂದುವರೆಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗ್ರಾಮದ ನೀರಗಂಟಿಗಳಿಗೆ ಮೇಲಾಧಿಕಾರಿಗಳ ನೆಪವೊಡ್ಡಿ ಲಂಚದ ಹಣ ಪಡೆಯಲು ಮುಂದಾಗಿದ್ಧಾರೆ. ಇದರಲ್ಲಿ ಸ್ಥಳೀಯ ಶಾಸಕರ ಕೈವಾಡವಿದೆ. ಕಾರಣ ಜಿಲ್ಲಾಧಿಕಾರಿಗಳು ವರ್ಗಾವಣೆಯನ್ನು ತಡೆಹಿಡಿದು, ಪಿಡಿಓ ಮೇಲಿನ ಎಲ್ಲಾ ಆರೋಪಗಳು ಮುಕ್ತ ಆಗುವವರೆಗೂ ದಿದ್ದಿಗೆ ಗ್ರಾಮದಲ್ಲಿ ಕರ್ತವ್ಯ ಮುಂದುವರೆಸುವಂತೆ ಸೂಚನೆ ನೀಡಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಮೌನೇಶ್ವರಾಚಾರಿ, ಮಹಮ್ಮದ್ ಹನೀಫ್, ರಾಜಾಮೀಯಾ ಸಾಬ್ ಇತರರು ಇದ್ದರು.

 

Leave a Reply

Your email address will not be published. Required fields are marked *

error: Content is protected !!