ಸಂಸದರುಗಳಾದ ಸಿದ್ದೇಶ್ವರ್- ನಾರಾಯಣ ಸ್ವಾಮಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲು ಮನವಿ

 

ದಾವಣಗೆರೆ: ಕೊರೋನಾದಂತಹ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಹಗಲಿರುಳೆನ್ನದೇ ತಮ್ಮ ಕ್ಷೇತ್ರಗಳಾದ್ಯಂತ ಓಡಾಡಿ ಶ್ರಮಿಸುತ್ತಿರುವ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಇವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕೇಂದ್ರದ ವರಿಷ್ಠರನ್ನು ಪರಿಶಿಷ್ಟರ ಮೋಚಾ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾ.ಪಂ ಸದಸ್ಯ ಆಲೂರು ನಿಂಗರಾಜು, ಕರ್ನಾಟಕದಲ್ಲಿ ಸುಮಾರು 50-60 ಲಕ್ಷ ಎಡಗೈ ಸಮುದಾಯದ ಜನರು ಇದ್ದು, ಅವರನ್ನು ಪ್ರತಿನಿಧಿಸುವ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿಗೆ ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಬದಲಿಗೆ ಸ್ಥಾನಮಾನ ನೀಡಬೇಕು. ಅಲ್ಲದೇ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್‌ರಿಗೂ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದರು.

ದೇಶದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‌ರಾಂರAತಹ ಮಹಾನ್ ನಾಯಕರನ್ನು ಕಡೆಗಣಿಸುತ್ತಾ ಬಂದಿದೆ. ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುವ ಮೋದಿ ನೇತೃತ್ವದ ಸರ್ಕಾರ ತುಳಿತಕ್ಕೆ ಒಳಗಾದ ಎಲ್ಲಾ ಸಮುದಾಯಗಳನ್ನು ತನ್ನೊಂದಿಗೆ ಕರೆದೊಯ್ಯುತ್ತಿದೆ. ಅಲ್ಲದೇ ಸ್ವತಹ ಮೋದಿಯವರು ಅಂಬೇಡ್ಕರ್ ಆದರ್ಶಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನಮ್ಮ ಸಮುದಾಯದ ಗೋವಿಂದ ಕಾರಜೋಳರನ್ನು ಡಿಸಿಎಂ ಮಾಡಿದ್ದಾರೆ ಎಂದು ಹೇಳಿದರು.

ಎಸ್.ಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎನ್.ಗಂಗಾಧರ ಚಿಕ್ಕಬಳ್ಳಾಪುರ ಮಾತನಾಡಿ, ನಮ್ಮ ಮಾದಿಗ ಸಮುದಾಯದ ಬಹುತೇಕರು ಬಿಎಸ್‌ಪಿ ಮತ್ತು ಕಾಂಗ್ರೆಸ್‌ನ್ನು ತೊರೆದು ಬಿಜೆಪಿ ಪರವಾಗಿ ಮತ ಚಲಾವಣೆ ಮಾಡಿದ್ದೇವೆ. ನಮ್ಮ ಪರವಾಗಿ ಪ್ರತಿನಿಧಿಸುವ ನಾರಾಯಣಸ್ವಾಮಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕು. ಅಲ್ಲದೇ ರಾಜ್ಯದಲ್ಲಿನ ನಿಗಮ ಮಂಡಳಿಗಳಿಗೆ ನಮ್ಮ ಸಮುದಾಯದ ಕಾರ್ಯಕರ್ತರಿಗೆ ನೀಡಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಸಿ.ಮೋರ್ಚಾದ ಬೆಂಗಳೂರು ನಗರ ಕೇಂದ್ರದ ಅಧ್ಯಕ್ಷ ಹೂಡಿ ಮಂಜುನಾಥ್, ಡಿ.ಎಸ್.ಜಯಣ್ಣ, ಎಲ್.ಡಿ.ಗೋಣೆಪ್ಪ, ಕೃಷ್ಣಮೂರ್ತಿ, ಜಯಪ್ರಕಾಶ್, ರಾಜು ಶಾಮನೂರು, ಮಂಜು, ರವಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!